ಶನಿವಾರಸಂತೆ, ಅ. 11: ಹಂಡ್ಲಿ ಸಮೂಹ ಸಂಪನ್ಮೂಲ ಕೇಂದ್ರದ ವತಿಯಿಂದ ಇತ್ತೀಚೆಗೆ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ಸ್ಪರ್ಧಿಸಿ ಪ್ರಥಮ ಸ್ಥಾನಗಳಿಸಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು ಕೂಡಿಗೆಯ ಅಂಜೆಲಾ ವಿದ್ಯಾನಿಕೇತನದಲ್ಲಿ ನಡೆಯುವ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದಲ್ಲಿ ಸ್ಪರ್ಧಿಸಲು ಆಯ್ಕೆಯಾಗಿದ್ದಾರೆ.

ವೈಯಕ್ತಿಕ ವಿಭಾಗದ 1 ರಿಂದ 5ನೇ ತರಗತಿಯ ವಿಜೇತ ವಿದ್ಯಾರ್ಥಿಗಳಲ್ಲಿ ಕನ್ನಡ ಕಂಠಪಾಠ ಹಾಗೂ ಲಘು ಸಂಗೀತದಲ್ಲಿ ನಿಡ್ತ ಶಾಲೆಯ ಸಾನಿಕಾ, ಇಂಗ್ಲೀಷ್ ಕಂಠಪಾಠ ಹಾಗೂ ಧಾರ್ಮಿಕ ಪಠಣದಲ್ಲಿ ಹೆಚ್.ವೈ. ರಕ್ಷಿತಾ, ಛದ್ಮವೇಷದಲ್ಲಿ ಮುಳ್ಳೂರು ಶಾಲೆಯ ಲಕ್ಷ್ಮೀ, ಚಿತ್ರಕಲೆಯಲ್ಲಿ ಗೌತಮ್, ಕಥೆಯಲ್ಲಿ ಗೋಪಾಲಪುರ ಶಾಲೆಯ ಜಿ.ಜಿ. ಕವನಾ, ಅಭಿನಯದಲ್ಲಿ ನಿಡ್ತ ಶಾಲೆಯ ಹೆಚ್.ಸಿ. ರಕ್ಷಿತಾ, ಕ್ಲೇ ಮಾಡಲಿಂಗ್‍ನಲ್ಲಿ ಮುಳ್ಳೂರು ಶಾಲೆಯ ಜೀವನ್, ಭಕ್ತಿಗೀತೆಯಲ್ಲಿ ನಿಡ್ತ ಶಾಲೆಯ ಎಸ್.ಎಂ. ಸಾನಿಕಾ, ಆಶುಭಾಷಣದಲ್ಲಿ ಹಂಡ್ಲಿ ಶಾಲೆಯ ಅನುಶ್ರೀ ಆಯ್ಕೆಯಾಗಿದ್ದಾರೆ. 6 ರಿಂದ 7ನೇ ತರಗತಿಯಲ್ಲಿ ಕನ್ನಡ ಕಂಠಪಾಠದಲ್ಲಿ ಹಂಡ್ಲಿ ಶಾಲೆಯ ಜ್ಯೋತಿ, ಇಂಗ್ಲೀಷ್ ಕಂಠಪಾಠದಲ್ಲಿ ನಿಡ್ತ ಶಾಲೆಯ ಎಸ್.ಎಸ್. ಅನುಷಾ, ಧಾರ್ಮಿಕ ಪಠಣ ಹಾಗೂ ಚಿತ್ರಕಲೆಯಲ್ಲಿ ಹಂಡ್ಲಿ ಶಾಲೆಯ ಜಿ.ಜಿ. ವತನ್, ಲಘು ಸಂಗೀತದಲ್ಲಿ ನಿಡ್ತ ಶಾಲೆಯ ಹೆಚ್. ದೀಪಿಕಾ, ಛದ್ಮವೇಷದಲ್ಲಿ ಮೂದರವಳ್ಳಿ ಎ ಶಾಲೆಯ ಟಿ.ಡಿ. ಪ್ರೇಕ್ಷಾ ಹಾಗೂ ಕಥೆ ಹೇಳುವದರಲ್ಲಿ ಎಸ್.ಡಿ. ರೀತಾ, ಅಭಿನಯ ಗೀತೆಯಲ್ಲಿ ನಿಡ್ತ ಶಾಲೆಯ ಜೆ.ಎಸ್. ಪೂಜಾ, ಕ್ಲೇ ಮಾಡಲಿಂಗ್‍ನಲ್ಲಿ ಎನ್.ಜೆ. ಭರತ್, ಹಿಂದಿ ಕಂಠಪಾಠದಲ್ಲಿ ಎಲ್. ಅಕ್ಷತಾ ಹಾಗೂ ಭಕ್ತಿಗೀತೆಯಲ್ಲಿ ಹೆಚ್.ಆರ್. ದೀಪಿಕಾ, ಆಶು ಭಾಷಣದಲ್ಲಿ ಹಾರೆಹೊಸೂರು ಶಾಲೆಯ ಸಿ.ಪಿ. ಅಕ್ಷಿತಾ ಆಯ್ಕೆಯಾಗಿದ್ದಾರೆ.