ಶನಿವಾರಸಂತೆ, ಅ. 11: ಶನಿವಾರಸಂತೆಯ ಭಾರತಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತ್ತು ಶನಿವಾರಸಂತೆ ರೋಟರಿ ಕ್ಲಬ್ ಆಶ್ರಯದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛ ಭಾರತ ಅಭಿಯಾನದಡಿ ಪಟ್ಟಣದ 1ನೇ ವಿಭಾಗದ ಭಾರತಿ ವಿದ್ಯಾಸಂಸ್ಥೆಯಿಂದ ಸಮುದಾಯ ಆರೋಗ್ಯ ಕೇಂದ್ರದ ತನಕ ದಟ್ಟವಾಗಿ ಬೆಳೆದ ಗಿಡಗಂಟಿಗಳನ್ನು ಕತ್ತರಿಸಿ ಶ್ರಮದಾನ ಮಾಡಲಾಯಿತು.

ರಾಷ್ಟ್ರೀಯ ಸೇವಾ ಯೋಜನೆಯ 60 ಮಂದಿ ವಿದ್ಯಾರ್ಥಿಗಳು ಹಾಗೂ ಶನಿವಾರಸಂತೆ ರೋಟರಿ ಸಂಸ್ಥೆಯ ಪದಾಧಿಕಾರಿಗಳು ಸೇರಿ ಪಟ್ಟಣದ ಮುಖ್ಯ ರಸ್ತೆಯ ಎರಡು ಬದಿಯ ಒಳಚಂಡಿಯನ್ನು ಸ್ವಚ್ಛಗೊಳಿಸಿದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಎಸ್.ಎಂ. ಉಮಾಶಂಕರ್, ರಾಷ್ಟ್ರೀಯ ಸೇವಾ ಯೋಜನೆ ಘಟಕದ ಶಿಬಿರಾಧಿಕಾರಿ ಹೆಚ್.ಎಂ. ವಿವೇಕ್, ರೋಟರಿ ಕ್ಲಬ್ ಅಧ್ಯಕ್ಷ ಹೆಚ್.ಎಸ್. ವಸಂತ್, ಕ್ಲಬ್ ಪದಾಧಿಕಾರಿಗಳಾದ ಹೆಚ್.ವಿ. ದಿವಾಕರ್, ಅರವಿಂದ್, ರವಿ, ಎ.ಡಿ. ಮೋಹನ್, ಎನ್.ವಿ. ಸ್ವಾಗತ್, ವಿನೂತ್ ಶಂಕರ್, ಗಿರೀಶ್, ಶ್ವೇತಾ ವಸಂತ್, ಬೀನಾ ಅರವಿಂದ್ ಇತರರು ಹಾಜರಿದ್ದರು.