ಪೊನ್ನಂಪೇಟೆ, ಅ. 11: ಪೊನ್ನಂಪೇಟೆ ಪಟ್ಟಣದ ಮೂರು ಭಾಗಗಳಲ್ಲಿ ವೈಜ್ಞಾನಿಕ ಕಸದ ತೊಟ್ಟಿಗಳ ಅಳವಡಿಕೆ, ಕಿವಿಕೇಳದ ವರಿಗೆ ಶ್ರವಣ ಯಂತ್ರ ನೀಡಿಕೆ ಹಾಗೂ ಅರ್ಹರಿಗೆ ಸನ್ಮಾನ ಇತ್ಯಾದಿ ಉತ್ತಮ ಸೇವೆಯಲ್ಲಿ ಗೋಣಿಕೊಪ್ಪ ರೋಟರಿ ತೊಡಗಿದೆ ಎಂದು ಜಿಲ್ಲಾ ಗವರ್ನರ್ ಸುರೇಶ್ ಚಂಗಪ್ಪ ಶ್ಲಾಘಿಸಿದರು. ಇತ್ತೀಚೆಗೆ ಅಧಿಕೃತ ಭೇಟಿ ನೀಡಿದ ಅವರು ಗೋಣಿಕೊಪ್ಪ ಹಾಗೂ ಪೊನ್ನಂಪೇಟೆಯಲ್ಲಿ ರೋಟರಿ ಹಮ್ಮಿಕೊಂಡ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾತನಾಡಿದರು. ರೋಟರಾಕ್ಟ್ ಸಂಸ್ಥೆಯ ವಿದ್ಯಾರ್ಥಿ ಸದಸ್ಯರನ್ನೂ ಭೇಟಿ ಮಾಡಿದ ಅವರು, ವಿದ್ಯಾರ್ಥಿಗಳು ರೋಟರಿ ಸಂಸ್ಥೆಯ ಮುಂದಿನ ಸರದಾರರೆಂದರು.

ರೋಟರಿ ನಿಧಿಗೆ ದೇಣಿಗೆ ನೀಡಿದ ಸದಸ್ಯರಿಗೆ ಮಾಜಿ ಅಧ್ಯಕ್ಷ ಮೋಹನ್ ಚಿನ್ನ ಹಾಗೂ ಬೆಳ್ಳಿ ನಾಣ್ಯಗಳನ್ನು ವಿತರಿಸಿದರು. ಸಹಾಯಕ ಗವರ್ನರ್ ಮಹೇಶ್ ನಾಲ್ವಾಡೆ ಮಾತನಾಡಿ ಅಂತ ರ್ರಾಷ್ಟ್ರೀಯ ನಿಧಿ ಬಳಸಿ ಯೋಜನೆ ರೂಪಿಸಲು ಸೂಚಿಸಿದರು. ಜೆಡ್ ಎಲ್. ಹರಿಶಂಕರ್, ಬೀಟಾ ಲಕ್ಷ್ಮಣ್ ಸಂಪಾದಕತ್ವದಲ್ಲಿ ಹೊರತಂದ ಬುಲೆಟಿನ್ ಬಿಡುಗಡೆ ಮಾಡಿದರು.

ಅಧ್ಯಕ್ಷ ವಿಜಯ್ ನೇತೃತ್ವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಡಾ. ಕೆ.ಕೆ. ಶಿವಪ್ಪ, ಬಿ.ಎ. ಚಂಗಪ್ಪ, ಉಂಬಾೈ, ಅಧ್ಯಾಪಕಿ ರುಕ್ಮಿಣಿ ಇವರುಗಳನ್ನು ಸನ್ಮಾನಿಸಲಾಯಿತು. ಶ್ರವಣದೋಷವಿದ್ದ ಪುಟ್ಟಯ್ಯ ಎಂಬವರಿಗೆ ಶ್ರವಣ ಯಂತ್ರ ನೀಡಲಾಯಿತು. ಕಾರ್ಯದರ್ಶಿ ದಿಲನ್ ಚಂಗಪ್ಪ ವಂದಿಸಿದರು.