ಮಡಿಕೇರಿ ಅ.11 : ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯ ಗಳಲ್ಲಿ ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರು, ಶೂನ್ಯ ಸಾಧನೆ ಮಾಡಿದ್ದು, ನಗರದ ಅವ್ಯವಸ್ಥೆಗಳ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ನಗರಸಭೆÉಯ ಬಿಜೆಪಿ ಸದಸ್ಯರು ಒತ್ತಾಯಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸದಸ್ಯ ಪಿ.ಡಿ.ಪೆÀÇನ್ನಪ್ಪ, ನಗರಸಭಾ ಅಧ್ಯಕ್ಷರಿಗೆ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗದೆ ಇರುವದರಿಂದ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಬೇರೆಯವರಿಗೆ ಅಧಿಕಾರ ಹಸ್ತಾಂತರಿಸುವದು ಸೂಕ್ತವೆಂದರು.ನಗರದಲ್ಲಿ ಇರುವ ಅವ್ಯವಸ್ಥೆ ಗಳಿಂದಾಗಿ ನಾವು ನಗರಸಭಾ ಸದಸ್ಯರುಗಳೆಂದು ಹೇಳಿಕೊಳ್ಳುವದಕ್ಕೆ ಮುಜುಗರವಾಗುತ್ತಿದೆ. ಆಡಳಿತ ಪಕ್ಷ ಜವಾಬ್ದಾರಿ ಮರೆತು ನಗರದ ಅಭಿವೃದ್ಧಿಯನ್ನು ಕಡೆಗಣಿಸುತ್ತಿದೆ. ನಗರಸಭೆಯ ನಿಧಿಯಿಂದ ಸುಮಾರು 34 ಕಾಮಗಾರಿಗಳನ್ನು

(ಮೊದಲ ಪುಟದಿಂದ) ಕೈಗೆತ್ತಿಕೊಳ್ಳುವಂತೆ ಅನುಮೋದನೆ ಪಡೆದು ಟೆಂಡರ್ ಪ್ರಕ್ರಿಯೆಗಾಗಿ ಸ್ಥಾಯಿ ಸಮಿತಿ ಅಧ್ಯಕ್ಷರು, ಪೌರಾಯುಕ್ತರು ಹಾಗೂ ಉಪಾಧ್ಯಕ್ಷರ ಸಹಿ ಪಡೆಯಲಾಗಿದೆ. ಆದರೆ, ಅಧ್ಯಕ್ಷರು ಸಹಿ ಮಾಡದೆ ಇರುವರಿಂದ ಟೆಂಡರ್ ಪ್ರಕ್ರಿಯೆ ನಡೆದೇ ಇಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಮತ್ತೆ ಯುಜಿಡಿ ಯೋಜನೆಯ ಕಾಮಗಾರಿ ಆರಂಭವಾಗಿದ್ದು, ರಸ್ತೆಗಳು ಹದಗೆಡುತ್ತಿವೆ. ಯುಜಿಡಿ ಯೋಜನೆಗಾಗಿ ಟ್ರೀಟ್‍ಮೆಂಟ್ ಪ್ಲಾಂಟ್ ಆರಂಭವಾಗದಿದ್ದರೂ ಪೈಪ್ ಅಳವಡಿಕೆಯ ಕಾಮಗಾರಿ ಯನ್ನು ಮುಂದುವರೆಸಲಾಗಿದೆ. ಅಧ್ಯಕ್ಷರು ಯಾವದೇ ಅಭಿವೃದ್ಧಿ ಕಾರ್ಯಗಳ ಬಗ್ಗೆ ಕಾಳಜಿ ವಹಿಸುತ್ತಿಲ್ಲವೆಂದು ಆರೋಪಿಸಿದರು.

ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್ ಮಾತನಾಡಿ, ಸಾಮಾನ್ಯ ಸಭೆಯಲ್ಲಿ ಅಂಗೀಕಾರವಾದ 23 ವಾರ್ಡ್‍ಗಳ ಕಾಮಗಾರಿಯನ್ನು ತಡೆಹಿಡಿದಿರುವದು ಸರಿಯಾದ ಕ್ರಮವಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ಅಧ್ಯಕ್ಷರ ಅಸಡ್ಡೆಯಿಂದಾಗಿ ಸಾರ್ವಜನಿಕರು ಸಂಕಷ್ಟವನ್ನು ಎದುರಿಸುವಂತಾಗಿದೆ. ನೂತನ ಖಾಸಗಿ ಬಸ್ ನಿಲ್ದಾಣದ ಕಾಮಗಾರಿಯನ್ನು 6 ತಿಂಗಳಲ್ಲಿ ಪೂರ್ಣಗೊಳಿಸುವದಾಗಿ ಅಧ್ಯಕ್ಷರು ಭರವಸೆ ನೀಡಿದ್ದಾರಾದರು ಕೇವಲ ಪಿಲ್ಲರ್‍ಗಳನ್ನಷ್ಟೆ ನಿರ್ಮಿಸಲಾಗಿದೆ. ಗುತ್ತಿಗೆದಾರರು ಒಂದು ಬಾರಿಯೂ ಕಾಮಗಾರಿಯ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಪ್ರಕಾಶ್ ಟೀಕಿಸಿದರು.

ಮುಖ್ಯಮಂತ್ರಿಗಳ 3ನೇ ಹಂತದ ಅನುದಾನದ ಕಾಮಗಾರಿಗಳಿಗೆ ನಗರಸಭಾ ಸದಸ್ಯರು ಅನುಮೋದನೆ ನೀಡಿದ್ದರು ಜಿಲ್ಲಾ ಉಸ್ತುವಾರಿ ಸಚಿವರು ಹಲವು ಕಾಮಗಾರಿಗಳನ್ನು ಕೈ ಬಿಟ್ಟಿದ್ದಾರೆ. ನಗರದ ಸಮಸ್ಯೆಗಳ ಬಗ್ಗೆ ಉಸ್ತುವಾರಿ ಸಚಿವರ ಗಮನ ಸೆಳೆಯಬೇಕಾದ ಆಡಳಿತ ಪಕ್ಷ ಯಾವದೇ ಚಟುವಟಿಕೆಯಲ್ಲಿ ತೊಡಗಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ಇಲ್ಲಿಯವರೆಗೆ ನಗರಸಭೆಯಲ್ಲಿ ಶೇ. 60ರಷ್ಟು ತೆರಿಗೆ ಸಂಗ್ರಹವಾಗಬೇಕಿತ್ತು, ಆದರೆ, ಕೇವಲ ಶೇ. 30ರಷ್ಟು ಮಾತ್ರ ಸಂಗ್ರಹವಾಗಿದ್ದು, ಕೊನೆಯ ಗಳಿಗೆಯಲ್ಲಿ ಎಲ್ಲಾ ಸಿಬ್ಬಂದಿಗಳನ್ನು ತೆರಿಗೆ ಸಂಗ್ರಹಕ್ಕೆ ಕಳುಹಿಸುವದರಿಂದ ಕಛೇರಿ ಕಾರ್ಯ ನಡೆಯದೆ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಟಿ.ಎಸ್.ಪ್ರಕಾಶ್ ಹೇಳಿದರು.

ಸದಸ್ಯರುಗಳಾದ ಉಣ್ಣಿಕೃಷ್ಣ ಹಾಗೂ ಅನಿತಾ ಪೂವಯ್ಯ ಮಾತನಾಡಿ, ನಗರದಲ್ಲಿ ಅಶುಚಿತ್ವದ ವಾತಾವರಣ ಮಿತಿ ಮೀರಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಸದಸ್ಯರು ಗಳಾದ ಶಿವಕುಮಾರಿ ಹಾಗೂ ಸವಿತಾ ರಾಕೇಶ್ ಉಪಸ್ಥಿತರಿದ್ದರು.