ಮಡಿಕೇರಿ, ಅ.6 : ನಂಜರಾಯಪಟ್ಟಣದ ದಾಸವಾಳ ಹೊಳೆದಂಡೆಯಲ್ಲಿ ನಡೆಯುತ್ತಿರುವ ಮರಳು ದಂಧೆ ವಿರುದ್ಧ ಧ್ವನಿ ಎತ್ತಿದ ಗ್ರಾಮಸ್ಥರ ವಿರುದ್ಧವೆ ಕುಶಾಲನಗರ ಠಾಣಾಧಿಕಾರಿ ದೌರ್ಜನ್ಯ ನಡೆಸಿದ್ದಾರೆ ಎಂದು ಸ್ಥಳೀಯ ಗ್ರಾಮಸ್ಥರಾದ ಸಚಿನ್ ಕುಂಞಪ್ಪ ಹಾಗೂ ಸವಿನ್ ಕುಂಞಪ್ಪ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರುಗಳು, ಮರಳು ದಂಧೆ ವಿರುದ್ಧ ಗ್ರಾಮಸ್ಥರು ದೂರು ನೀಡಿದ ಹಿನ್ನೆಲೆ ಅಕ್ರಮ ಮರಳು ದಂಧೆಗೆ ಬಳಸುತ್ತಿದ್ದ ವಾಹನ ಸಹಿತ ಮರಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆದರೆ, ಯಾರಾದರು ಬಂದು ಠಾಣೆÉಯಲ್ಲಿ ದೂರು ನೀಡುವಂತೆ ಠಾಣಾಧಿಕಾರಿಗಳು ತಿಳಿಸಿದ ಹಿನ್ನೆಲೆಯಲ್ಲಿ ಕುಶಾಲನಗರ ಠಾಣೆಗೆ ತೆರಳಿದ್ದ ತಮ್ಮ ಮೇಲೆ ಹಾಗೂ ತಮ್ಮ ಜೊತೆಯಲ್ಲಿದ್ದ ಸುನಿಲ್ ಎಂಬವರ ಮೇಲೆ ಠಾಣಾಧಿಕಾರಿ ದಬ್ಬಾಳಿಕೆ ನಡೆಸಿದ್ದಾರೆ ಎಂದು ಆರೋಪಿಸಿದರು

ಠಾಣಾಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಶಾಸಕರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಮನವಿ ಸಲ್ಲಿಸುವದಾಗಿ ಅವರು ಹೇಳಿದರು.

ಠಾಣಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಕುಶಾಲನಗರದ ಗಣಪತಿ ದೇವಾಲಯದ ವೃತ್ತದ ಬಳಿ ಪ್ರತಿಭಟನೆ ನÀಡೆಸಲು ಗ್ರಾಮಸ್ಥರು ನಿರ್ಧರಿಸಿರುವದಾಗಿ ಸವಿನ್ ಕುಂಞಪ್ಪ ತಿಳಿಸಿದರು.

ಪೊಲೀಸರಿಂದ ಹಲ್ಲೆ ಆರೋಪ

ನಂಜರಾಯಪಟ್ಟಣ ದಾಸವಾಳ ಗ್ರಾಮದಲ್ಲಿ ನಡೆಯುತ್ತಿದ್ದ ಮರಳುಗಾರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ನೀಡಿದ್ದ ಗ್ರಾಮದ ವಿ.ಕೆ.ಸಚಿನ್ ಮತ್ತು ಸುನಿಲ್ ಎಂಬವರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ. ಮರಳು ದಂಧೆಕೋರರ ಆಮಿಷಕ್ಕೆ ಒಳಗಾಗಿ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ಯುವಕರನ್ನು ಠಾಣೆಗೆ ಕರೆಸಿಕೊಂಡು ಹಲ್ಲೆ ನಡೆಸಿರುವದು ಖಂಡನೀಯ ವಿಚಾರ ಎಂದು ಸೋಮವಾರಪೇಟೆ ತಾ.ಪಂ. ಸದಸ್ಯ ಚಂಗಪ್ಪ ತಿಳಿಸಿದ್ದಾರೆ.

ನಂಜರಾಯಪಟ್ಟಣ ಗ್ರಾಮಪಂಚಾಯಿತಿ ಸದಸ್ಯ ಟಿ.ಕೆ. ಸುಮೇಶ್ ಗ್ರಾಮಗಳಲ್ಲಿ ನಡೆಯುವ ಸಮಾಜ ಬಾಹಿರ ಚಟುವಟಿಕೆಗಳ ವಿರುದ್ಧ ದೂರು ನೀಡಿದ ಯುವಕರ ಮೇಲೆ ಪೊಲೀಸರು ಹಲ್ಲೆ ನಡೆಸಿರುವದು ಇಲಾಖೆ ಮೇಲೆ ನಂಬಿಕೆ ಕಳೆದುಕೊಳ್ಳುವಂತೆ ಮಾಡಿದೆ. ಅಮಾಯಕ ಯುವಕರ ಮೇಲೆ ದರ್ಪ ತೋರಿದ ಬಗ್ಗೆ ವಿಚಾರಣೆಗೊಳಪಡಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಾಗುವದು ಎಂದು ತಿಳಿಸಿದರು.

ಗ್ರಾಮಸ್ಥರಾದ ಶೈಲಜಾ, ಲಲಿತಾ, ತಂಗಮಣಿ, ಟಿ.ಎನ್.ಜಯನ್, ವಿ.ಕೆ. ಸವಿನ್ ಇದ್ದರು.

ಪ್ರಕರಣ ದಾಖಲು

ನಂಜರಾಯಪಟ್ಟಣ ದಾಸವಾಳ ಗ್ರಾಮದಲ್ಲಿ ಪುಷ್ಪಾ ಅಲಿಯಾಸ್ ಪಾರ್ವತಿ ಎಂಬವರು ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಪುಷ್ಪಾ ಮತ್ತು ಜೀವನ್ ಎಂಬವರ ಮೇಲೆ ಗ್ರಾಮಾಂತರ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಈ ಸಂಬಂಧ ಟ್ರ್ಯಾಕ್ಟರ್ ಒಂದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಠಾಣಾಧಿಕಾರಿ ಜೆ.ಇ.ಮಹೇಶ್ ತಿಳಿಸಿದ್ದಾರೆ.

ಮರಳು ಸಾಗಾಟ ಸಂದರ್ಭ ಕಾರೊಂದನ್ನು ತಂದು ಅಡ್ಡಗಟ್ಟಿ ಮರಳನ್ನು ರಸ್ತೆಯಲ್ಲೇ ಸುರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿನ್ ಮತ್ತು ಸುನಿಲ್ ಸೇರಿದಂತೆ ಕೆಲವು ಗ್ರಾಮಸ್ಥರ ಮೇಲೆ ಪುಕಾರು ಹಿನೆÀ್ನಲೆಯಲ್ಲಿ ಮತ್ತೊಂದು ಮೊಕದ್ದಮೆ ದಾಖಲಾಗಿರುವದಾಗಿ ಅವರು ಮಾಹಿತಿ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರಾದ ಕುಮಾರ್ ಹಾಗೂ ಸುಜಿತ್ ಉಪಸ್ಥಿತರಿದ್ದರು.