ಮಡಿಕೇರಿ, ಅ. 6: ಕಟ್ಟೆಮಾಡುವಿನ ಗ್ರೀನ್ಸ್ ಯುವಕ ಸಂಘದ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಜಿಲ್ಲಾಮಟ್ಟದ ಹಗ್ಗಜಗ್ಗಾಟ, ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಮತ್ತು ವಿವಿಧ ಆಟೋಟಗಳ ಸ್ಪರ್ಧೆಗಳನ್ನು ಗಾಂಧಿ ಜಯಂತಿ ಅಂಗವಾಗಿ ಏರ್ಪಡಿಸಲಾಗಿತ್ತು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಡಿಕೇರಿ ನೆಹರು ಯುವ ಕೇಂದ್ರ, ಜಿಲ್ಲಾ ಹಾಗೂ ತಾಲೂಕು ಯುವ ಒಕ್ಕೂಟ, ಗ್ರಾಮ ಪಂಚಾಯಿತಿ ಮರಗೋಡು ಹಾಗೂ ಆದರ್ಶ ಯುವತಿ ಮಂಡಳಿ ಕಟ್ಟೆಮಾಡು ಇವರ ಆಶ್ರಯದೊಂದಿಗೆ ಕ್ರೀಡಾಕೂಟ ನಡೆಸಲಾಯಿತು. ಕಾರ್ಯಕ್ರಮವನ್ನು ಮಾಜಿ ಸೈನಿಕರಾದ ಕಳ್ಳೀರ ಅಶೋಕ್ ಸುಬ್ಬಯ್ಯ ಉದ್ಘಾಟಿಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರೀನ್ಸ್ ಯುವಕ ಸಂಘದ ಅಧ್ಯಕ್ಷ ಕಟ್ಟೆಮನೆ ರೋಶನ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಡಿಕೇರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಕಾಂಗಿರ ಸತೀಶ್, ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ನವೀನ್ ದೇರಳ, ಬಿ.ಬಿ.ಎಂ.ಪಿ. ಬೆಂಗಳೂರಿನ ಜಂಟಿ ಆಯುಕ್ತ ಪಾಣತ್ತಲೆ ಪಳಂಗಪ್ಪ, ಕಟ್ಟೆಮಾಡುವಿನ ಅಂಚೆ ಇಲಾಖೆ ಉದ್ಯೋಗಿ ಸರಿತ ಧನು ಹಾಗೂ ಬಷೀರ್ ಎಂ.ವೈ. ಆಗಮಿಸಿದ್ದರು. ನಂತರ ವಿವಿಧ ರೀತಿಯ ಆಟೋಟ ಕಾರ್ಯಕ್ರಮಗಳು ಜರುಗಿದವು. ಪುರುಷರ 100 ಮೀಟರ್ ವೇಗದ ಓಟದ ಸ್ಪರ್ಧೆಯಲ್ಲಿ ದೇವಜನ ಪುನಿತ್, ಹೇಮಂತ್ ಸೋಮಯ್ಯ, ಗಗನ್ ಚೇಲಾವರ ಇವರು ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಪಡೆದರೆ, ಮಹಿಳೆಯರ ಸ್ಪರ್ಧೆಯಲ್ಲಿ ಬೊಳ್ಳೂರು ಡಿಂಪಲ್, ಪರ್ಲಕೋಟಿ ಧನ್ಯ, ಬಿದ್ರುಪಣೆ ಜಸ್ಮಿತ ಪೂವಯ್ಯ ಬಹುಮಾನ ಪಡೆದರು.
ಪುರುಷರ 8 ಕಿ.ಮೀ. ಮಿನಿ ಮ್ಯಾರಥಾನ್ ಸ್ಪರ್ಧೆಯಲ್ಲಿ ಮಡಿಕೇರಿಯ ಶ್ರೀಧರ್, ಬಾಣೆಗದ್ದೆ ಸುಜಿತ್, ಸುರೇಶ್, ತೊಂಡಿಯಂಡ ತಿಮ್ಮಯ್ಯ, ಮುಕ್ಕಾಟಿ ಸೋನಾ ಮಾದು 5 ಬಹುಮಾನಗಳನ್ನು ಪಡೆದರು.
ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಅಚ್ಚಕಾಳೇರಾ ಕಾವೇರಪ್ಪ, ಬಿ.ಪಿ. ಪ್ರಸನ್ನಕುಮಾರ್, ಬಡುವಂಡ ಮುತ್ತಪ್ಪ ಬಹುಮಾನ ಪಡೆದರು. ಪುರುಷರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಮದೆನಾಡಿನ ಕಾಫಿ ಲಿಂಕ್ಸ್ ಎ ಹಾಗೂ ಬಿ ತಂಡಗಳು ಪ್ರಥಮ, ದ್ವಿತೀಯ ಸ್ಥಾನ ಪಡೆದವು. ಮಹಿಳೆಯರ ಹಗ್ಗಜಗ್ಗಾಟದಲ್ಲಿ ವೀಣಾ ಫ್ರೆಂಡ್ಸ್ ಅವಂದೂರು ಪ್ರಥಮ, ಇಗ್ಗುತ್ತಪ್ಪ ಫ್ರೆಂಡ್ಸ್ ಕಟ್ಟೆಮಾಡು ದ್ವಿತೀಯ ಸ್ಥಾನ ಪಡೆಯಿತು.
ಸಮಾರೋಪ ಸಮಾರಂಭ
ಸಮಾರೋಪ ಸಮಾರಂಭದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿದ್ರುಪಣೆ ಮೋಹನ್ ಕುಮಾರ್ ವಹಿಸಿದ್ದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ದೇರಳ ನವೀನ್, ಲಿಟ್ಲ್ ಫ್ಲವರ್ ವಿದ್ಯಾಸಂಸ್ಥೆಯ ಪರ್ಲಕೋಟಿ ಸೋನಾ ಪ್ರೀತು, ಕಾಫಿ ಬೆಳೆಗಾರರಾದ ನಂದೇಟಿರಾ ರಾಧ, ಮರಗೋಡು ಗೌಡ ಸಮಾಜದ ಅಧ್ಯಕ್ಷ ಕಟ್ಟೆಮನೆ ಜನಾರ್ಧನ, ಕಾಫಿ ಬೆಳೆಗಾರ ಬಿದ್ರುಪಣೆ ನವೀನ್, ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ನಿರ್ದೇಶಕ ಹಾಗೂ ಅಂತರ್ರಾಷ್ಟ್ರೀಯ ಕ್ರೀಡಾಪುಟ ಡಾ. ಕರ್ಣಯ್ಯನ ಈಶ್ವರ್ ಆಗಮಿಸಿದ್ದರು. ಈಶ್ವರ್ ಅವರನ್ನು ಸಂಘದ ವತಿಯಿಂದ ಚೀನಾದಲ್ಲಿ ನಡೆದ ಮಾಸ್ಟರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಕ್ಕಾಗಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಕಟ್ಟೆಮನೆ ರೋಶನ್, ಉಪಾಧ್ಯಕ್ಷ ಬಿದ್ರುಪಣೆ ಅಯ್ಯಪ್ಪ, ಖಜಾಂಚಿ ಬಿದ್ರುಪಣೆ ವಿಕಾಸ್, ಬಿದ್ರುಪಣೆ ಧ್ರುವ, ಕಟ್ಟೆಮನೆ ಜೀತು, ಪಾರೆಮಜಲು ಸೋನಾ ಮೊದಲಾದವರು ಹಾಜರಿದ್ದರು. ಸಭಾ ಕಾರ್ಯಕ್ರಮ ಹಾಗೂ ಪಂದ್ಯಾಟಗಳ ವೀಕ್ಷಕ ವಿವರಣೆಯನ್ನು ಪೋತಂಡ್ರ ತೇಜಪ್ರಸಾದ್ ಹಾಗೂ ಕಟ್ಟೆಮನೆ ಸೋನಾಜಿತ್ ನೀಡಿದರೆ, ರೋಶ್ನ ಸ್ವಾಗತಿಸಿ, ಪಾಣತ್ತಲೆ ರಾಯ್ ವಂದಿಸಿದರು.