ಶನಿವಾರಸಂತೆ, ಅ. 11: ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೀರಭದ್ರೇಶ್ವರ ರಸ್ತೆಯ ಚರಂಡಿಯ ಮೇಲ್ಭಾಗದ ಮಣ್ಣು ಕುಸಿದು ಚರಂಡಿ ಮುಚ್ಚಿ ಹೋಗಿದೆ. ಸ್ಥಳೀಯರು ಈ ಬಗ್ಗೆ ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿಯ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಕಾರ್ಯಕ್ರಮದ ಫಲವಾಗಿ ವೀರಭದ್ರೇಶ್ವರ ರಸ್ತೆಯ ಒಂದು ಭಾಗ ಕಳಪೆ ಕಾಮಗಾರಿಯಿಂದ ಚರಂಡಿಯ ಮೇಲೆ ಮಣ್ಣು ಕುಸಿದು ಸುಮಾರು 7-8 ಮೀಟರ್ ಚರಂಡಿ ಮುಚ್ಚಿ ಹೋಗಿದೆ. ಈ ಬಗ್ಗೆ ಈಗಾಗಲೇ ಸ್ಥಳೀಯ ನಾಗರಿಕರು ತಡೆಗೋಡೆ ನಿರ್ಮಿಸುವಂತೆ ಅರ್ಜಿ ಸಲ್ಲಿಸಿದರೂ ಗ್ರಾಮ ಪಂಚಾಯಿತಿ ಈ ಬಗ್ಗೆ ಗಮನಹರಿಸಿರುವದಿಲ್ಲ ಎಂದು ಕೊಡ್ಲಿಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷೆ ಹೆಚ್.ಎನ್. ನಿರ್ಮಲ, ಸ್ಥಳೀಯ ನಾಗರಿಕರಾದ ನಾಗೇಶ್, ನೇತ್ರಾ, ಫ್ರಡ್ಡಿ ನೆಲ್ಸನ್, ಡಿ. ರಾಮು ಹಾಗೂ ಇತರರು ಲಿಖಿತ ಹೇಳಿಕೆ ನೀಡಿರುತ್ತಾರೆ.