ಕೂಡಿಗೆ, ಅ. 8 : ಶಿರಂಗಾಲ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವು ಸಮೀಪದ ಚಿಕ್ಕನಾಯಕನಹೊಸಳ್ಳಿ ಗ್ರಾಮದಲ್ಲಿ ನಡೆಯಿತು.
ಗಾಂಧಿ ಜಯಂತಿಯ ದಿನದಂದು ಹಮ್ಮಿಕೊಂಡಿದ್ದ ಎನ್‍ಎಸ್‍ಎಸ್ ಶಿಬಿರವನ್ನು ಕಾಲೇಜು ಅಭಿವೃದ್ಧಿ ಉಪಾಧ್ಯಕ್ಷ ಎನ್.ಬಿ.ಮಹೇಶ್ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿ, ಗಾಂಧೀಜಿಯವರ ಕನಸು ಹಳ್ಳಿಗಳ ಉದ್ದಾರ ಮಾಡುವದು. ಹಾಗಾಗಿ ಗ್ರಾಮಗಳ ಅಭಿವೃದ್ಧಿಯಲ್ಲಿ ಎನ್‍ಎಸ್‍ಎಸ್ ಒಂದು ಭಾಗವಾಗಿದ್ದು, ಎನ್‍ಎಸ್‍ಎಸ್ ಮೂಲಕ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಹಾಗೂ ಯುವಜನತೆ ಸಂಘಟನಾ ಮನೋಭಾವ ಬೆಳೆಸಿಕೊಂಡು ಸೇವಾ ಮನೋಭಾವನೆಯನ್ನು ರೂಢಿಸಿಕೊಳ್ಳಬೇಕು ಎಂದರು.
ಪ್ರೌಢಶಾಲಾ ವಿಭಾಗದ ಹಿರಿಯ ಸಹಶಿಕ್ಷಕÀ ಸೋಮಯ್ಯ ಮಾತನಾಡಿ, ಉತ್ತಮ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು, ಸಮಾನತೆ, ಸಹೋದರತ್ವ, ಭಾತೃತ್ವದ ಗುಣಗಳನ್ನು ಮೈಗೂಡಿಸಿಕೊಳ್ಳಲು ಇಂತಹ ಎನ್‍ಎಸ್‍ಎಸ್ ಶಿಬಿರಗಳು ಅನುಕೂಲವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಸುರೇಶ್‍ಕುಮಾರ್ ವಹಿಸಿದ್ದರು.
ಶಿಬಿರಾಧಿಕಾರಿಗಳಾದ ಹಂಡ್ರಂಗಿ ನಾಗರಾಜ್ ಶಿಬಿರಾರ್ಥಿಗಳಿಗೆ ಎನ್‍ಎಸ್‍ಎಸ್‍ನ ರೂಪುರೇಷೆ ಹಾಗೂ ಮಹತ್ವದ ಬಗ್ಗೆ ತಿಳಿಸಿದರು.
ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಸುಚಿತ್ರ ಬಾಯಿ, ಕುಮಾರ್, ಸಹ ಶಿಬಿರಾಧಿಕಾರಿಗಳಾದ ಹೆಚ್.ಆರ್.ಶಿವಕುಮಾರ್, ಕೆ.ಎ.ವೀಣಾ, ಎಚ್.ಸಿ.ಹೇಮಲತಾ, ಗಣೇಶ್ ಇದ್ದರು. ಕಾವ್ಯಶ್ರೀ ನಿರೂಪಿಸಿ, ಪಲ್ಲವಿ ಸ್ವಾಗತಿಸಿ, ಪೂಜಾ ವಂದಿಸಿದರು.