ಗೋಣಿಕೊಪ್ಪಲು, ಅ. 12: ಪೊನ್ನಂಪೇಟೆ ಪದವಿಪೂರ್ವ ಕಾಲೇಜುವಿನಲ್ಲಿರುವ ಅರ್ಫ್ ಮೈದಾನದಲ್ಲಿ ಹಾಕಿಕೂರ್ಗ್ ವತಿಯಿಂದ ನಡೆಯುತ್ತಿರುವ ಬಿ. ಡಿವಿಷನ್ ಹಾಕಿ ಲೀಗ್‍ನಲ್ಲಿ 4 ತಂಡಗಳು ಗೆಲುವು ಪಡೆಯುವ ಮೂಲಕ ಮುನ್ನಡೆ ಕಾಯ್ದುಕೊಂಡಿದೆ.

ಮರ್ಕರಾ ಯುನೈಟೆಡ್, ಅಮ್ಮತ್ತಿ ಸ್ಪೋಟ್ರ್ಸ್ ಕ್ಲಬ್, ಪೊದ್ದ್‍ಮಾನಿ ಬ್ಲೂಸ್ಟಾರ್ ಹಾಗೂ ಬೇತು ಯೂತ್ ಕ್ಲಬ್ ತಂಡಗಳು ಗೆಲುವಿನ ನಗೆ ಬೀರಿದವು.

ಬೇತು ಯೂತ್ ಕ್ಲಬ್ ತಂಡವು ವೀರಾಜಪೇಟೆ ಎಫ್‍ಎಂಸಿ ತಂಡದ ವಿರುದ್ಧ 10-0 ಗೋಲುಗಳ ಜಯದ ಗೆಲುವು ಪಡೆಯಿತು. ಬೇತು ಪರ ಪುನಿತ್ ಮುತ್ತಪ್ಪ 2, 31, 36 ನೇ ನಿಮಿಷಗಳಲ್ಲಿ 3 ಗೋಲು, ನವೀನ್ ನಾಚಪ್ಪ 30, 39 ನೇ ನಿಮಿಷಗಳಲ್ಲಿ 2, ಮೋಹನ್ 41, 45, ನಿಮಿಷಗಳಲ್ಲಿ 2 ಗೋಲು ಹೊಡೆದರು. 6 ನೇ ನಿಮಿಷದಲ್ಲಿ ಕಮಲಾಕ್ಷ, 13ಕ್ಕೆ ಅಕ್ಷಿತ್ ಚಿಟ್ಯಪ್ಪ, 47ರಲ್ಲಿ ಪೆಮ್ಮಯ್ಯ 1 ಗೋಲು ಹೊಡೆದರು.

ಪೊದ್ದ್‍ಮಾನಿ ಬ್ಲೂಸ್ಟಾರ್ ತಂಡವು ಮೂರ್ನಾಡ್ ಜನರಲ್ ತಿಮ್ಮಯ್ಯ ಅಕಾಡೆಮಿ ತಂಡವನ್ನು 2-1 ಗೋಲುಗಳ ಮೂಲಕ ಸೋಲಿಸಿತು. ಜನರಲ್ ತಿಮ್ಮಯ್ಯ ಪರ 14 ನೇ ನಿಮಿಷದಲ್ಲಿ ಅಯ್ಯಣ್ಣ ಪೆನಾಲ್ಟಿ ಕಾರ್ನರ್‍ನ್ನು ಗೋಲಾಗಿ ಪರಿವರ್ತಿಸಿದರು. ಬ್ಲೂಸ್ಟಾರ್ ಪರ ಸಿ. ಜಿ. ಸುಬ್ಬಯ್ಯ ಪಿಸಿಯನ್ನು ಗೋಲಾಗಿ ಪರಿವರ್ತಿಸಿದರು. 43 ನೇ ನಿಮಿಷದಲ್ಲಿ ಮಧು ಗೊಲು ಹೊಡೆದು ಗೆಲುವು ತಂದುಕೊಟ್ಟರು.

ಅಮ್ಮತ್ತಿ ಸ್ಪೋಟ್ರ್ಸ್ ಕ್ಲಬ್ ತಂಡವು ಪಾರಾಣೆ ಕಿರುಂದಾಡ್ ತಂಡದ ವಿರುದ್ಧ 4-0 ಗೋಲುಗಳ ಅಂತರದಿಂದ ಜಯ ಸಾಧಿಸಿತು. ಅಮ್ಮತ್ತಿ ಪರ 15 ನೇ ನಿಮಿಷದಲ್ಲಿ ಲಿತೇಶ್, 17 ರಲ್ಲಿ ಅಚ್ಚಯ್ಯ, 23 ನೇ ನಿಮಿಷದಲ್ಲಿ ಮುಕೇಶ್, 33 ರಲ್ಲಿ ಗಣಪ 1 ಗೋಲು ಹೊಡೆದು ಗೆಲುವಿಗೆ ಕಾರಣರಾದರು.

ಮರ್ಕರಾ ಯುನೈಟೆಡ್ ತಂಡವು ಬೇರಳಿನಾಡ್ ಯುನೈಟೆಡ್ ಜೂನಿಯರ್ ತಂಡವನ್ನು 2-0 ಗೋಲುಗಳಿಂದ ಸೋಲಿಸಿತು. ಮರ್ಕರಾ ಪರ 19 ನೇ ನಿಮಿಷದಲ್ಲಿ ಬಿದ್ದಪ್ಪ, 37 ರಲ್ಲಿ ಟೋನಿ ಗೋಲು ಬಾರಿಸಿ ಮರ್ಕರಾ ತಂಡದ ಗೆಲುವು ತಂದುಕೊಟ್ಟರು.