ಸೋಮವಾರಪೇಟೆ, ಅ. 8: ಮಠ ಮಾನ್ಯಗಳು ಜಾತಿ, ಮತ, ಧರ್ಮದ ಭೇದವಿಲ್ಲದೇ ಎಲ್ಲರನ್ನೂ ಸಮಾನವನ್ನಾಗಿ ಕಾಣುವ ಜತೆಗೆ ಎಲ್ಲರಿಗೂ ವಿದ್ಯಾಭ್ಯಾಸ ನೀಡುವ ಮೂಲಕ ಶಿಕ್ಷಣ ಕ್ರಾಂತಿ ಮಾಡುತ್ತಿವೆ ಎಂದು ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಅವರು ಅಭಿಪ್ರಾಯಿಸಿದರುಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಮತ್ತು ಶ್ರೀ ಕುಮಾರÉೀಶ್ವರ ಜಯಂತಿ ಮಹೋತ್ಸವ ಸಮಿತಿ ಹುಬ್ಬಳ್ಳಿ ಇದರ ಸಂಯುಕ್ತ ಆಶ್ರಯದಲ್ಲಿ ಕೊಡ್ಲಿಪೇಟೆಯ ಭದ್ರಮ್ಮ ಮಹಂತಪ್ಪ ಕಲ್ಯಾಣ ಮಂಟಪದಲ್ಲಿ ಹಾನಗಲ್ಲ ಶ್ರೀ ಕುಮಾರ ಮಹಾ ಶಿವಯೋಗಿಗಳ 150 ನೇ ಜನ್ಮ ದಿನಾಚರಣೆ ಅಂಗವಾಗಿ ಆಯೋಜಿಸ ಲಾಗಿದ್ದ ದತ್ತಿ ಉಪನ್ಯಾಸದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಮಹಾರಾಷ್ಟ್ರದ ಅಕ್ಕಲಕೋಟೆ ಮಠಾಧೀಶರಾದ ಶ್ರೀ ಚನ್ನಬಸವ ದೇವರು ಸ್ವಾಮೀಜಿ ಮಾತನಾಡಿ, 12 ನೇ ಶತಮಾನದಲ್ಲಿ ಅಂಧಾನುಕರಣೆ, ಜಾತೀಯತೆ ತೊಡೆದು ಹಾಕಲು ಬಸವೇಶ್ವರರು ಪ್ರಯತ್ನಿಸಿ ಸಾಕಷ್ಟು ಸಫಲರಾಗಿದ್ದರೂ ಸಹ 19 ನೇ ಶತಮಾನದಲ್ಲೂ ಸಮಾಜದಲ್ಲಿ ಇದರ ಕರಿ ನೆರಳು ಆವರಿಸಿದ್ದು ಅಂದು ಶ್ರೀ ಕುಮಾರ ಶಿವಯೋಗಿಗಳು ಈ ವ್ಯವಸ್ಥೆಯ ವಿರುದ್ದ ತಿರುಗಿ ನಿಂತು ಸಮಾನತೆ ತರಲು ಹೋರಾಟ ನಡೆಸಿದರು ಎಂದು ನೆನಪಿಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಮುದ್ದಿನಕಟ್ಟೆ ಮಠಾಧೀಶರಾದ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಬೆಳೆಗಾವಿ ಜಿಲ್ಲೆಯ ಹಿರೇಮಠದ ಮಠಾಧೀಶರಾದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬಾಗಲಕೋಟೆ ಬೂದಿಹಾಳದ ಮಠಾಧೀಶರಾದ ಶ್ರೀ ಸಂಗಮೇಶ್ವರ ಸ್ವಾಮೀಜಿ, ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಖಜಾಂಚಿ ಡಿ. ಬಿ. ಸೋಮಪ್ಪ ಉಪಸ್ಥಿತರಿದ್ದರು.