ಮಡಿಕೇರಿ,ಅ.10 : ಕೊಡವ, ಗೌಡ, ಬಿಲ್ಲವ, ಹಿಂದೂ, ಮುಸ್ಲಿಂ ಎಂಬ ಜಾತೀಯತೆಯ ಬೇಧ-ಭಾವ ಮರೆತು ಎಲ್ಲರೂ ಒಂದಾಗಬೇಕೆಂದು ಮಕ್ಕಂದೂರುವಿನಲ್ಲಿ ಗೌಡ ಸಮಾಜದ ವತಿಯಿಂದ ಏರ್ಪಡಿಸಿದ್ದ ಕೈಲ್ ಮೂಹೂರ್ತ ಸಂತೋಷಕೂಟದಲ್ಲಿ ಪಾಲ್ಗೊಂಡಿದ್ದ ಗಣ್ಯರು ಅಭಿಮತ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ ಅವರು ಮಾತನಾಡಿ. ಮತಗಳಿಗಿಂತ ಮನಸ್ಸುಗಳು ಮುಖ್ಯ. ಜಾತಿ, ಮತ ಬೆÉೀಧÀ ಮರೆತು ಎಲ್ಲರೂ ಒಂದಾಗಬೇಕಿದೆ. ಪ್ರಸ್ತುತ ಕೊಡಗು ಜಿಲ್ಲೆಯಲ್ಲಿ ಅನ್ಯರು ಅಕ್ರಮವಾಗಿ ನುಸುಳಿ ನೆಲೆಕಂಡುಕೊಳ್ಳುತ್ತಿದ್ದಾರೆ ಇದು ಅಪಾಯಕಾರಿ. ಕೊಡಗಿನಲ್ಲಿ ಕೊಡವರು ಮತ್ತು ಗೌಡರು ಒಂದಾದರೆ ಮಾತ್ರ ಕೊಡಗು ಶಾಶ್ವತವಾಗಿ ಉಳಿಯಲು ಸಾಧ್ಯ ವೆಂದರು. ಪ್ರಸ್ತುತ ಹಬ್ಬಾಚರಣೆಗಳನ್ನು ಅವರವರ ಮನೆ, ಸಮುದಾಯದವರು ಮಾತ್ರ ಆಚರಿಸುವಂತಾಗಿದೆ. ಆದರೆ ಮಕ್ಕಂದೂರು ಗೌಡ ಸಮಾಜದವರು ಜಾತಿ, ಮತ ಬೆÉೀಧವಿಲ್ಲದೆ ಎಲ್ಲರನ್ನೂ ಆಹ್ವಾನಿಸಿ ಸಂತೋಷ ಏರ್ಪಡಿಸಿರು ವದು ಇದು ಜಿಲ್ಲೆಗೆ ಮಾದರಿಯಾಗಿದೆ. ಎಂದು ಹೇಳಿದರು. ಇಂತಹ ಕಾರ್ಯಗಳಿಗೆ ಎಲ್ಲರೂ ಪ್ರೋತ್ಸಾಹ ನೀಡುವದರೊಂದಿಗೆ ಅನುಸರಿಸಿ ಕೊಂಡು ಹೋಗ ಬೇಕೆಂದರು.

ಮತ್ತೋರ್ವ ಅತಿಥಿ ಜಿ.ಪಂ. ಮಾಜಿ ಸದಸ್ಯ, ವಿಎಸ್‍ಎಸ್‍ಎನ್ ಅಧ್ಯಕ್ಷ ಕೊಕ್ಕಲೆರ ಸುಜುತಿಮ್ಮಯ್ಯ ಅವರು ಮಾತನಾಡಿ ಮನುಷ್ಯನಾಗಿದ್ದರೆ ಸಾಲದು ಹೃದಯ ಶ್ರೀಮಂತಿಕೆ ಇರಬೇಕು. ನಾವೆಲ್ಲರೂ ಒಂದೇ ಎಂಬ ಭಾವನೆ ಇರಬೇಕು. ಈ ನಿಟ್ಟಿನಲ್ಲಿ ಮಕ್ಕಂದೂರು ಗೌಡ ಸಮಾಜದವರ ಕಾರ್ಯ ಶ್ಲಾಘನೀಯವೆಂದು ಹೇಳಿದರು. ಸಂಸ್ಕøತಿಯನ್ನು ಕಾಪಾಡುವ ಇಂತಹ ಕಾರ್ಯಗಳಿಗೆ ಸಹಕಾರ ನೀಡುವದಾಗಿ ಹೇಳಿದರು.

‘ಶಕ್ತಿ’ ಉಪಸಂಪಾದಕ ಕುಡೆಕಲ್ ಸಂತೋಷ್ ಮಾತನಾಡಿ ಹಿಂದೆ ಹಬ್ಬಾಚರಣೆಗಳನ್ನು ಎಲ್ಲರೂ ಒಗ್ಗೂಡಿ ಆಚರಿಸುತ್ತಿದ್ದರು, ಇದೀಗ ಆಯಾ ಸಮುದಾಯದವರು ಮಾತ್ರ ಸೇರಿ ಆಚರಿಸುವಂತಾಗಿದೆ. ಇದಕ್ಕೆ ಕೊನೆಗಾಣಿಸಿ ಎಲ್ಲರನ್ನೂ ಒಗ್ಗೂಡಿಸಿ ಆಚರಿಸುವಂತಾಗಬೇಕು ಎಂದು ಹೇಳಿದರು. ಇಂದು ಎಲ್ಲರೂ ಸಾಮರಸ್ಯದೊಂದಿಗೆ ಅನೋನ್ಯ ವಾಗಿದ್ದರೂ ಕೆಲವರು ತಿಳಿದವರೇ ಹುಳಿ ಹಿಂಡುವ ಕೆಲಸ ಮಾಡುತ್ತಿರುವದು ವಿಷಾದನೀಯ ವೆಂದರು.

ಗ್ರಾ.ಪಂ.ಅಧ್ಯಕ್ಷೆ ಲಕ್ಕಪ್ಪನ ಕಾವೇರಮ್ಮ ಹರೀಶ್ ಮಾತನಾಡಿ ನಮ್ಮ ಕಲೆ, ಸಂಸ್ಕøತಿ, ಆಚಾರ-ವಿಚಾರಗಳನ್ನು ಉಳಿಸಿ ಬೆಳೆಸಬೇಕೆಂದರು. ಅಧ್ಯಕ್ಷತೆ ವಹಿಸಿದ್ದ ಸಮಾಜದ ಅಧ್ಯಕ್ಷ ಕುಂಬಗೌಡನ ಉತ್ತಪ್ಪ ಮಾತನಾಡಿ ಎಲ್ಲರ ಸಹಕಾರದೊಂದಿಗೆ ಸಮಾಜವನ್ನು ಮುನ್ನಡೆಸಿಕೊಂಡು ಬರಲಾಗುತ್ತಿದೆ. ಇದೀಗ ಸಭಾಂಗಣ ಹಾಗೂ ಕಚೇರಿ ನಿರ್ಮಾಣ ಮಾಡಲಾಗಿದೆ. ಮೇಲಂತಸ್ತು ನಿರ್ಮಾಣಕ್ಕೆ ಸಮಾಜ ಬಾಂಧವರು , ಜನಪ್ರತಿನಿಧಿಗಳು ನೆರವಿನ ಹಸ್ತ ಚಾಚÀಬೇಕಾಗಿದೆÉಂದು ಮನವಿ ಮಾಡಿದರು.

ವಿಎಸ್‍ಎಸ್‍ಎನ್ ನಿರ್ದೇಶಕಿ ಪಿ.ಎಂ ಸುಲೋಚನಾ ಮೋಹನ್, ಹಿರಿಯರಾದ ತೂಟೇರ ಗಣಪತಿ ಶುಭ ಹಾರೈಸಿದರು. ಇದೇ ಸಂದರ್ಭ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ವೇದಿಕೆಯಲ್ಲಿ ಸಮಾಜದ ಉಪಾಧ್ಯಕ್ಷ ತಡಿಯಪ್ಪನ ಕುಶಾಲಪ್ಪ, ಕಾರ್ಯದರ್ಶಿ ಮಳ್ಳನ ಸುಬ್ಬಯ್ಯ, ಗ್ರಾ.ಪಂ. ಉಪಾಧ್ಯಕ್ಷ ಕನ್ನಿಕಂಡ ಶ್ಯಾಂ ಸುಬ್ಬಯ್ಯ, ಸಮಾಜ ಪ್ರಮುಖರಾದ ಚೌಕಿಮನೆ ರಘು, ಕುಂಬಗೌಡನ ಪ್ರಸನ್ನ, ಸಬ್ಬಂಡ್ರ ಕುಶಾಲಪ್ಪ, ಕಟ್ಟೇರ ಪೂಣಚ್ಚ ಇನ್ನಿತರಿದ್ದರು. ನಿರ್ದೇಶಕ ಅಣ್ಣೆಚ್ಚಿರ ಸತೀಶ್ ಸೋಮಣ್ಣ ಸ್ವಾಗತಿಸಿ, ನಿರೂಪಿಸಿದರು.