ಗೋಣಿಕೊಪ್ಪಲು, ಅ. 10: ಹಾಕಿ ಕೂರ್ಗ್ ವತಿಯಿಂದ ಇಂದು ಬಿ ಡಿವಿಷನ್ ಹಾಕಿ ಲೀಗ್‍ಗೆ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಚಾಲನೆ ದೊರೆಯಲಿದೆ.

ಎ ಹಾಗೂ ಬಿ ಡಿವಿಷನ್ ಹಾಕಿ ಲೀಗ್ ಟೂರ್ನಿಯಲ್ಲಿ 35 ತಂಡಗಳು ಪಾಲ್ಗೊಳ್ಳಲಿವೆ. ಕ್ರೀಡಾಕೂಟವನ್ನು ಬೆ. 10 ಕ್ಕೆ ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನಿರ್ದೇಶಕ ಗುಮ್ಮಟ್ಟೀರ ಕಿಲನ್ ಗಣಪತಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿ ಪಂ ಸದಸ್ಯ ಶಿವು ಮಾದಪ್ಪ, ಹಾಕಿ ಕೂರ್ಗ್ ಅಧ್ಯಕ್ಷ ಪೈಕೇರ ಕಾಳಯ್ಯ ಪಾಲ್ಗೊಳ್ಳಲಿದ್ದಾರೆ.