ಸುಂಟಿಕೊಪ್ಪ, ಅ.12: ಸುಂಟಿಕೊಪ್ಪ ಸಂತಮೇರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸುಸಜ್ಜಿತವಾಗಿ ಹೊಸ ಶೌಚಾಲಯನ್ನು ನಿರ್ಮಿಸಲಾಗಿದೆ. ಬಾಲಕ ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ವಿದೆ ಆದರೂ ಕೆಲವರು ಅತ್ಯುತ್ತಮ ವಾಗಿ ವಿದ್ಯಾ ಕ್ಷೇತ್ರಕ್ಕೆ ಸೇವೆ ಸಲ್ಲಿಸುತ್ತಿರುವ ಶಾಲೆಯ ಬಗ್ಗೆ ಕಪೋಲ ಕಲ್ಪಿತ ಸುದ್ದಿಯನ್ನು ಪತ್ರಿಕೆಗೆ ಹೇಳಿಕೆ ನೀಡಿ ಶಾಲೆಗೆ ಕಪ್ಪು ಚುಕ್ಕಿ ತಂದಿರುವದು ಖಂಡನೀಯವಾಗಿದೆ ಎಂದು ಶಾಲೆಯ ಆಡಳಿತ ಮಂಡಳಿ ತಿಳಿಸಿದೆ.

ಸುಂಟಿಕೊಪ್ಪ ಹೋಬಳಿಯಲ್ಲಿ ವಿದ್ಯಾ ಕ್ಷೇತ್ರದಲ್ಲಿ ಅತ್ಯುತ್ತಮ ಕಾಂiÀರ್i ನಿರ್ವಹಣೆಯಿಂದ ಸಂಸ್ಥೆ ಹೆಸರುಗಳಿಸಿದೆ. ವಿದ್ಯಾರ್ಥಿಗಳ ವಿದ್ಯಾರ್ಜನೆಗೆ, ಕ್ರೀಡಾ ಕ್ಷೇತ್ರದಲ್ಲಿ ಹಾಗೂ ಆರೋಗ್ಯಕ್ಕೂ ಒತ್ತು ನೀಡುತ್ತಾ ಉತ್ತಮ ಸೇವೆ ಸಲ್ಲಿಸುತ್ತಿದೆ.

ಶಾಲೆಯ ಬಾಲಕ- ಬಾಲಕಿಯ ರಿಗೆ ಸುಸಜ್ಜಿತ ಶೌಚಾಲಯ ಪ್ರತ್ಯೇಕ ವಾಗಿ ನಿರ್ಮಿಸಲಾಗಿದೆ ವಿದ್ಯಾರ್ಥಿಗಳ ಸಂಖ್ಯೆಯ ಆಧಾರದಲ್ಲಿ ಮತ್ತೊಂದು ಶೌಚಾಲಯ ನಿರ್ಮಿಸಲಾಗಿದೆ. ಶಾಲೆಯ ಹಳೆಯ ಉಪಯೋಗಕ್ಕೆ ಬಳಸದ ಶೌಚಾಲಯದ ಭಾವ ಚಿತ್ರವನ್ನು ತೆಗೆದು ಶಾಲೆಗೆ ಕೆಟ್ಟ ಹೆಸರು ತರಲು ಕೆಲ ಪಟ್ಟಭದ್ರ ಹಿತಾಸÀಕ್ತಿಗಳು ಪ್ರಯತ್ನಿಸುತ್ತಿರುವದು ಆಡಳಿತ ಮಂಡಳಿಗೆ ನೋವನ್ನುಂಟು ಮಾಡಿದೆ ಎಂದು ವಿಷಾದ ವ್ಯಕ್ತಪಡಿಸಿದೆ.