ಕೂಡಿಗೆ, ಅ. 11: 29ನೇ ದಕ್ಷಿಣ ವಲಯ ಕಿರಿಯರ ಅಥ್ಲೆಟಿಕ್ ಚಾಂಪಿಯನ್ ಶಿಪ್‍ನ ಮಿಡ್ಲೆ ರಿಲೆ ಸ್ಪರ್ಧೆಯಲ್ಲಿ ಕೂಡಿಗೆ ಕ್ರೀಡಾಶಾಲೆಯ ಎ.ಆರ್. ಇರ್ಫಾನ್ ಖಾನ್ ಪ್ರಥಮ ಸ್ಥಾನಗಳಿಸಿ ನೂತನ ದಾಖಲೆ ಮಾಡಿದ್ದಾನೆ.

ಕೇರಳದ ತಿರುವನಂತಪುರಂನ ಶ್ರೀ ಚಂದ್ರಶೇಖರ್ ನಾಯರ್ ಕ್ರೀಡಾಂಗಣದಲ್ಲಿ ನಡೆದ 29ನೇ ದಕ್ಷಿಣ ವಲಯ ಕಿರಿಯರ ಅಥ್ಲೆಟಿಕ್ ಚಾಂಪಿಯನ್ ಶಿಪ್‍ನ 16 ವರ್ಷದ ವಯೋಮಿತಿಯ ಬಾಲಕರ ಮಿಡ್ಲೆ ರಿಲೆಯಲ್ಲಿ ಸ್ಪರ್ಧಿಸಿ 1:58.48 ನಿಮಿಷಗಳಲ್ಲಿ ಓಡುವದರೊಂದಿಗೆ ಎ.ಆರ್. ಇರ್ಫಾನ್ ಖಾನ್ ತನ್ನ ಹಳೆ ದಾಖಲೆ 2:00.34 ನಿಮಿಷಗಳನ್ನು ಮುರಿದು ನೂತನ ಕೂಟ ದಾಖಲೆ ಮಾಡಿ ಶಾಲೆಗೆ ಕೀರ್ತಿ ತಂದಿದ್ದಾನೆ.

ಅಲ್ಲದೆ, ಬಾಲಕಿಯರ 600 ಮೀಟರ್ ಓಟದಲ್ಲಿ ಕ್ರೀಡಾಶಾಲೆಯ ಕ್ರೀಡಾಪಟು ಸಿ.ಟಿ. ಗಾನವಿ ಕಂಚಿನ ಪದಕ ಗಳಿಸಿರುತ್ತಾರೆ. ಹಾಗೂ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ದಸರಾ ಕ್ರೀಡಾಕೂಟದ ಬಾಲಕಿಯರ ವಿಭಾಗದ 3 ಕಿ.ಮೀ. ಓಟದ ಸ್ಪರ್ಧೆಯಲ್ಲಿ ಸಿ.ಎಂ. ರಾಶಿ ದ್ವಿತೀಯ ಸ್ಥಾನ ಗಳಿಸಿದ್ದಾಳೆ. ವಿಜೇತ ಕ್ರೀಟಾಪಟುಗಳನ್ನು ಕೂಡಿಗೆ ಕ್ರೀಡಾಶಾಲೆಯ ಮುಖ್ಯೋಪಾಧ್ಯಾಯಿನಿ ಕುಂತಿ ಬೋಪಯ್ಯ, ತರಬೇತುದಾರ ಅಂಥೋಣಿ ಡಿಸೋಜ ಅಭಿನಂದಿಸಿದರು.