ಗೋಣಿಕೊಪ್ಪಲು, ಅ. 9: ಜನರ ಭರವಸೆಗಳನ್ನು ಈಡೇರಿಸಲಾಗದ ಕಾಂಗ್ರೆಸ್ ಸರಕಾರ ಸುಳ್ಳಿನ ಬಣ್ಣಗಳನ್ನು ಜನರ ಮುಖಕ್ಕೆ ಹಚ್ಚುತ್ತಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಟೀಕಿಸಿದರು. ಭಾರತೀಯ ಜನತಾ ಪಕ್ಷದ ವತಿಯಿಂದ ನಡೆದ ಅಮ್ಮತ್ತಿ, ನಾಲ್ಕೇರಿ, ಕಾರ್ಮಾಡು, ಕೆ. ಬಾಡಗ, ಶ್ರೀಮಂಗಲ, ಶೆಟ್ಟಿಗೇರಿ, ಬಿರುನಾಣಿ, ಹುದಿಕೇರಿ ಬೂತ್ ಮಟ್ಟದ ಕಾರ್ಯ ಕರ್ತರ ಸಭೆಯಲ್ಲಿ ಮಾತನಾಡಿದರು.ಕೊಡಗಿನಲ್ಲಿ ರಸ್ತೆಗಳ ಅಭಿವೃದ್ಧಿ ಕಂಡಿಲ್ಲ. ಬಜೆಟ್‍ನಲ್ಲಿ ಘೋಷಣೆ ಮಾಡಿದ ಅನುದಾನ ಕೊಡಗಿನ ಅಭಿವೃದ್ಧಿಗೆ ದೊರೆತಿಲ್ಲ ಎಂದು ಹೇಳಿದರು. ಗೌರಿ ಲಂಕೇಶ್ ಹತ್ಯೆಯನ್ನು ಬಲಪಂಥಿಯರ ಹೆಗಲಿಗೆ ಕಟ್ಟಿ ಪ್ರಧಾನಿಯನ್ನು ದ್ವೇಷಿಸುತ್ತಿರುವ ಇವರ ನಡವಳಿಕೆ ಖಂಡನೀಯ. ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯತೆಯನ್ನು ಮುಚ್ಚಲು ಈ ರೀತಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ಶಾಸಕ ಅಪ್ಪಚ್ಚುರಂಜನ್ ಮಾತನಾಡಿ, ರಾಜ್ಯ ಅಭಿವೃದ್ಧಿಗೆ ಬಿ.ಜೆ.ಪಿ. ಸರಕಾರದ ಅಗತ್ಯವಿದೆ. ಜಿಲ್ಲೆಯ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿ, ಕುಡಿಯುವ ನೀರು, ಶೌಚಾಲಯ, ವಸತಿ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳನ್ನು ನೇರವಾಗಿ ಜನರಿಗೆ ತಲುಪಿಸುವ ಕಾರ್ಯ ಬಿ.ಜೆ.ಪಿ. ಸರಕಾರದಿಂದ ಆಗಿದೆ. ಕಳೆದ ನಾಲ್ಕೂವರೆ ವರ್ಷ ಗಳಿಂದ ಕಾಂಗ್ರೆಸ್ ಶೂನ್ಯ ಸಾಧನೆ ಯನ್ನು ಕಂಡಿದೆ ಎಂದು ಹೇಳಿದರು. ಜಿಲ್ಲಾ ಬಿ.ಜೆ.ಪಿ. ಅದ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿ, ಮೋದಿಯ ನಡಿಗೆಯೊಂದಿಗೆ ಹೆಜ್ಜೆ ಹಾಕುವದೆ ಬಿ.ಜೆ.ಪಿ. ಕಾರ್ಯಕರ್ತರ ಗುರಿಯಾಗಿದೆ. ಅವರ ಕನಸುಗಳು, ಜನರ ಮೇಲಿಟ್ಟಿರುವ ಭರವಸೆಗಳು ಮತ್ತು ಚಿಂತನೆಗಳನ್ನು ಈಡೇರಿಸುವದು ಪ್ರತಿಯೊಬ್ಬ ಬಿ.ಜೆ.ಪಿ. ಕಾರ್ಯಕರ್ತನ ಕರ್ತವ್ಯ ಎಂದು ಹೇಳಿದರು.

ಈ ಸಂದರ್ಭ ಪೊನ್ನಂಪೇಟೆ ಸ್ಥಾನೀಯ ಸಮಿತಿ ಅಧ್ಯಕ್ಷ ಮುದ್ದಿಯಡ ಮಂಜು, ತಾಲೂಕು ಬಿ.ಜೆ.ಪಿ. ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ, ಯುವ ಮೋರ್ಚ ಅಧ್ಯಕ್ಷ ಕುಟ್ಟಂಡ ಅಜಿತ್ ಕರುಂಬಯ್ಯ, ಆರ್.ಎಂ.ಸಿ. ಅಧ್ಯಕ್ಷ ಸುವಿನ್ ಗಣಪತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಬಿನ್ ದೇವಯ್ಯ, ಐನಂಡ ಜಪ್ಪು, ತಾ.ಪಂ. ಉಪಾಧ್ಯಕ್ಷ ನೆಲ್ಲಿರ ಚಲನ್, ತಾಲೂಕು ಫೆಡರಲ್ ಉಪಾಧ್ಯಕ್ಷ ಮದು ದೇವಯ್ಯ, ಯುವ ಮೋರ್ಚ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಪ್ಪಣ್ಣ ಉಪಸ್ಥಿತರಿದ್ದ