ಮಡಿಕೇರಿ, ಅ.11 : ಜಿಲ್ಲಾ ಕೇಂದ್ರ ಮಡಿಕೇರಿ ನಗರದ ಅಂಚಿನ ಕರ್ಣಂಗೇರಿಯಲ್ಲಿರುವ ಶ್ರೀ ರಾಜ ರಾಜೇಶ್ವರಿ ದೇವಾಲಯದಲ್ಲಿ ದೀಪಾವಳಿ ಅಮವಾಸ್ಯೆಯ ದಿನವಾದ ತಾ. 19 ರಂದು ‘ಅಮವಾಸ್ಯೆ ದೀಪೆÀÇೀತ್ಸವ’ ನಡೆಯಲಿದೆ ಎಂದು ದೇವಾಲಯದ ಧರ್ಮದರ್ಶಿ ಗೋವಿಂದ ಸ್ವಾಮಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಶ್ರೀ ರಾಜರಾಜೇಶ್ವರಿ ದೇಗುಲದಲ್ಲಿ ಮೇ ತಿಂಗಳ ಮೊದಲ ಮಂಗಳವಾರ ದಂದು ವಾರ್ಷಿಕ ಉತ್ಸವ ನಡೆಯುತ್ತದೆ. ದೀಪಾವಳಿ ಅಮವಾಸ್ಯೆಯ ರಾತ್ರಿ ಭಕ್ತಾದಿಗಳೊಂದಿಗೆ ದೀಪೆÀÇೀತ್ಸವವನ್ನು ಆಚರಿಸಲಾಗುತ್ತದೆ ಎಂದು ಹೇಳಿದರು.
ದೀಪಾವಳಿ ಅಮವಾಸ್ಯೆಯ ದಿನವಾದ ಅ.19 ರಂದು ರಾತ್ರಿ 7 ಗಂಟೆಗೆ ಕಳಸ ಪÀÇಜೆ, ರಾತ್ರಿ 8ಕ್ಕೆ ಅನ್ನದಾನ , ಪ್ರಸಾದ ವಿನಿಯೋಗ, ರಾತ್ರಿ 9 ಗಂಟೆಗೆ ತಾಯಿಯ ದರ್ಶನ ಮತ್ತು ರಾತ್ರಿ 9.30 ಗಂಟೆಗೆ ದೀಪೆÀÇೀತ್ಸವ ನಡೆಯಲಿದೆ. ಈ ಸಂದರ್ಭ ಭಕ್ತಾದಿಗಳಿಂದ ಗ್ರಹದೋಷ ಪರಿಹಾರಕ್ಕಾಗಿ 108 ಎಳ್ಳುಬತ್ತಿಯ ದೀಪಗಳನ್ನು ದೇವಾಲಯದ ಆವರಣದಲ್ಲಿ ಬೆಳಗುವ ಮೂಲಕ ದೀಪೆÀÇೀತ್ಸವ ನಡೆಯಲಿದೆಯೆಂದು ವಿವರಿಸಿದರು.
ಶ್ರೀ ರಾಜರಾಜೇಶ್ವರಿ ದೇವಾಲಯದ ಭಕ್ತ ಹಾಗೂ ಮೂಡಾ ಅಧ್ಯಕ್ಷ ಎ.ಸಿ. ದೇವಯ್ಯ ಮಾತನಾಡಿ, ದೇವಾಲಯಕ್ಕೆ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಭಕ್ತಾದಿಗಳು ಆಗÀಮಿಸಿ ದೇವಿಯ ಸೇವೆಯನ್ನು ನಡೆಸುವದು ವಿಶೇಷವಾಗಿದ್ದು, ದೀಪಾವಳಿ ಅಮವಾಸ್ಯೆಯಂದು ನಡೆಯುವ ದೀಪೆÀÇೀತ್ಸವದಲ್ಲಿ ಭಕ್ತಾದಿಗಳು ಎಳ್ಳು ಬತ್ತಿಯ ದೀಪಗಳನ್ನು ಬೆಳಗುವದು ವಿಶೇಷವೆಂದರು.
ದೀಪೆÀÇೀತ್ಸವದಂದು ನೈವೇದ್ಯ, ಅನ್ನದಾನ, ದೇವಸ್ಥಾನಕ್ಕೆ ಹೂವಿನ ಅಲಂಕಾರ ಮತ್ತು ವಿದ್ಯುತ್ ದೀಪಾಲಂಕಾರ ಮಾಡಲಿಚ್ಛಿಸುವವರು ಗೋವಿಂದ ಸ್ವಾಮಿ, ಧರ್ಮದರ್ಶಿಗಳು ಶ್ರೀ ರಾಜರಾಜೇಶ್ವರಿ ದೇವಾಲಯ, ಕರ್ಣಂಗೇರಿ, ಮಕ್ಕಂದೂರು ಅಂಚೆ, ದೂರವಾಣಿ 08272-224668, ಮೊ.9480730523 ಯನ್ನು ಸಂಪರ್ಕಿಸಬಹುದಾಗಿದೆ.
ಸುದ್ದಿಗೋಷ್ಠಿಯಲ್ಲಿ ವಕೀಲ ಬಾಳೆಯಡ ಕಿಶನ್ ಪÀÇವಯ್ಯ, ಪೆÀÇದುವಾಡ ನಾಣಯ್ಯ ಹಾಗೂ ಸೂದನ ಹರೀಶ್ ಉಪಸ್ಥಿತರಿದ್ದರು.