ಮಡಿಕೇರಿ, ಅ. 12: ಗಾಂಜಾ ಆಯಿತು... ಇದೀಗ ಜಿಲ್ಲೆಯಲ್ಲಿ ಚರಸ್‍ನಂತಹ ಮಾದಕ ವಸ್ತು ಮಾರಾಟ ದಂಧೆಯೂ ಶುರುವಾಗಿದ್ದು, ಆತಂಕಕಾರಿಯಾಗಿದೆ.ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಚರಸ್‍ನಂತಹ ಅಪಾಯಕಾರಿ ಮಾದಕ ವಸ್ತುವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಪ್ರಕರಣವೊಂದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.ಮಡಿಕೇರಿಯತ್ತ ಚರಸ್‍ನೊಂದಿಗೆ ಆಗಮಿಸುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿರುವ ಮಡಿಕೇರಿ ಗ್ರಾಮಾಂತರ ಪೊಲೀಸರು ಬಂಧಿತನಿಂದ 350 ಗ್ರಾಂ ಚರಸ್ ವಶಪಡಿಸಿಕೊಂಡಿದ್ದು, ಇದರ ಮೌಲ್ಯ ಅಂದಾಜು 1.20 ಲಕ್ಷವಾಗಿದೆ.ವೀರಾಜಪೇಟೆಯ ವಿಜಯ ನಗರ ಬಡಾವಣೆಯ ಯುವಕ ಮಹಮದ್ ತಾರಿಖ್ (30) ಬಂಧಿತ ವ್ಯಕ್ತಿ. ಈತ ನಿನ್ನೆ ದಿನ ಬೈಕ್‍ನಲ್ಲಿ (ಕೆ.ಎ. 02 ಇವೈ 2227) ವೀರಾಜಪೇಟೆ ಯಿಂದ ಮಡಿಕೇರಿಯಲ್ಲಿ ಚರಸ್ ಮಾರಾಟ ಮಾಡಲು ಮಾಲಿನೊಂದಿಗೆ ಆಗಮಿಸುತ್ತಿದ್ದ ಸಂದರ್ಭ ಖಚಿತ ಸುಳಿವಿನ ಮೇರೆ ಗ್ರಾಮಾಂತರ ಪೊಲೀಸರು ಹಾಕತ್ತೂರಿನಲ್ಲಿ ಈತನನ್ನು ವಶಕ್ಕೆ ಪಡೆದಿದ್ದಾರೆ. ತಪಾಸಣೆ ವೇಳೆ ರೂ. 1.20 ಲಕ್ಷ ಮೌಲ್ಯದ 350 ಗ್ರಾಂ ಚರಸ್ ದೊರೆತಿದ್ದು, ಬೈಕ್ ಸಹಿತ ಆರೋಪಿಯನ್ನು ಬಂಧಿಸಲಾಗಿದೆ.
ವೀಚಾರಣೆ ಸಂದರ್ಭ ಆರೋಪಿ
(ಮೊದಲ ಪುಟದಿಂದ) ಮಹಮದ್ ತಾರಿಖ್ ಇದನ್ನು ಮಡಿಕೇರಿ ಯಲ್ಲಿ ಮಾರಾಟ ಮಾಡಲು ತರುತ್ತಿದ್ದುದಾಗಿ ಬಾಯಿ ಬಿಟ್ಟಿದ್ದಾನೆ. ಈ ಬಗ್ಗೆ ಪೊಲೀಸ್ ತನಿಖೆ ಮುಂದುವರಿಯುತ್ತಿದೆ.
ಎಸ್ಪಿ ರಾಜೇಂದ್ರ ಪ್ರಸಾದ್, ಡಿವೈಎಸ್‍ಪಿ ಸುಂದರರಾಜ್, ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಪ್ರದೀಪ್, ಎಸ್.ಐ. ಬೋಜಪ್ಪ, ಸಿಬ್ಬಂದಿಗಳಾದ ಕಿರಣ್, ರಾಜೇಶ್, ಶಿವರಾಜೇಗೌಡ, ತೀರ್ಥ, ಇಬ್ರಾಹಿಂ ಕಾರ್ಯಾಚರಣೆ ನಡೆಸಿದ್ದಾರೆ