ಸಿದ್ದಾಪುರ, ಅ.7: ಸಮಸ್ತ ಕೊಡಗು ಜಿಲ್ಲಾ ಜಂಯ್ಯತ್ತುಲ್ ಉಲಮಾ (ಉಲಮಾ ಒಕ್ಕೂಟ) ವತಿಯಿಂದ ನೆಲ್ಲಿಹುದಿಕೇರಿಯ ದಾರುಸ್ಸಲಾಂ ಆವರಣದಲ್ಲಿ ಉಲಮಾ ಉಮರಾ ಸಮ್ಮೇಳನ ನಡೆಯಿತ್ತು. ಎಂ.ಎಂ ಅಬ್ದುಲ್ಲಾ ಪೈಝಿ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮವನ್ನು ಸೈಯ್ಯಿದ್ ಸ್ವಫ್ವಾನ್ ತಂಙಳ್ ಉದ್ಘಾಟಿಸಿ ಮಾತನಾಡಿ, ಸಮುದಾಯದ ನೇತೃತ್ವ ವಹಿಸಿರುವ ಧಾರ್ಮಿಕ ವಿದ್ವಾಂಸರುಗಳನ್ನು ಒಗ್ಗೂಡಿಸಿ ಕರ್ತವ್ಯಗಳ ಕುರಿತು ಅರಿವು ಮೂಡಿಸುವದು, ಸಮುದಾಯವನ್ನು ಸತ್ಯದ ಹಾದಿಯಲ್ಲಿ ಮುನ್ನಡೆಸಲು ಉಲಮಾಗಳನ್ನು ಸಕ್ರಿಯಗೊಳಿಸುವ ಉದ್ಧೇಶದಿಂದ ಸಮ್ಮೇಳನವನ್ನು ನಡೆಸಲಾಗುತ್ತಿದೆ ಎಂದರು.
ಮುಖ್ಯ ಭಾಷಣಗಾರರಾಗಿ ಅಲವಿ ದಾರಿಮಿ ಕುಯಿಮಣ್ಯ ಮಾತನಾಡಿ, ಸಮಾಜದಲ್ಲಿ ಆತ್ಮೀಯ ಶೋಷಣೆಗಳು ನಡೆಯುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿ ಆತ್ಮೀಯ ಶೋಷಣೆಗಳ ಬಗ್ಗೆ ಮುಸ್ಲಿಂ ಸಮುದಾಯವು ಮನದಟ್ಟು ಮಾಡಬೇಕಾಗಿದೆ ಎಂದು ಸಲಹೆಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಪಂಡಿತರು ಮಾತನಾಡಿ, ಧಾರ್ಮಿಕ ವಿದ್ವಾಂಸರು ನಿಸ್ವಾರ್ಥತೆಯಿಂದ ಕರ್ತವ್ಯ ನಿಭಾಯಿಸುವದರಿಂದ ಮಾತ್ರ ಧರ್ಮ ಮಾರ್ಗದಲ್ಲಿ ಕೊಂಡೊಯ್ಯಲು ಸಾಧ್ಯವೆಂದು ಅಭಿಪ್ರಾಯಪಟ್ಟರು. ಶ್ರೇಷ್ಠ ಪಂಡಿತರು ಒಳಗೊಂಡ ಸಮಸ್ತ ಕೊಡಗು ಜಿಲ್ಲಾ ಜಂಯ್ಯತ್ತುಲ್ ಉಲಮಾದ ಅಧೀನದಲ್ಲಿ ಅನೇಕ ಮದ್ರಸಗಳು ಅರೇಬಿಕ್ ಕಾಲೇಜು, ಬಡ ಮತ್ತು ಅನಾಥ ಹೆಣ್ಣು ಮಕ್ಕಳ ಅಶ್ರಯ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ ಎಂದರು. ಇಸ್ಲಾಂ ಧರ್ಮದ ಆದರ್ಶ ದಂತೆ ಮಹಲ್ ಜಮಾಅತ್ಗಳನ್ನು ಒಂದು ಗೂಡಿಸುವದು, ಧಾರ್ಮಿಕ ವಿಧಿ ವಿಧಾನಗಳನ್ನು ಸಂರಕ್ಷಿಸುವದು, ಸಮಾಜ, ಸಮುದಾಯ ಹಾಗೂ ರಾಷ್ಟ್ರದ ಕ್ಷೇಮಕ್ಕಾಗಿ ಧಾರ್ಮಿಕ ಸೌಹಾರ್ದತೆಯನ್ನು ಭದ್ರಗೊಳಿಸುವದು, ಸಮುದಾಯ ಮಕ್ಕಳನ್ನು ಶೈಕ್ಷಣಿಕವಾಗಿ ಮುಂದೆ ತಂದು ಜಾತ್ಯತೀತತೆಯ ಬಗ್ಗೆ ಮನವರಿಕೆ ಮಾಡಿಕೊಡುವದು ಸಂಘಟನೆಯ ಗುರಿಯಾಗಿದೆ ಎಂದರು.
ಈ ಸಂದರ್ಭ ಜಿಲ್ಲೆಯ ವಿವಿಧೆಡೆಯಿಂದ
ನೆಲ್ಲಿಹುದಿಕೇರಿಯಲ್ಲಿ ಉಲಮಾ ಉಮರಾ ಸಮ್ಮೇಳನ
(ಮೊದಲ ಪುಟದಿಂದ) ನೂರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಎಸ್.ಕೆ.ಜೆ.ಎಮ್.ಸಿ.ಸಿ ಕಾರ್ಯದರ್ಶಿ ಎಂ. ಅಬ್ದುರ್ರಹ್ಮಾನ್ ಮುಸ್ಲಿಯಾರ್, ವೈ.ಎಮ್. ಉಮರ್ ಫೈಝಿ, ಉಸ್ಮಾನ್ ಫೈಝಿ ಅಶ್ರಫ್ ಫೈಝಿ, ಇಕ್ಬಾಲ್ ಮುಸ್ಲಿಯಾರ್, ತಮ್ಲೀಖ್ ಧಾರಿಮಿ ಹಾಗೂ ಇತರರು ಹಾಜರಿದ್ದರು.