ಕುಶಾಲನಗರ, ಅ. 6: ಮಂಗಳೂರು ವಿಶ್ವಾವಿದ್ಯಾನಿಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊಡವ ಸಾಂಸ್ಕøತಿಕ ಅಧ್ಯಯನ ಪೀಠವನ್ನು ಇನ್ನೂ ಎರಡು ತಿಂಗಳ ಒಳಗಾಗಿ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿಗೆ ಸ್ಥಳಾಂತರಿಸ ಲಾಗುವದು ಎಂದು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ. ಕೆ.ಎಲ್. ಭೈರಪ್ಪ ತಿಳಿಸಿದ್ದಾರೆ.ಅವರು ಅಳುವಾರ ಸ್ನಾತಕೋತ್ತರ ಕೇಂದ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೊಡವ ಅರಿವೋಲೆ ಎನ್ನುವ ಶೀರ್ಷಿಕೆಯಡಿ ಕೊಡವ ಭಾಷೆಯ ಕುರಿತು ಕೊಡವಾಸಕ್ತ ವಿದ್ಯಾರ್ಥಿಗಳಿಗೆ ಕೊಡವ ಭಾಷೆಯ ಸಾಹಿತ್ಯ, ಚರಿತ್ರೆ, ಸಂಸ್ಕøತಿ, ಭಾಷಾ ಪ್ರಾವಿಣ್ಯತೆಯ ಬಗ್ಗೆ ಅಧ್ಯಯನಕ್ಕೆ ಇದು ಅನುಕೂಲವಾಗಲಿದೆ. ಈಗಾಗಲೇ ಕೊಡವ ಅರಿವೋಲೆ ಕರ್ತೃಗಳಾದ ಪ್ರೊ.ಬೊವ್ವೇರಿಯಂಡ ಉತ್ತಯ್ಯ ಮತ್ತು ಬೊವ್ವೇರಿಯಂಡ ತಂಗಮ್ಮ ಉತ್ತಯ್ಯ ಅವರುಗಳು ಈ ಬಗ್ಗೆ ಸಂಶೋಧನೆ ಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಸುಮಾರು 13 ಸಾವಿರ ಕೊಡವ ಪದಗಳಿರುವ ಅರ್ಥಕೋಶವನ್ನು ನೀಡಿದ್ದಾರೆ. ಕೊಡವ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಕೊಡವ ನಿಘಂಟು ಮಹತ್ತರ ಹೆಜ್ಜೆಯಾಗಿದೆ ಎಂದರು.

ಪ್ರಾರಂಭದಲ್ಲಿ ಅಳುವಾರ ಸ್ನಾತಕೋತ್ತರ ಕೇಂದ್ರಕ್ಕೆ ಸ್ಥಳಾಂತರ ಗೊಳಿಸಲು ನಿರ್ಧಾರ ಮಾಡಿದ್ದ ಅಧ್ಯಯನ ಪೀಠವನ್ನು ಹಲವರ ಆಗ್ರಹದ ಮೇರೆಗೆ ಮಡಿಕೇರಿ ಎಫ್‍ಎಂಸಿ ಕಾಲೇಜಿಗೆ ಸ್ಥಳಾಂತರಿಸಲು ಚಿಂತನೆ ಹರಿಸಲಾಗಿದೆ ಎಂದ ಭೈರಪ್ಪ ಅವರು, ಈ ನಿಟ್ಟಿನಲ್ಲಿ ಕಾರ್ಯ ಯೋಜನೆ ಸಿದ್ಧವಾಗುತ್ತಿದೆ ಎಂದರು.

ಕೊಡವ ಭಾಷೆಯಲ್ಲಿ ಡಿಪ್ಲೋಮ ತರಗತಿ ಪ್ರಾರಂಭಿಸುವ ಬಗ್ಗೆ ವಿವಿ ಚಿಂತನೆ ಹರಿಸಿದೆ

(ಮೊದಲ ಪುಟದಿಂದ) ಎಂದು ತಿಳಿಸಿರುವ ಭೈರಪ್ಪ, ಈ ಮೂಲಕ ಆಸಕ್ತ ವಿದ್ಯಾರ್ಥಿಗಳಿಗೆ ವಿಶೇಷ ಅವಕಾಶ ಕಲ್ಪಿಸಲಾಗುವದು ಎಂದರು.

ಎಫ್‍ಎಂಸಿ ಕಾಲೇಜಿನಲ್ಲಿ ನಡೆದ ವಂಚನೆ ಹಗರಣದ ಬಗ್ಗೆ ಈಗಾಗಲೆ ತನಿಖೆ ಅಂತಿಮ ಘಟ್ಟದಲ್ಲಿದೆ ಎಂದು ಪ್ರತಿಕ್ರಿಯಿಸಿದ ಪ್ರೊ.ಭೈರಪ್ಪ, ಪ್ರಕರಣದ ಬಗ್ಗೆ ಆಂತರಿಕ ಮಟ್ಟದಲ್ಲಿ ವಿಚಾರಣೆ ನಡೆದಿದೆ. ಸಿಂಡಿಕೇಟ್‍ನಲ್ಲಿ ಚರ್ಚೆ ನಡೆದಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಷಕರು ವಿದ್ಯಾರ್ಥಿಗಳಿಂದ ಮಾಹಿತಿ ಪಡೆಯಲಾಗಿದೆ ಎಂದರು.

ಅಳುವಾರ ಸ್ನಾತಕೋತ್ತರ ಕೇಂದ್ರ ಕಳೆದ 3 ವರ್ಷಗಳ ಅವಧಿಯಲ್ಲಿ ಮಹತ್ತರ ಬೆಳವಣಿಗೆ ಕಂಡಿದ್ದು ಹಲವು ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಆಂತರಿಕ ಸಂಪನ್ಮೂಲದಿಂದ ರೂ. 55 ಕೋಟಿ ವ್ಯಯಿಸಲಾಗಿದ್ದು, ಸರಕಾರದಿಂದ ಮಾತ್ರ ಇದುವರೆಗೆ ಕೇವಲ ರೂ. 1 ಕೋಟಿ ಮಾತ್ರ ಬಿಡುಗಡೆಗೊಂಡಿರುವದಾಗಿ ಮಾಹಿತಿ ನೀಡಿದರು.ಕೇಂದ್ರದಲ್ಲಿ ಪ್ರಸಕ್ತ 550 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು 800 ವಿದ್ಯಾರ್ಥಿಗಳಿಗೆ ಬೇಕಾದ ವ್ಯವಸ್ಥೆ ಕಲ್ಪಿಸಲಾಗಿದೆ. ಸದ್ಯದಲ್ಲಿಯೇ ಎರಡು ಹೆಚ್ಚುವರಿ ವಿಭಾಗಗಳನ್ನು ತೆರೆಯಲು ಉದ್ದೇಶಿಸಲಾಗಿದ್ದು, ಗ್ರಾಮೀಣ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಪಡೆಯುವ ಸದವಕಾಶ ಒದಗಿಸಲಾಗಿದ್ದು ಇದರ ಸದುಪಯೋಗ ಪಡೆಯಬೇಕೆಂದು ತಿಳಿಸಿದರು.

ಈ ಸಂದರ್ಭ ಕೇಂದ್ರದ ನಿರ್ದೇಶಕರಾದ ಪ್ರೊ.ಪಿ.ಎಲ್.ಧರ್ಮ, ಡಾ.ಕೆ.ಎಸ್.ಚಂದ್ರಶೇಖರಯ್ಯ, ಡಾ.ಕೆ.ಕೆ.ಧರ್ಮಪ್ಪ ಮತ್ತು ವಿಭಾಗಗಳ ಮುಖ್ಯಸ್ಥರುಗಳು ಇದ್ದರು.