ಗೋಣಿಕೊಪ್ಪಲು, ಅ. 7: ಸಿ.ಐ.ಟಿ. ಕಾಲೇಜಿನ ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರತಿಷ್ಠಿತ ಐಎಸ್‍ಓ ಅಂಗೀಕಾರ ಪಡೆದ ಬೆಂಗಳೂರಿನ ಎಬಿಸಿ ಸಂಸ್ಥೆಯಿಂದ ಜಸ್ ಪೇ ಗಾಗಿ ಸಂದರ್ಶನ ಕಾರ್ಯಕ್ರಮ ನಡೆಯಿತು.

ಸಂದರ್ಶನದಲ್ಲಿ ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ ಮತ್ತು ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಶನ್ ವಿಭಾಗದ ಒಟ್ಟು 114 ವಿದ್ಯಾರ್ಥಿಗಳು ಭಾಗವಹಿಸಿ ಅಂತಿಮ ಸುತ್ತಿಗೆ 10 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.

ಜಸ್ ಪೇ ನ ವಿವಿಧ ಹುದ್ದೆಗಳಿಗೆ ನಡೆದ ಸಂದರ್ಶನದಲ್ಲಿ, ಆಯ್ಕೆಯಾದ ವಿದ್ಯಾರ್ಥಿಗಳಿಗೆ ವೇತನ ಶ್ರೇಣಿ ವಾರ್ಷಿಕ ರೂ. 6 ರಿಂದ 12 ಲಕ್ಷವಾಗಿರುತ್ತದೆ. ಈ ಉದ್ಯೋಗ ಕೊಡಗಿನ ವಿದ್ಯಾರ್ಥಿಗಳನ್ನು ಉನ್ನತ ಮಟ್ಟದ ಉದ್ಯೋಗ ದೊರಕಿಸಲು ಸಹಕಾರಿಯಾಗುತ್ತದೆ ಎಂದು ಎ.ಬಿ.ಸಿ ಕಂಪೆನಿಯ ಸಂಸ್ಥಾಪಕ ಮಂಜುನಾಥ್ ಅರಾಧ್ಯ ಮತ್ತು ಸಂಸ್ಥೆಯ ಮುಖ್ಯಸ್ಥ ಕಾಂಡಾಂಡ ಪ್ರಧಾನ್ ನಾಚಪ್ಪ ಹೇಳಿದರು. ಸಂದರ್ಶನದ ಸಂದರ್ಭ ಸಿ.ಐ.ಟಿ. ಕಾಲೇಜಿನ ಪ್ರಾಂಶುಪಾಲ ಡಾ. ಪಿ. ಮಹಬಲೇಶ್ವರಪ್ಪ, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಕೋಟ್ರಂಗಡ ಸುಬ್ಬಯ್ಯ, ಸಂಸ್ಥೆಯ ಉದ್ಯೋಗ ನಿಯೋಜಕ ಅಧಿಕಾರಿ ರಾಘವೇಂದ್ರ ಹಾಗೂ ಉದ್ಯೋಗ ಸಂಯೋಜಕರು ಇದ್ದರು.