ಸಿದ್ದಾಪುರ, ಅ. 12: ಸಿದ್ದಾಪುರ ಕೈರಳಿ ಸಮಾಜದ ವತಿಯಿಂದ 10ನೇ ವರ್ಷದ ಓಣಂ ಆಚರಣೆಯು ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.ಇಲ್ಲಿನ ಸ್ವರ್ಣಮಾಲ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳಿಗ್ಗೆ 9 ಗಂಟೆಗೆ ಇಂಜಿಲಗೆರೆಯ ಕಾಫಿ ಬೆಳೆಗಾರ ಶ್ರೀಧರನ್ ಮಾಸ್ಟರ್ ದೀಪ ಬೆಳಗಿಸುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ನಡೆದ ಹೂವಿನ ರಂಗೋಲಿ (ಪೂಕಳಂ) ಸ್ಪರ್ಧೆಯನ್ನು ಎಂ.ಕೆ. ಪ್ರತ್ಯುಪ್ನ ಉದ್ಘಾಟಿಸಿದರು. ನಂತರ ಮಾಲ್ದಾರೆ ಚಂಡೆ ವಿದ್ವಾಂಸ ಷಾಜಿ ತಂಡದಿಂದ ಸಿಂಗಾರ ಮೇಳ ನಡೆಯಿತು ಹಾಗೂ ಮಹಾಬಲಿ ಚಕ್ರವರ್ತಿ ವೇಷಧಾರಿಯನ್ನು ಸ್ವಾಗತಿಸಿ ಕರೆತರಲಾಯಿತು. ಇದಾದ ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಶಕ್ತಿ ದಿನ ಪತ್ರಿಕೆಯ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಅವರು ಉದ್ಘಾಟಿಸಿ ನಮ್ಮ ದೇಶ ವಿವಿಧತೆಯಲ್ಲಿ ಏಕತೆ ಇರುವಂತಹ ದೇಶವಾಗಿದ್ದು ಈ ಹಿನೆÀ್ನಲೆಯಲ್ಲಿ ಎಲ್ಲಾ ಸಮುದಾಯ ದವರು ತಮ್ಮದೇ
(ಮೊದಲ ಪುಟದಿಂದ) ಅಚಾರ ವಿಚಾರದಲ್ಲಿ ತೊಡಗಿಸಿ ಕೊಳ್ಳುತ್ತಿರು ವದು ಉತ್ತಮ ಬೆಳವಣಿಗೆ ಎಂದರು. ಜಿಲ್ಲೆಯಲ್ಲಿ ಎಲ್ಲಾ ಸಮುದಾಯದವರು ಕೂಡ ವಿವಿಧ ರೀತಿಯ ಕ್ರೀಡಾ ಕೂಟಗಳನ್ನು ಹಮ್ಮಿಕೊಳ್ಳುತ್ತಿರುವದು ಶ್ಲಾಘನೀಯ ಎಂದರು. ಅದೇ ರೀತಿಯಲ್ಲಿ ಸಾಮೂಹಿಕವಾಗಿ ಓಣಂ ಆಚರಣೆ ಮಾಡುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮನುಷ್ಯನಿಗೆ ಶಾಶ್ವತ ನೆಮ್ಮದಿ ಬೇಕೆಂದ ಅವರು ವಿಚಾರಗಳು ಮರೆಯಾಗದಂತೆ ಎಲ್ಲರೂ ಸೇರಿ ಹಬ್ಬ ಆಚರಿಸುತ್ತಿರುವದರಿಂದ ಭಾವನೆಗಳು ಶಾಶ್ವತವಾಗಿ ಉಳಿಯುತ್ತದೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಹಾಗೂ ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ ಮಲಯಾಳಿ ಜನಾಂಗದವರು ಎಲ್ಲಾ ಕ್ಷೇತ್ರದಲ್ಲಿ ಇದ್ದು ದೇಶ ವಿದೇಶದಲ್ಲಿ ಕೂಡ ಪ್ರಾಬಲ್ಯವನ್ನು ಹೊಂದಿದ್ದಾರೆ ಎಂದ ಅವರು ಭಾಷೆ ಉಳಿದಾಗ ಸಂಸ್ಕøತಿಯು ಉಳಿಯುತ್ತದೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕೊಡಗಿಗೆ ಮಾರಕವಾದಂತಹ ಯೋಜನೆಗಳು ಜಾರಿಯಾದಾಗ ಹಾಗೂ ಸಮಸ್ಯೆಗಳು ಬಂದಾಗ ಮಲಯಾಳಿ ಸಮುದಾಯದವರು ಇತರರೊಂದಿಗೆ ಸೇರಿ ಹೋರಾಟ ಮಾಡಬೇಕೆಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಎಂ. ವಿಜಯ ಮಾತನಾಡಿ ಮಲಯಾಳಿ ಸಮುದಾಯದವರನ್ನು ಒಗ್ಗೂಡಿಸಲು ಹಾಗೂ ಒಂದೇ ವೇದಿಕೆಯಲ್ಲಿ ಕರೆ ತರುವ ನಿಟ್ಟಿನಲ್ಲಿ ಓಣಂ ಆಚರಣೆಯನ್ನು ಹಮ್ಮಿಕೊಳ್ಳುತ್ತಿರುವದಾಗಿ ಮೆಚ್ಚುಗೆ ವ್ಯಕ್ತಪಡಿಸಿದರು. ಸಮಾಜ ಬಂದವರು ಪರಸ್ಪರ ಅನ್ಯೋನ್ಯವಾಗಿರಬೇಕೆಂದ ಅವರು ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಬೇಕೆಂದು ಕಿವಿ ಮಾತು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೈರಳಿ ಸಮಾಜದ ಓಣಂ ಆಚರಣಾ ಸಮಿತಿಯ ಅಧ್ಯಕ್ಷ ವಿ.ಕೆ. ಲೋಕೇಶ್ ಕಳೆದ 10 ವರ್ಷಗಳಿಂದ ಕೈರಳಿ ಸಮಾಜದ ವತಿಯಿಂದ ಸಾಮೂಹಿಕ ಓಣಂ ಹಬ್ಬವನ್ನು ಆಚರಿಸುತ್ತ ಬರುತ್ತಿದ್ದು ಮಲಯಾಳಿ ಸಮುದಾಯವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಹಾಗೂ ಮುಂದಿನ ಪೀಳಿಗೆಗಳಿಗೆ ಸಮುದಾಯದ ಅಚಾರ ವಿಚಾರಗಳನ್ನು ತಿಳಿಸಲು ಇಂಥಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಈಗಾಗಲೇ ಕೈರಳಿ ಸಮಾಜದಲ್ಲಿ ನೂರಾಕ್ಕೂ ಅಧಿಕ ಕುಟುಂಬಗಳು ಸೇರ್ಪಡೆಗೊಂಡಿದೆ ಎಂದರು. ಇದೀಗ ಜಿಲ್ಲೆಯ 10ಕ್ಕೂ ಅಧಿಕ ಭಾಗಗಳಲ್ಲಿ ಸಾಮೂಹಿಕವಾಗಿ ಓಣಂ ಆಚರಿಸುತ್ತಿರುವದು ಉತ್ತಮ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕೈರಳಿ ಸಮಾಜದ ಅಧ್ಯಕ್ಷ ಕೆ.ಕೆ. ಶ್ರೀನಿವಾಸ್ ಮಾತನಾಡಿ ಸಿದ್ದಾಪುರದಲ್ಲಿ ಎಲ್ಲ್ಲರ ಸಹಕಾರದಿಂದ ಜಾತಿ, ಮತ, ಭೇದವಿಲ್ಲದೆ ಸಾಮೂಹಿಕವಾಗಿ ಓಣಂ ಹಬ್ಬವನ್ನು ಆಚರಿಸಲಾಗುತ್ತಿದೆ ಎಂದರು. ಪೋಷಕರು ತಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದÀ್ಯತೆ ನೀಡಬೇಕೆಂದು ಕಿವಿ ಮಾತು ಹೇಳಿದರು. ಅಲ್ಲದೆ ಮಲಯಾಳಿ ಸಂಸ್ಕøತಿ ಅಚಾರ ವಿಚಾರಗಳನ್ನು ಉಳಿಸಿ ಬೆಳೆಸಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಎಂ.ಕೆ. ಮಣಿ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ ಮಲಯಾಳಿ ಸಂಘಟನೆಗಳ ಪದಾಧಿಕಾರಿಗಳು ಹಾಗೂ ವೀರಾಜಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ವಿ.ಸಿ. ಜೀವನ್ ಹಾಗೂ ಸಂಘಟನೆಗಳ ಅಧ್ಯಕ್ಷರುಗಳಾದ ಪಿ.ಡಿ. ಪ್ರಕಾಶ್, ಶಿವನಂದ, ಶಶಿಕುಮಾರ್, ಬಾಲಕೃಷ್ಣ, ಬಿ.ಕೆ. ಭಾಸ್ಕರ, ಎಂ.ಕೆ. ಪ್ರತ್ಯುಪ್ನ, ಹರ್ಷವರ್ದನ್, ಮೋಹನ್ ಇನ್ನಿತರರು ಉಪಸ್ಥಿತರಿದ್ದರು. ಸಾಮೂಹಿಕ ಭೋಜನ (ಓಣಂ ಸದ್ಯ) ಏರ್ಪಡಿಸಲಾಗಿತ್ತು.
ಈ ಸಂದರ್ಭ ಹಿರಿಯ ಮಹಿಳೆಯರನ್ನು ಗೌರವಿಸಿದರು. ಅಲ್ಲದೇ ಅತೀ ಹೆಚ್ಚು ಅಂಕ ಗಳಿಸಿದ ಸಮಾಜ ಬಾಂಧವರ ಮಕ್ಕಳಿಗೆÀ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು. ನಂತರ ಮಹಿಳೆಯರಿಗೆ, ಮಕ್ಕಳಿಗೆ, ಪುರುಷರಿಗೆ ವಿವಿಧ ರಸಮಯ ಕ್ರೀಡಾ ಸ್ಪಧೆರ್É ನಡೆಯಿತು. ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಮನರಂಜಿಸಿತು. ಇದಾದ ನಂತರ ಕೇರಳದ ಪ್ರಖ್ಯಾತ ಗ್ರಾಮೀಣ ಹಾಡು ಹಾಗೂ ನೃತ್ಯ ಪ್ರದರ್ಶನ ತಂಡದಿಂದ ಸೊಗಸಾದ ರಸಮಂಜರಿ ಕಾರ್ಯಕ್ರಮವು ಮನಸೂರೆ ಗೊಂಡಿತು.
ಕೈರಳಿ ಸಮಾಜದ ಕಾರ್ಯದರ್ಶಿ ರೆಜಿತ್ ಕುಮಾರ್ ಗುಹ್ಯ ಸ್ವಾಗತಿಸಿ, ಸುನೀತ ಹಾಗೂ ರುಕ್ಮಿಣಿ ನಿರೂಪಿಸಿದರು. ಆರ್. ಸುಬ್ರಮಣಿ ವಂದಿಸಿದರು.