ಮಡಿಕೇರಿ, ಅ. 7: ಕೊಡವ ಭಾಷಾ ಸಾಹಿತ್ಯದ ಅಮರ ಕವಿಯಾಗಿ ಗುರುತಿಸಲ್ಪಡುವ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿಯ 150ನೇ ಜನ್ಮೋತ್ಸವದ ಪ್ರಯುಕ್ತ ಅಖಿಲ ಕೊಡವ ಸಮಾಜದ ಸಹಯೋಗದೊಂದಿಗೆ ವೀರಾಜಪೇಟೆ ಕೊಡವ ಸಮಾಜದಲ್ಲಿ ತಾ. 11 ರಂದು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೀರಾಜಪೇಟೆ ಕೊಡವ ಸಮಾಜ ಮತ್ತು ಹರದಾಸ ಅಪ್ಪಚ್ಚಕವಿ ಜನ್ಮೋತ್ಸವ ಸಮಿತಿಯ ಅಧ್ಯಕ್ಷ ವಾಂಚಿರÀ ಟಿ. ನಾಣಯ್ಯ, ಅಖಿಲ ಕೊಡವ ಸಮಾಜದಿಂದ ವಿವಿಧ ಕೊಡವ ಸಮಾಜಗಳ ಸಹಕಾರದೊಂದಿಗೆ ಅಪ್ಪಚ್ಚಕವಿಯ ಜನ್ಮೋತ್ಸವವನ್ನು ತಿಂಗಳಿಗೊಂದು ಕಾರ್ಯಕ್ರಮದಂತೆ ವರ್ಷಪÀÇರ್ತಿ ಆಚರಿಸಲು ಉದ್ದೇಶಿಸಲಾಗಿದ್ದು, ಇದರ ಭಾಗÀವಾಗಿ ವೀರಾಜಪೇಟೆ ಕೊಡವ ಸಮಾಜದಲ್ಲಿ ಅರ್ಥಪೂರ್ಣ ಕಾರ್ಯಕ್ರಮ ನಡೆಸಲಾಗುವದೆಂದರು.

ತಾ. 11 ರಂದು ಬೆಳಗ್ಗೆ 9.30 ಗಂಟೆಗೆ ವೀರಾಜಪೇಟೆಯ ದೊಡ್ಡಟ್ಟಿ ಚೌಕಿಯಲ್ಲಿರುವ ಅಮರಕವಿ ಅಪ್ಪಚ್ಚ ಕವಿಯ ಪÀÅತ್ಥಳಿಗೆ ಮುಲ್ಲೇಂಗಡ ಶಂಕರಿ ಪೆÀÇನ್ನಪ್ಪ ಮಾಲಾರ್ಪಣೆ ಮಾಡುವದರೊಂದಿಗೆ ಕೊಡವ ಸಮಾಜದವರೆಗೆ ಆಕರ್ಷಕ ಮೆರವಣಿಗೆ ನಡೆಸಲಾಗುತ್ತದೆ. ತಳಿಯತಕ್ಕಿ ಬೊಳಕ್‍ನೊಂದಿಗೆ ನೂರೈವತ್ತಕ್ಕೂ ಹೆಚ್ಚಿನ ಮಹಿಳೆಯರು, ಕೊಡವ ಸಾಂಪ್ರದಾಯಿಕ ಉಡುಪಿನೊಂದಿಗೆ ಪÀÅರುಷರು, ಶಾಲಾ ಮಕ್ಕಳ ಬ್ಯಾಂಡ್, ಕೊಂಬು ಕೊಟ್ಟ್ ವಾಲಗಗಳು ಮೆರವಣಿಗೆಯ ಕಳೆ ಹೆಚ್ಚಿಸಲಿದೆಯೆಂದು ತಿಳಿಸಿದರು.

ಮೆರವಣಿಗೆಯ ಬಳಿಕ ಕೊಡವ ಸಮಾಜದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮವನ್ನು ಅಖಿಲ ಕೊಡವ ಸಮಾಜದ ಅಧ್ಯಕ್ಷÀ ಮಾತಂಡ ಸಿ.ಮೊಣ್ಣಪ್ಪ ಉದ್ಘಾಟಿಸಲಿದ್ದಾರೆ ಎಂದು ವಾಂಚಿರ ನಾಣಯ್ಯ ಹೇಳಿದರು. ಈ ಸಂದರ್ಭ ಹರದಾಸ ಅಪ್ಪಚ್ಚಕವಿ ರಚಿಸಿರುವ ಕೀರ್ತನೆಗಳನ್ನು ಡಾ. ಕಾಳಿಮಾಡ ಕೆ. ಶಿವಪ್ಪ ಹಾಡಲಿದ್ದು, ಪತ್ರಕರ್ತ ಹಾಗೂ ಸಾಹಿತಿ ಐತಿಚಂಡ ರÀಮೇಶ್ ಉತ್ತಪ್ಪ ಕವಿಯ ಬದುಕು ಸಾಹಿತ್ಯದ ಬಗ್ಗೆ ಮಾತನಾಡಲಿದ್ದಾರೆ. ಅತಿಥಿಗಳಾಗಿ ಅಖಿಲ ಕೊಡವ ಸಮಾಜದ ಕಾರ್ಯಾಧ್ಯಕ್ಷ ಪ್ರೊ. ಇಟ್ಟಿರ ಕೆ. ಬಿದ್ದಪ್ಪ, ಅಪ್ಪಚ್ಚಕವಿ ಜನ್ಮೋತ್ಸವ ಸಮಿತಿ ಸಂಚಾಲಕ ಅಡ್ಡಂಡ ಸಿ. ಕಾರ್ಯಪ್ಪ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಾಧಕರಿಗೆ ಸನ್ಮಾನ: ಸಮಾರಂಭದಲ್ಲಿ ಸಾಹಿತಿಗಳಾದ ಪರದಂಡ ಜಿ. ಚಂಗಪ್ಪ, ಡಾ. ಕಾಳಿಮಾಡ ಕೆ. ಶಿವಪ್ಪ, ಕುಲ್ಲಚಂಡ ಚಿಪ್ಪಿ ಕಾರ್ಯಪ್ಪ, ಮುಲ್ಲೇಂಗಡ ಶಂಕರಿ ಪೆÀÇನ್ನಪ್ಪ ಮತ್ತು ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಅವರನ್ನು ಗೌರವಿಸಲಾಗುವದು. ಈ ಸಂದರ್ಭ ತ್ರಿವೇಣಿ ಶಾಲಾ ಮಕ್ಕಳಿಂದ ಹರದಾಸ ಅಪ್ಪಚ್ಚಕವಿಯ ನಾಟಕಗಳನ್ನು ಆಧರಿಸಿದ ಕಿರುನಾಟಕ ಮತ್ತು ಮಹಾಕವಿಯ ಆಯ್ದ ಕವನಗಳ ಗಾಯನವನ್ನು ಆಯೋಜಿಸಲಾಗಿದೆ ಎಂದು ವಾಂಚಿರ ನಾಣಯ್ಯ ಮಾಹಿತಿ ನೀಡಿದರು.

ವೃತ್ತಕ್ಕೆ ಕವಿ ಹೆಸರು: ಹರದಾಸ ಅಪ್ಪಚ್ಚಕವಿಯ 150ನೇ ಜನ್ಮೋತ್ಸವದ ಅಂಗವಾಗಿ ವೀರಾಜಪೇಟೆಯ ದೊಡ್ಡಟ್ಟಿ ಚೌಕಿ ಹೆಸರಿನ ಬದಲಾಗಿ, ಮಹಾಕವಿಯ ಪÀÅತ್ಥಳಿ ಸ್ಥಾಪಿಸಿರುವ ಈ ವೃತ್ತಕ್ಕೆ ‘ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ವೃತ್ತ’ ಎಂದು ನಾಮಕರಣ ಮಾಡುವಂತೆ ಪಟ್ಟಣ ಪಂಚಾಯ್ತಿಗೆ ಮನವಿ ಮಾಡಲಾಗುವದು. ಇದರೊಂದಿಗೆ ಮಡಿಕೇರಿಯ ಜಿಲ್ಲಾ ಕೇಂದ್ರ ಗ್ರಂಥಾಲಯಕ್ಕೆ, ನಾಪೆÀÇೀಕ್ಲುವಿನ ಪ್ರಥಮ ದರ್ಜೆ ಕಾಲೆÉೀಜಿಗೆ ಮತ್ತು ಮಂಗಳೂರು ವಿವಿ ಕೊಡವ ಅಧ್ಯಯನ ಕೇಂದ್ರಕ್ಕೆ ಅಪ್ಪಚ್ಚಕವಿಯ ಹೆಸರನ್ನು ನಾಮಕರಣ ಮಾಡುವಂತೆ ಕೋರಿಕೊಳ್ಳಲಾಗುವದು ಎಂದರು.

ಸುದ್ದಿಗೋಷ್ಠಿಯಲ್ಲಿ ವೀರಾಜಪೇಟೆ ಕೊಡವ ಸಮಾಜದ ಅಪ್ಪಚ್ಚಕವಿ ಜನ್ಮೋತ್ಸವ ಸಮಿತಿ ಸಂಚಾಲಕ ಅಜ್ಜಿನಿಕಂಡ ಮಹೇಶ್ ನಾಚಯ್ಯ, ವೀರಾಜಪೇಟೆ ಕೊಡವ ಸಮಾಜದ ಗೌರವ ಕಾರ್ಯದರ್ಶಿ ಕುಲ್ಲಚಂಡ ಜಯಾ ಪÀÇಣಚ್ಚ ಹಾಗೂ ನಿರ್ದೇಶಕರಾದ ಕೊಂಗಾಂಡ ಟಾಟ ನಾಣಯ್ಯ ಉಪಸ್ಥಿತರಿದ್ದರು.