ಮಡಿಕೇರಿ, ಅ. 11: ಕಾವೇರಿ ತುಲಾಸಂಕ್ರಮಣದ ಹಿನ್ನೆಲೆಯಲ್ಲಿ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಸಮಿತಿ “ಸುಂದರ ಕೊಡಗನ್ನು ಉಳಿಸೋಣ ಸ್ವಚ್ಛತೆಯನ್ನು ಕಾಪಾಡೋಣ” ಎಂಬ ಧ್ಯೇಯ ವಾಕ್ಯದಡಿ ಸ್ವಚ್ಛ ಕಾವೇರಿ ಅಭಿಯಾನವನ್ನು ಹಮ್ಮಿಕೊಂಡಿದೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಬಿ.ಎಸ್. ರಮಾನಾಥ್, ತಲಕಾವೇರಿ ಧಾರ್ಮಿಕ ಕ್ಷೇತ್ರವಾಗಿ ಉಳಿಯಬೇಕೆ ಹೊರತು ಪ್ರವಾಸಿ ತಾಣವಾಗಬಾರದು ಎಂದರು. ತಾ. 16 ರಂದು ಬೆಳಿಗ್ಗೆ 10 ಗಂಟೆಗೆ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಿಂದ ಅಪ್ಪಂಗಳ, ಬೆಟ್ಟಗೇರಿ, ಮಡಿಕೇರಿ, ಅ. 11: ಕಾವೇರಿ ತುಲಾಸಂಕ್ರಮಣದ ಹಿನ್ನೆಲೆಯಲ್ಲಿ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಸಮಿತಿ “ಸುಂದರ ಕೊಡಗನ್ನು ಉಳಿಸೋಣ ಸ್ವಚ್ಛತೆಯನ್ನು ಕಾಪಾಡೋಣ” ಎಂಬ ಧ್ಯೇಯ ವಾಕ್ಯದಡಿ ಸ್ವಚ್ಛ ಕಾವೇರಿ ಅಭಿಯಾನವನ್ನು ಹಮ್ಮಿಕೊಂಡಿದೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಬಿ.ಎಸ್. ರಮಾನಾಥ್, ತಲಕಾವೇರಿ ಧಾರ್ಮಿಕ ಕ್ಷೇತ್ರವಾಗಿ ಉಳಿಯಬೇಕೆ ಹೊರತು ಪ್ರವಾಸಿ ತಾಣವಾಗಬಾರದು ಎಂದರು. ತಾ. 16 ರಂದು ಬೆಳಿಗ್ಗೆ 10 ಗಂಟೆಗೆ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಿಂದ ಅಪ್ಪಂಗಳ, ಬೆಟ್ಟಗೇರಿ, ನಿಭಾಯಿಸುತ್ತಿಲ್ಲ ವೆಂದು ಆರೋಪಿಸಿದ ರಮಾನಾಥ್, ಈ ಬಗ್ಗೆ ಶಾಸಕರುಗಳು ಗಮನಹರಿಸಬೇಕೆಂದು ಒತ್ತಾಯಿಸಿದರು.

ನಾಪೋಕ್ಲು ಬ್ಲಾಕ್ ಕಾಂಗ್ರೆಸ್‍ನ ಖಜಾಂಚಿ ಅಗಸ್ಟಿನ್ ಜಯರಾಜ್ ಮಾತನಾಡಿ, ತಾ. 14 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಕೂರ್ಗ್ ಕಮ್ಯೂನಿಟಿ ಹಾಲ್‍ನಲ್ಲಿ ನಾಪೋಕ್ಲು ಬ್ಲಾಕ್ ಕಾಂಗ್ರೆಸ್‍ಗೆ ಸೇರಿದ ಎಲ್ಲಾ ಸಮಿತಿ ಸದಸ್ಯರುಗಳಿಗೆ, 79 ಬೂತ್ ಅಧ್ಯಕ್ಷರು, ಕಾರ್ಯದರ್ಶಿ ಗಳಿಗೆ, 18 ವಲಯಾಧ್ಯಕ್ಷರು, ಕಾರ್ಯದರ್ಶಿ ಗಳಿಗೆ ಹಾಗೂ ಮುಂಚೂಣಿ ಘಟಕದ ಪದಾಧಿಕಾರಿಗಳಿಗೆ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಗೋಷ್ಠಿಯಲ್ಲಿ ನಾಪೋಕ್ಲು ಬ್ಲಾಕ್ ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ ಹ್ಯಾರಿಸ್, ಕಾರ್ಯದರ್ಶಿಗಳಾದ ಬಶೀರ್ ಹಾಗೂ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಸಂಯೋಜಕ ತೆನ್ನಿರ ಮೈನಾ ಉಪಸ್ಥಿತರಿದ್ದರು.