ಮಡಿಕೇರಿ, ಅ. 10: ಕ್ಲುಲ್ಲಕ ಕಾರಣಕ್ಕಾಗಿ ದೊಣ್ಣೆಯಿಂದ ಹೊಡೆದು ವ್ಯಕ್ತಿಯೊಬ್ಬರನ್ನು ಕೊಲೆಗೈದಿರುವ ಆರೋಪಿಗೆ ಇಲ್ಲಿನ ನ್ಯಾಯಾಲಯ ಶಿಕ್ಷೆ ವಿಧಿಸಿದೆ.ತಾ. 16.4.2015ರಂದು ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯ ಆಲೂರು ಸಿದ್ದಾಪುರ ನಿವಾಸಿ ಕರ್ಕರನ ಎಸ್. ಪ್ರವೀಣ ಎಂಬಾತ ಅದೇ ಗ್ರಾಮದ ನಿವಾಸಿ ಕೆ.ಸಿ. ಶಿವರಾಮ ಅಲಿಯಾಸ್ ಸುರೇಶ ಎಂಬಾತನನ್ನು ಫೋನ್ ಮಾಡಿ ಮನೆಯ ಹತ್ತಿರಕ್ಕೆ ಕರೆಸಿಕೊಂಡು ನೀರುಗುಂದ ಗ್ರಾಮದಲ್ಲಿ ತೋಟದ ಕೆಲಸಕ್ಕೆ ಸೇರಿದ್ದು, ಸರಿಯಾಗಿ ಕೆಲಸ ಕೊಲೆ ಆರೋಪಿಗೆ ಶಿಕ್ಷ(ಮೊದಲ ಪುಟದಿಂದ) ಮಾಡದೆ ಅವಮಾನ ಮಾಡುತ್ತೀಯ ಎಂದು ಹೇಳಿ ಒಂದು ಕಾಡು ಮರದ ದೊಣ್ಣೆಯಿಂದ ಆತನ ತಲೆಗೆ ಮತ್ತು ಶರೀರದ ಭಾಗಗಳಿಗೆ ಹೊಡೆದಿರುತ್ತಾನೆ. ಪೆಟ್ಟುತಿಂದ ಕೆ.ಸಿ. ಶಿವರಾಮ ತನ್ನ ಮನೆಗೆ ಹೋಗಿ ಮನೆಯವರಿಗೆ ನಡೆದ ವಿಚಾರ ತಿಳಿಸಿ, ನಿತ್ರಾಣನಾಗಿ ಮಲಗಿದ್ದಾನೆ ತಾ. 17.4.2015ರ ಬೆಳಗ್ಗಿನ ಜಾವ 4.30 ಗಂಟೆಗೆ ಆತ ಮೃತಪಟ್ಟಿದ್ದಾನೆ. ಈ ಬಗ್ಗೆ ಶಿವರಾಮನ ಪತ್ನಿ ಕುಸುಮಾವತಿ ನೀಡಿದ ದೂರಿನ ಮೇರೆಗೆ ಆರೋಪಿ ಪ್ರವೀಣನ ವಿರುದ್ಧ ಶನಿವಾರಸಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆಯು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಮಡಿಕೇರಿಯಲ್ಲಿ ನಡೆದಿದ್ದು, ಆರೋಪಿ ಪ್ರವೀಣನ ಕೃತ್ಯದಿಂದ ಕೆ.ಸಿ. ಶಿವರಾಮ ಯಾನೆ ಸುರೇಶ ಮೃತಪಟ್ಟಿರುವದು ಸಾಬೀತಾಗಿದೆ. ಈ ಬಗ್ಗೆ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಡಿ. ಪವನೇಶ್ ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಆರೋಪಿಯು ತನ್ನ ಕೃತ್ಯದಿಂದ ಶಿವರಾಮ ಯಾನೆ ಸುರೇಶ ಸಾವನ್ನಪ್ಪಬಹುದು ಎಂಬ ತಿಳುವಳಿಕೆಯಿಂದ (ಕಲಂ 304(2) ಐಪಿಸಿ) ಈ ಕೃತ್ಯ ಎಸಗಿರುವದಾಗಿ ಸಾಕ್ಷ್ಯಾಧಾರಗಳಿಂದ ಸಾಬೀತಾಗಿದೆ. ಆ ಮೇರೆಗೆ ಆತನಿಗೆ 6 ವರ್ಷಗಳ ಕಠಿಣ ಸಜೆ ಮತ್ತು ರೂ. 7500 ದಂಡವನ್ನು ವಿಧಿಸಿ ತೀರ್ಪು ನೀಡಿದ್ದಾರೆ. ವಸೂಲಾತಿ ಯಾಗುವ ದಂಡದ ಹಣದಲ್ಲಿ ರೂ. 5000ವನ್ನು ಮೃತನ ಪತ್ನಿ ಕುಸುಮಾವತಿ ಇವರಿಗೆ ಪರಿಹಾರವಾಗಿ ನೀಡಲು ಆದೇಶದಲ್ಲಿ ತಿಳಿಸಲಾಗಿದೆ. ಈ ಪ್ರಕರಣದ ಬಗ್ಗೆ ಸರ್ಕಾರಿ ಅಭಿಯೋಜಕಿ ಎಂ. ಕೃಷ್ಣವೇಣಿ ವಾದ ನಡೆಸಿದ್ದರು.