ಮಡಿಕೇರಿ, ಅ. 10: ಗೋಣಿಕೊಪ್ಪಲು ಎ.ಪಿ.ಎಂ.ಸಿಯಲ್ಲಿ ಇಬ್ಬರು ಪ್ರಭಾವೀ ವ್ಯಾಪಾರೋದ್ಯ ಮಿಗಳು ವಿಯೆಟ್ನಾಂನಿಂದ ಆಮದು ಮಾಡಿದ ಕರಿಮೆಣಸನ್ನು ಮಾರಾಟ ಮಾಡಿದ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು ಜಿಲ್ಲೆಯಲ್ಲಿ ರಾಜಕೀಯ ಹಗರಣವಾಗಿಯೂ ಪರಿಣಮಿಸುವತ್ತ ದಾಪುಗಾಲು ಹಾಕಿದೆ. ಈ ನಡುವೆ ಭ್ರಷ್ಟಾಚಾರ ನಿಗ್ರಹ ದಳ (ಎ.ಸಿ.ಬಿ.) ಈ ಕುರಿತು ಎ.ಪಿಎಂ.ಸಿ.ಯ ನಾಮನಿರ್ದೇಶಿತ ಮೂವರು ಸದಸ್ಯರು ನೀಡಿದ ಲಿಖಿತ ದೂರನ್ನು ಸ್ವೀಕರಿಸಿದೆ. ಎ.ಸಿ.ಬಿ ತನಿಖೆ ನಡೆಸಬೇಕಾದರೆ ಭ್ರಷ್ಟಾಚಾರ ಪ್ರಕರಣವಿದ್ದರೆ ಮಾತ್ರ ಕೈಗೆತ್ತಿಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಪ್ರಾರಂಭಿಕವಾಗಿ ಕೊಡಗು ಪೊಲೀಸರು ತನಿಖೆ ನಡೆಸುವಂತೆ ಜಿಲ್ಲಾ ಎಸ್.ಪಿ ರಾಜೇಂದ್ರ ಪ್ರಸಾದ್ ಅವರಿಗೆ ತಿಳಿಸಲಾಗಿದೆ. ಜಿಲ್ಲಾ ಪೊಲೀಸರು ತನಿಖೆ ನಡೆಸಿ ಪ್ರಕರಣದಲ್ಲಿ ಭ್ರಷ್ಟಾಚಾರ ಅಂಶಗಳು ಕಂಡುಬಂದರೆ ಎ.ಸಿ.ಬಿ.ಗೆ ವರದಿ ನೀಡುವಂತೆ ತನಿಖೆಯನ್ನು ಹಸ್ತಾಂತರಿಸುವಂತೆ ತಿಳಿಸಿದ್ದು ಆ ವರದಿಯನ್ನು ಆಧರಿಸಿ ಮುಂದಿನ ತನಿಖೆಯನ್ನು ಎ.ಸಿ.ಬಿ ಕೈಗೊಳ್ಳುತ್ತದೆ ಎಂದು ಎ.ಸಿ.ಬಿ ರಾಜ್ಯ ಐಜಿಪಿ ಕೆ.ವಿ.ಶರತ್ ಚಂದ್ರ “ಶಕ್ತಿ”ಗೆ ಮಾಹಿತಿಯಿತ್ತಿದ್ದಾರೆ.

“ಶಕ್ತಿ” ಗೆ ತಿಳಿದುಬಂದಂತೆ ಈಗಾಗಲೇ ಗೋಣಿಕÉೂಪ್ಪಲು ಪೊಲೀಸರು ಈ ಸಂಬಂಧ ತನಿಖೆ ಪ್ರಾರಂಭಿಸಿದ್ದಾರೆ. ಪ್ರಮುಖ ವ್ಯಾಪಾರಿಗಳಾದ ರೋಸ್ ಮೇರಿ ಇಂಟರ್‍ನ್ಯಾಷನಲ್‍ನ ಮಾಲೀಕ ಶಿವಕುಮಾರ್ ಬಂಕ, ಕಾವೇರಿ ಎಂಟರ್ ಪ್ರೈಸಸ್‍ನ ಮಾಲೀಕ ಜತೀನ್ ಷಾ ಹಾಗೂ ಜೈ ಬಾಲಾಜಿ ಭಂಡಾರ ಸಂಸ್ಥೆ ಮಾಲೀಕÀ ಸೌರವ್ ಕುಮಾರ್ ಬಂಕ, ಇವರುಗಳು ಆಮದು ಮಾಡಿಕೊಂಡ ಕರಿಮೆಣಸು ವಿನಲ್ಲಿ ರಾಸಾಯನಿಕ ಮಿಶ್ರಣದ ವಿಷಯುಕ್ತ ಪದಾರ್ಥಗಳು ಒಳಗೊಂಡು ಉತ್ಪನ್ನವಾಗಿವೆ ಎಂದು ಆರೋಪಿಸಲಾಗಿದ್ದ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆಮದಾದ ಕರಿಮೆಣಸಿನ ನಮೂನೆ ಯನ್ನು ಗೋಣಿಕೊಪ್ಪಲು ಪೊಲೀಸರು ಈಗಾಗಲೇ ಮೈಸೂರಿನ ಸಿ.ಎಫ್.ಟಿ. ಆರ್.ಐ ಸಂಶೋಧನಾ ಸಂಸ್ಥೆಗೆ ಕಳುಹಿಸಿದ್ದಾರೆ. ಈ ಕರಿಮೆಣಸುವಿನಲ್ಲಿ ಏನೆಲ್ಲ ವಿಷಯುಕ್ತ ಅಂಶಗಳಿವೆ ಎಂಬದು ಅಧಿಕೃತವಾಗಿ ಪತ್ತೆಯಾದ ಬಳಿಕ ಈ ದಿಸೆಯಲ್ಲಿ ಪೊಲೀಸರು ಕ್ರಮ ಕೈಗೊಳ್ಳಲಿರುವದಾಗಿ ತಿಳಿದುಬಂದಿದೆ. ಅಲ್ಲದೆ, ಎ.ಸಿ.ಬಿ.ಗೆ ದೂರು ನೀಡಿದ್ದ ಗೋಣಿಕೊಪ್ಪಲು ಎ.ಪಿ.ಎಂ.ಸಿ ನಾಮ ನಿರ್ದೇಶಿತ ಸದಸ್ಯರುಗಳಾದ ಅಜ್ಜಿಕುಟ್ಟಿರ ನರೇನ್ ಕಾರ್ಯಪ್ಪ,

(ಮೊದಲ ಪುಟದಿಂದ) ಮಾಳೇಟಿರ ಕೆ. ಬೋಪಣ್ಣ ಹಾಗೂ ಕಾಡೇಮಾಡ ಜಿ.ಕುಸುಮ ಇವರುಗಳು ತಮ್ಮ ಆರೋಪದಲ್ಲಿ ಆಮದಾದ ವಿಯೆಟ್ನಾಂನ ಕಳಪೆ ಗುಣಮಟ್ಟದ ಕರಿಮೆಣಸಿನೊಂದಿಗೆ ಕೊಡಗಿನ ಕರಿಮೆಣಸನ್ನು ಕಲಬೆರಕೆ ಮಾಡಿ ಮಾರಾಟಗೊಳಿಸಿದ ಕುರಿತೂ ಪೊಲೀಸ್ ತಂಡ ತನಿಖೆ ನಡೆಸುತ್ತಿದೆ.ಅಲ್ಲದೆ ಈ ರೀತಿ ಅಕ್ರಮ ವ್ಯವಹಾರ ನಡೆಸಿದ ವ್ಯಾಪಾರಸ್ಥರಿಗೆ ಎ.ಪಿ..ಎಂ.ಸಿ ದಾಸ್ತಾನು ಮಳಿಗೆಯಲ್ಲಿ ಆಮದಾದ ಕರಿಮೆಣಸನ್ನು ದಾಸ್ತಾನುಗೊಳಿಸಿಲು ಅವಕಾಶ ನೀಡಿದ ಹಿನ್ನೆಲೆಯಲ್ಲಿನ ವ್ಯಕ್ತಿಗಳ ಕೈವಾಡದ ಕುರಿತೂ ಪೊಲೀಸರು ತನಿಖೆ ನಡೆಸುತ್ತಿರುವದಾಗಿ ಗೊತ್ತಾಗಿದೆ. ಪೊಲೀಸ್ ತನಿಖೆ ಸಂದರ್ಭ ಕರಿಮೆಣಸು ವ್ಯವಹಾರದಲ್ಲಿ ಭ್ರಷ್ಟಾಚಾರ ನಡೆದಿರುವದು ಮೇಲ್ನೋಟಕ್ಕೆ ಸಾಬೀತಾದರೆ ಮಾತ್ರ ಇಡೀ ಪ್ರಕರಣದ ಹೆಚ್ಚಿನ ತನಿಖೆ ಹಾಗೂ ಕ್ರಮಕ್ಕಾಗಿ ಜಿಲ್ಲಾ ಪೊಲೀಸ್ ಇಲಾಖೆ ಎ.ಸಿ.ಬಿ ಗೆ ಹಸ್ತಾಂತರ ಗೊಳಿಸಲಿರುವದಾಗಿಯೂ ಮಾಹಿತಿ ಲಭ್ಯವಾಗಿದೆ. ಜಿಲ್ಲೆಯ ಬೆಳೆಗಾರರ ಹೋರಾಟ ಸಂಘಗಳಿಂದ ಆರೋಪಿಸಿರುವ ಪ್ರಕಾರ ವ್ಯಾಪಾರಸ್ಥರು ಆಮದು ಸುಂಕವನ್ನು ಉಳಿಸಲಿಕ್ಕೋಸ್ಕರ ವಿಯೆಟ್ನಾಂನಿಂದ ನೇರವಾಗಿ ಕರಿಮೆಣಸನ್ನು ಆಮದು ಮಾಡಲಿಲ್ಲ. ಬದಲಾಗಿ ಸಾರ್ಕ್ ದೇಶಗಳ ನಡುವೆ ಆಮದು ಸುಂಕವಿಲ್ಲದೆ ವ್ಯವಹಾರ ನಡೆಸುವ ಅವಕಾಶವನ್ನು ಬಳಸಿಕೊಂಡು ಸಾರ್ಕ್ ದೇಶಗಳಲ್ಲಿ ಒಂದಾದ ಶ್ರೀಲಂಕಾ ಮೂಲಕ ಕರಿಮೆಣಸನ್ನು ಆಮದು ಮಾಡಿಕೊಂಡು ಸುಂಕವನ್ನು ಉಳಿಸಲಾಗಿದೆ ಎಂದು ಆರೋಪಿಸಲಾಗಿದೆ. ಆದರೆ, ಈ ಬಗ್ಗೆ ಚೆಟ್ಟಳ್ಳಿಯ ತ್ರಿಶೂಲ್ ಎಸ್ಟೇಟ್‍ನ ಬಿ.ಬಿ. ಮಾದಯ್ಯ ಎಂಬ ಬೆಳೆಗಾರರು ಬರೆದ ಪತ್ರಕ್ಕೆ ಕೇಂದ್ರ ವಾಣಿಜ್ಯ ಇಲಾಖಾ ಅಧೀನ ಕಾರ್ಯದರ್ಶಿ ಎಂ.ಬಿ. ಬ್ಯಾನರ್ಜಿ ಅವರು ಸ್ಪಷ್ಟವಾಗಿ ಉತ್ತರಿಸಿದ್ದಾರೆ.

ಕಳೆದ ಒಂದು ವರ್ಷದಿಂದಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಧಿಕ ಪ್ರಮಾಣzಲ್ಲಿ ಕರಿಮೆಣಸು ಸರಬರಾಜಾಗುತ್ತಿದೆ.ಇದರಿಂದಾಗಿ ವಿಶ್ವ ಮಟ್ಟದಲ್ಲಿ ಕರಿಮೆಣಸು ಬೆಲೆ ಕ್ಷೀಣಗೊಳ್ಳುತ್ತಿದೆ.

ವಿಯೆಟ್ನಾಂನ ಕಳಪೆ ಗುಣಮಟ್ಟದ ಕರಿಮೆಣಸನ್ನು ಶ್ರೀಲಂಕಾ ಮೂಲಕ ಆಮದು ಮಾಡಿಕೊಂಡಿರುವ ಕುರಿತು ಕೇಂದ್ರ ವಾಣಿಜ್ಯ ಇಲಾಖೆಗೆ ರಫ್ತುದಾರರು ಹಾಗೂ ಬೆಳೆಗಾರರಿಂದ ಪುಕಾರುಗಳು ಬರುತ್ತಲೇ ಇವೆ. ಆದರೆ ಕಳೆದ 3 ವರ್ಷಗಳ ಅಂಕಿ ಅಂಶ ಪರಿಶೀಲನೆ ಬಳಿಕ ಶ್ರೀಲಂಕಾದಲ್ಲಿ ಈ ಅವಧಿಯಲ್ಲಿ ಕರಿಮೆಣಸು ಉತ್ಪಾದನೆ ಮತ್ತು ಆಮದು ಪ್ರಮಾಣ ತೀರಾ ಕಡಿಮೆಯಿದೆ.ಈ ಹಿನ್ನೆಲೆಯನ್ನು ಅವಲೋಕಿಸುವಾಗ ಶ್ರೀಲಂಕಾ ಮೂಲಕ ವಿಯಟ್ನಾಂನ ಕರಿಮೆಣಸು ಭಾರತಕ್ಕೆ ಆಮದಾಗಿರುವ ಸಾಧ್ಯತೆ ತೀರ ಕಡಿಮೆ ಎಂದು ಕೇಂದ್ರ ವಾಣಿಜ್ಯ ಇಲಾಖೆ ತನ್ನ ಪತ್ರÀದಲ್ಲಿ ಸ್ಪಷ್ಟಪಡಿಸಿದೆ.

ಆದರೂ ಈ ವಿಚಾರದ ಕುರಿತು ಅಬ್ಕಾರಿ ಮತ್ತು ಸುಂಕ ಇಲಾಖೆಗೆ ಹಾಗೂ ಆಹಾರ ಸುರಕ್ಷತೆ..ಗುಣಮಟ್ಟ ಪ್ರಾಧಿಕಾರ (ಜಿಚಿssi) ದÀ ಇಲಾಖೆಗಳು ಸೂಕ್ತ ಪರಿಶೀಲನೆ ನಡೆಸಿ ಆಮದು ವ್ಯವಹಾರದ ಕುರಿತು ಪತ್ತೆ ಮಾಡುವಂತೆ ಸೂಚಿಸಿರುವ ದಾಗಿಯೂ ಅಧೀನ ಕಾರ್ಯದರ್ಶಿ ಭರವಸೆಯಿತ್ತಿದ್ದಾರೆ.

ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಗೋಣಿಕೊಪ್ಪಲು ಎ.ಪಿ.ಎಂಸಿ ಅಧ್ಯಕ್ಷÀ ಸುವಿನ್ ಗಣಪತಿ ಅವರು ತಾವು ಅಧಿಕಾರ ವಹಿಸಿಕೊಂಡು 5 ತಿಂಗಳಾಗಿದೆಯಷ್ಟೆ. ಈ ವ್ಯಾಪಾರಸ್ಥರು ನಡೆÀಸಿದ ವ್ಯವಹಾರ ತಮ್ಮ ಗಮನಕ್ಕೆ ಬಂದ ಕೂಡಲೇ ನಿರ್ದೇಶಕರ ಸಭೆ ಕರೆದು ಚರ್ಚಿಸಲಾಗಿದೆ. ಆರೋಪವಿರುವ ವ್ಯಾಪಾರಸ್ಥರಿಗೂ ನೋಟೀಸ್ ನೀಡಲಾಗಿದೆ. ಅಲ್ಲದೆ, ಬೆಂಗಳೂರಿನ ರಾಜ್ಯ ಕೃಷಿ ಮಾರಾಟ ಇಲಾಖೆಗೆ ಪತ್ರ ಬರೆದ ಕರಿಮೆಣಸು ಆಮದನ್ನು ರದ್ದು ಪಡಿಸುವಂತೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡುವಂತೆ ಕೋರಲಾಗಿದೆ. ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರಿಗೂ ಪತ್ರ ಬರೆದು ಅಮದು ರದ್ದುಪಡಿಸಲು ಕೇಂದ್ರದ ಗಮನಕ್ಕೆ ತರುವಂತೆ ಕೋರಲಾಗಿದೆ ಎಂದು ಸುವಿನ್ ಗಣಪತಿ ಸಮಜಾಯಿಷಿಕೆಯಿತ್ತಿದ್ದಾರೆ.