ಮಡಿಕೇರಿ, ಅ. 12: ಕೊಡಗಿನ ಗಡಿ ಜಿಲ್ಲೆಯ ಸಾಲಿಗ್ರಾಮ ವ್ಯಾಪ್ತಿಯ ಮೀಸಲು ಅರಣ್ಯದೊಳಗೆ ಅಕ್ರಮ ಪ್ರವೇಶಿಸಿ ವನ್ಯಪ್ರಾಣಿಗಳ ಬೇಟೆ ಯಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಎಡವಾರೆ ಗ್ರಾಮದ ವಿಶ್ವನಾಥ ಹಾಗೂ ಗಣಪತಿ ಆರೋಪಿಗಳಾಗಿದ್ದು, ಇತರ ಮೂವರು ಕಾರ್ಯಾಚರಣೆ ವೇಳೆ ಪರಾರಿಯಾಗಿದ್ದಾರೆ.ಎರಡು ದಿನ ಹಿಂದೆ ಐವರು ಬೇಟೆಗಾರರ ತಂಡ ಒಂದು ಓಮ್ನಿಕಾರು ಹಾಗೂ ದ್ವಿಚಕ್ರ ವಾಹನ, ಕೋವಿ ಸಹಿತ ಬೇಟೆಯಾಡುತ್ತಿದ್ದ ಖಚಿತ ಸುಳಿವಿನ ಮೇರೆಗೆ ಅರಣ್ಯ ವಲಯಾಧಿಕಾರಿ ಮತ್ತು ಸಿಬ್ಬಂದಿ ಧಾಳಿ ನಡೆಸಿದ್ದಾರೆ. ಈ ವೇಳೆ ಮೂವರು ತಪ್ಪಿಸಿ ಕೊಂಡಿದ್ದು, ಇಬ್ಬರು ಸೆರೆಯಾಗಿದ್ದಾರೆ.
ಅಲ್ಲಿನ ಅರಣ್ಯಾಧಿಕಾರಿಗಳು ನೀಡಿದ ಪುಕಾರಿನ ಮೇರೆಗೆ, ಸಾಲಿಗ್ರಾಮ
ಅಕ್ರಮ ಬೇಟೆ : ವಾಹನಗಳ ಸಹಿತ ಇಬ್ಬರ ಸೆರೆ
(ಮೊದಲ ಪುಟದಿಂದ) ಪೊಲೀಸ್ ವೃತ್ತ ನಿರೀಕ್ಷಕ ಬಸವರಾಜ್, ಠಾಣಾಧಿಕಾರಿ ಮಹೇಶ ಹಾಗೂ ಸಿಬ್ಬಂದಿ ಬಂಧಿತರ ವಿರುದ್ಧ ಕಾನೂನು ಕ್ರಮದೊಂದಿಗೆ, ತಲೆಮರೆಸಿಕೊಂಡಿರುವವರ ಪತ್ತೆಗೆ ಬಲೆ ಬೀಸಿದ್ದಾರೆ.
ಇತ್ತೀಚೆಗೆ ಮಾಲ್ದಾರೆ ರಕ್ಷಿತಾರಣ್ಯದಲ್ಲಿ ಕಳ್ಳ ಬೇಟೆ ಬೆನ್ನಲ್ಲೇ ಇದೀಗ ಹಾಸನ-ಮೈಸೂರು ಗಡಿ ಜಿಲ್ಲೆಗಳ ವ್ಯಾಪ್ತಿಯ ಸಾಲಿಗ್ರಾಮ ಪ್ರದೇಶದಲ್ಲಿ ಕೊಡಗಿನ ಮಂದಿಯೊಂದಿಗೆ ಇತರರು ಅಕ್ರಮ ಬೇಟೆಯಲ್ಲಿ ತೊಡಗಿರುವ ದಂಧೆ ಬಯಲಾಗಿದೆ.