ಸೋಮವಾರಪೇಟೆ, ಅ. 11 : ತಾಲೂಕು ಹಿಂದೂ ಮಲೆಯಾಳ ಸಮಾಜದ ವತಿಯಿಂದ ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಓಣಂ ಉತ್ಸವದ ವಿವಿಧ ಸ್ಪರ್ಧಾ ವಿಜೇತರುಗಳಿಗೆ ಬಹುಮಾನ ವಿತರಣೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.
ಪೂಕಳಂ ಸ್ಪರ್ಧೆಯಲ್ಲಿ ಹೊಸಳ್ಳಿಯ ಅಜಿತ್ಕುಮಾರ್ ಮತ್ತು ತಂಡ (ಪ್ರ), ಮಾದಾಪುರದ ವಿಶಾಲಾಕ್ಷಿ ಮತ್ತು ತಂಡ (ದ್ವಿ), ಐಗೂರಿನ ಸಂದ್ಯಾ ರಾಜ್ (ತೃ) ಬಹುಮಾನ ಪಡೆದರು. 1ರಿಂದ 3ನೇ ತರಗತಿವರೆಗಿನ ಸಮೂಹ ನೃತ್ಯದಲ್ಲಿ ಐಗೂರಿನ ಸಿಂಚನ ತಂಡ (ಪ್ರ), ಐಗೂರಿನ ವರ್ಷಿಣಿ ತಂಡ (ದ್ವಿ), ತಣ್ಣೀರುಹಳ್ಳದ ಸವಿನಯ ತಂಡ (ತೃ) ಬಹುಮಾನ ಪಡೆಯಿತು.
4ರಿಂದ 7ನೇ ತರಗತಿವರೆಗಿನ ಸ್ಪರ್ಧೆಯಲ್ಲಿ ಐಗೂರಿನ ಲಕ್ಷ್ಮಿ ತಂಡ (ಪ್ರ) ಹಾಗೂ ಮಾಲಂಬಿಯ ವಿನಿತಾ ತಂಡ (ದ್ವಿ). 8ರಿಂದ 10ನೇ ತರಗತಿವರೆಗಿನ ನೃತ್ಯ ಸ್ಪರ್ಧೆಯಲ್ಲಿ ಕುಂಬೂರಿನ ರಶ್ಮಿತಾ ತಂಡ (ಪ್ರ), ತಣ್ಣೀರುಹಳ್ಳದ ಸಹನಾ ತಂಡ (ದ್ವಿ), ಕುಶಾಲನಗರದ ಡ್ರೀಮ್ಸ್ ತಂಡ (ತೃ) ಬಹುಮಾನ ಪಡೆದರು. ಕಾಲೇಜು ಹಾಗೂ ಸಾರ್ವಜನಿಕ ವಿಭಾಗದಲ್ಲಿ ಸೋಮವಾರಪೇಟೆಯ ಹರಿ ಮತ್ತು ತಂಡ (ಪ್ರ), ಸೋಮವಾರಪೇಟೆಯ ಶೈನಿಂಗ್ ಸ್ಟಾರ್ ತಂಡ (ದ್ವಿ), ಸೋಮವಾರಪೇಟೆಯ ಆಟಿಟ್ಯೂಡ್ ತಂಡ (ತೃ) ಬಹುಮಾನ ಪಡೆದರು.
ಕಾರ್ಯಕ್ರಮದಲ್ಲಿ ಕೊಡ್ಲಿಪೇಟೆಯ ಡಾ. ಉದಯಕುಮಾರ್, ಸೆಸ್ಕ್ನಲ್ಲಿ ಕಾರ್ಯಪಾಲಕ ಅಭಿಯಂತರ ಸೋಮವಾರಪೇಟೆಯ ಎಸ್.ಎಸ್. ಸತೀಶ್, ವೈದ್ಯ ಸೋಮವಾರಪೇಟೆಯ ಡಾ. ಸಚಿನ್, ನಿವೃತ್ತ ಮುಖ್ಯಶಿಕ್ಷಕ ಮಾದಾಪುರದ ಕೆ. ಕೃಷ್ಣ ಮಣಿಯಾಣಿ, ಪ್ರೌಢಶಾಲಾ ನಿವೃತ್ತ ಶಿಕ್ಷಕಿ ವೀರಾಜಪೇಟೆಯ ಕೆ. ರಮಾವತಿ, ನೀರಾವರಿ ಇಲಾಖೆಯ ಅಭಿಯಂತರÀ ಸಂದರ್ಶ್ ಕೃಷ್ಣ, ಅಭಿಯಂತರರಾದ ಸೋಮವಾರಪೇಟೆಯ ಕೆ.ಟಿ. ಬಿಂದುರವರುಗಳನ್ನು ಸನ್ಮಾನಿಸ ಲಾಯಿತು.
ಸಮಾಜದ ಅಧ್ಯಕ್ಷ ಪಿ.ಡಿ. ಪ್ರಕಾಶ್, ಉತ್ಸವ ಸಮಿತಿ ಅಧ್ಯಕ್ಷ ವಿ.ಎಂ. ವಿಜಯ, ಕಾರ್ಯದರ್ಶಿ ಅಯ್ಯಪ್ಪ, ಸಂಘಟನಾ ಕಾರ್ಯದರ್ಶಿ ಗಂಗಾಧರ್, ಗೌಡಳ್ಳಿ ವಿಎಸ್ಎಸ್ಎನ್ ಅಧ್ಯಕ್ಷ ಎಸ್.ಬಿ. ಭರತ್ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.