ಸಿದ್ದಾಪುರ, ಅ. 11: ಸಿದ್ದಾಪುರ ಪಟ್ಟಣ ವ್ಯಾಪ್ತಿಯಲ್ಲಿ ನಿಲ್ಲಿಸಿದ್ದ ವಾಹನಗಳಿಂದ ಪೆಟ್ರೋಲ್ ಹಾಗೂ ಡೀಸಲ್ ಕಳವು ಮಾಡುತ್ತಿರುವ ಆರೋಪದಡಿಯಲ್ಲಿ ವಾಹನವೊಂದನ್ನು ಸಿದ್ದಾಪುರ ಪೋಲಿಸರು ಮುಟ್ಟುಗೋಲು ಹಾಕಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸಿದ್ದಾಪುರ ಪಟ್ಟಣ ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿ ಕೆಲವು ವಾಹನ ಮಾಲೀಕರು ತಮ್ಮ ವಾಹನಗಳನ್ನು ರಾತ್ರಿ ಸಮಯದಲ್ಲಿ ನಿಲ್ಲಿಸಿ ಮನೆಗೆ ತೆರಳುತ್ತಿದ್ದರು. ರಾತ್ರಿ ಸಮಯದಲ್ಲಿ ನಿಲ್ಲಿಸುತ್ತಿದ್ದ ವಾಹನಗಳ ಟ್ಯಾಂಕಿನ ಬೀಗ ಮುರಿದು ಕಳ್ಳರು ಕೈಚಳಕದಿಂದ ಡೀಸಲ್ ಅನ್ನು ಪೈಪ್ ಮೂಲಕ ಎಳೆದು ಕಳ್ಳತನ ಮಾಡುತ್ತಿದ್ದರು ಎನ್ನಲಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಸಿದ್ದಾಪುರದ ಮಡಿಕೇರಿ ರಸ್ತೆ, ಮೈಸೂರು ರಸ್ತೆ ಈ ಭಾಗದ ನಿವಾಸಿಗಳಾದ ಹಮೀದ್ ಜೋಂಡರಿ ಎಂಬವರ ವಾಹನಗಳಿಂದ ಡೀಸಲ್ ಕಳವು ಆಗಿದೆ ಎಂದು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತಾ|| 10ರಂದು ಮೈಸೂರು ರಸ್ತೆಯಲ್ಲಿ ವಾಹನವೊಂದರಲ್ಲಿ ಡೀಸೆÀಲ್ ಟ್ಯಾಂಕಿನಿಂದ ಡೀಸೆÀಲ್ ಕಳ್ಳತನ ಮಾಡುತ್ತಿದ್ದಾರೆಂದು ಪೊಲೀಸರಿಗೆ ಬಂದ ಮಾಹಿತಿ ಮೇರೆಗೆ ರಾತ್ರಿ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭ ಕಳ್ಳರು ಜೀಪು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆÉ. ಈ ಸಂಬಂಧ ಸ್ಥಳದಲ್ಲಿದ್ದ ಬೋಲೇರೊ ಜೀಪು (ಕೆಎ 12 - ಎನ್ 8365) ವಶಪಡಿಸಿಕೊಂಡು ಪೋಲಿಸರು ತನಿಖೆ ನಡೆಸುತ್ತಿದ್ದಾರೆ.