ನಾಪೆÇೀಕ್ಲು, ಅ. 8: ವಿಯಾಟ್ನಂನಿಂದ ಕಾಳು ಮೆಣಸನ್ನು ಆಮದು ಮಾಡಿಕೊಂಡು ಗೋಣಿಕೊಪ್ಪದಲ್ಲಿ ಕೊಡಗಿನ ಕಾಳುಮೆಣಸಿನೊಂದಿಗೆ ಮಿಶ್ರಣಮಾಡಿ ಮಾರಾಟ ಮಾಡಿದವರ ವಿರುದ್ಧ ಸಂಬಂಧಿಸಿದವರು ಕೂಡಲೇ ಕಾನೂನು ಕ್ರಮಕೈಗೊಳ್ಳಬೇಕೆಂದು ನಾಪೆÇೀಕ್ಲುವಿನ ಜಯ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಬಿದ್ದಾಟಂಡ ಜಿನ್ನು ನಾಣಯ್ಯ ಹಾಗೂ ಬೆಳೆಗಾರರಾದ ಪಟ್ರಪಂಡ ಮೋಹನ್ ಮುದ್ದಯ್ಯ, ನೆಡುಮಂಡ ಕೃತಿ, ಕೇಟೋಳಿರ ರೆಮ್ಮಿ ಅಯ್ಯಪ್ಪ ಆಗ್ರಹಿಸಿದ್ದಾರೆ.ನಾಪೆÇೀಕ್ಲು ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸಿಎಂಸಿ ರೈತರಿಗೆ ಸಹಕಾರ ನೀಡುವ ಉದ್ದೇಶದಿಂದ ಸ್ಥಾಪಿತವಾಗಿರುವ ಸಂಸ್ಥೆಯಾಗಿದೆ. ಆದರೆ ಚುನಾಯಿತ ಪ್ರತಿನಿಧಿಗಳೇ ಇದರಲ್ಲಿ ಶಾಮಿಲಾಗಿರುವ ಶಂಕೆಯಿದ್ದು, ಇವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕಾರಣ ಕಾಳುಮೆಣಸನ್ನು ಆಮದು ಮಾಡಿಕೊಂಡು ಜಿಲ್ಲೆಯ ಬೆಳೆಗಾರರನ್ನು ವಂಚಿಸಲಾಗಿದೆ. ಇದಕ್ಕೆ ಮೂಲ ಕಾರಣರಾದ ನಿತಿನ್ ಷಾ ಎಂಬ ವ್ಯಾಪಾರಿಯನ್ನು ಬಂಧಿಸಬೇಕು. ಮಾಜಿ ಎಂ.ಎಲ್.ಸಿ ಅರುಣ್ ಮಾಚಯ್ಯ ಮಧÀ್ಯ ಪ್ರವೇಶಿಸಿ ಎಪಿಎಂಸಿ ಆಡಳಿತ ಮಂಡಳಿಯನ್ನು ಉಚ್ಚಾಟಿಸಬೇಕು. ಅಡಿಕೆ ಬೆಳೆಗೆ ತೆಗೆದುಕೊಂಡ ಕ್ರಮವನ್ನು ಕಾಳುಮೆಣಸಿಗೂ ಬಳಸಬೇಕು. ಕಾಳು ಮೆಣಸಿಗೆ ಹಿಂದಿನ ದರ ನೀಡಬೇಕು ಎಂದು ಆಗ್ರಹಿಸಿದ ಅವರುಗಳು ಸಂಸದ ಪ್ರತಾಪ್ ಸಿಂಹ ಬೆಳೆಗಾರರತ್ತ ಕಾಳಜಿ ವಹಿಸಬೇಕು. ಚುನಾವಣೆ ಸಂದರ್ಭದಲ್ಲಿ ಸರಕಾರ ನೀಡಿದ ಆಶ್ವಾಸನೆಯನ್ನು ಈಡೇರಿಸಬೇಕು ಎಂದು ಒತ್ತಾಯಿಸಿದ ಕಾಳು ಮೆಣಸಿಗೆ ಸಂಬಂಧಿಸಿದ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲ ನೀಡುವದಾಗಿ ತಿಳಿಸಿದರು.