ಕೂಡಿಗೆ, ಅ. 8: ತೊರೆನೂರು ಗ್ರಾಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕೃಷಿ ಸಾಹಿತ್ಯ ಸಮ್ಮೇಳನವನ್ನು ತೊರೆನೂರಿನಲ್ಲಿ ನಡೆಸಲು ತೀರ್ಮಾನ ಕೈಗೊಂಡಿರುವ ದರಿಂದ ಇದರ ಪೂರ್ವಭಾವಿ ಸಭೆಯು ಅಧ್ಯಕ್ಷ ಲೋಕೇಶ್ ಸಾಗರ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ರೈತರಿಗೋಸ್ಕರ ವರ್ಷದಲ್ಲಿ ಒಂದು ದಿನ ಸಾಹಿತ್ಯ, ಕಲೆ, ಗ್ರಾಮೀಣ ಕ್ರೀಡೆ, ಆಧುನಿಕ ಕೃಷಿ ಪದ್ಧತಿ, ಕೃಷಿ ವಿಮೆ ಸೇರಿದಂತೆ ಕೃಷಿಗೆ ಸಂಬಂಧಪಟ್ಟ ವಿಚಾರ, ವಿನಿಮಯ ಹಾಗೂ ಗ್ರಾಮೀಣ, ಪುರಾತನ ಗೀತೆಗಳು ಸೇರಿದಂತೆ ವಿವಿದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವದು, ಸಾಹಿತ್ಯವು ಕೃಷಿಯೊಂದಿಗೆ ಸೇರ್ಪಡೆಗೊಂಡಿರುವ ದರಿಂದ ಈ ಗ್ರಾಮದಲ್ಲಿ ಕೃಷಿ ಸಾಹಿತ್ಯ ಸಮ್ಮೇಳನವನ್ನು ನಡೆಸಲು ನಿರ್ಧರಿಸಲಾಗಿದೆ.

ಗ್ರಾ.ಪಂ. ಆವರಣದಲ್ಲಿ ನಡೆದ ಸಭೆಯಲ್ಲಿ ಕೃಷಿ ಸಾಹಿತ್ಯ ಸಮ್ಮೇಳನ ಮಾಡುವುದರ ಬಗ್ಗೆ ತೊರೆನೂರು ಗ್ರಾ.ಪಂ ವ್ಯಾಪ್ತಿಯ ಎಲ್ಲಾ ಗ್ರಾಮಸ್ಥರು ಕೃಷಿ ಸಾಹಿತ್ಯ ಸಮ್ಮೇಳನ ನಡೆಸುವದಕ್ಕೆ ಸಹಕಾರ ನೀಡುವದಾಗಿ ಭರವಸೆ ನೀಡಿದರು. ಇದರನ್ವಯ ಸಭೆಯಲ್ಲಿ ವಿವಿದ ವಿಷಯಗಳ ಬಗ್ಗೆ ಹಾಗೂ ಕಾರ್ಯಕ್ರಮದ ರೂಪುರೇಶೆಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ಮಾಡಲಾಯಿತು. ಆಹಾರ ಸಮಿತಿ, ಕ್ರೀಡಾ ಸಮಿತಿ, ಅಲಂಕಾರ ಸಮಿತಿ, ವಸ್ತು ಪ್ರದರ್ಶನ ಸಮಿತಿ ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಿ ಜವಾಬ್ದಾರಿ ವಹಿಸಲಾಯಿತು.

ಈ ಸಂದರ್ಭ ತೊರೆನೂರು ಗ್ರಾ.ಪಂ ಅಧ್ಯಕ್ಷ ದೇವರಾಜ್, ಸದಸ್ಯರಾದ ಮಹೇಶ್, ತೊರೆನೂರು ಸಹಕಾರ ಸಂಘದ ನಿರ್ದೇಶಕರಾದ ಕೃಷ್ಣೇಗೌಡ, ಹೆಚ್.ಬಿ.ಚಂದ್ರಪ್ಪ, ಜಗದೀಶ್, ಬಸವೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಟಿ.ಕೆ.ಪಾಂಡುರಂಗ, ನೀರು ಬಳಕೆದಾರರ ಸಂಘದ ಅಧ್ಯಕ್ಷ ವೆಂಕಟಾಚಲ ಸೇರಿದಂತೆÀ ಟಿ.ಕೆ. ದೇವರಾಜ್, ಟಿ.ಆರ್.ಮಂಜೇಶ್, ಚಿಕ್ಕಯ್ಯ, ಶಿವಾನಂದ, ಟಿ.ಡಿ.ಪ್ರಕಾಶ್ ಸಂಘಟನೆಗಳ ಪ್ರಮುಖರು ಮತ್ತು ತೊರೆನೂರು ಗ್ರಾ.ಪಂನ ಅಭಿವೃದ್ಧಿ ಅಧಿಕಾರಿ ಸಂತೋಷ್, ಕ.ಸಾ.ಪ ಜಿಲ್ಲಾ ನಿರ್ದೇಶಕ ನಾಗರಾಜ್‍ಶೆಟಿ,್ಟ ಕೆ.ಕೆ. ಅಶ್ವಥ್‍ಕುಮಾರ್ ಇದ್ದರು.