ಗೋಣಿಕೊಪ್ಪಲು, ಅ. 12: ಪುಣೆ ಎಸ್‍ಎನ್‍ಬಿಪಿ ಸಂಸ್ಥೆ ವತಿಯಿಂದ ಹಾಕಿ ಇಂಡಿಯಾ ಸಹಯೋಗದಲ್ಲಿ ನಡೆದ 16 ವಯೋಮಿತಿಯ ಆಲ್ ಇಂಡಿಯಾ ಹಾಕಿ ಕ್ರೀಡಾಕೂಟದಲ್ಲಿ ಹಾಕಿ ಕೂರ್ಗ್ ತಂಡಕ್ಕೆ ಶಿಸ್ತಿನ ತಂಡ ಎಂಬ ಪ್ರಶಸ್ತಿ ದೊರೆತಿದೆ.

ದೇಶದ 32 ತಂಡಗಳು ಭಾಗವಹಿಸಿದ್ದ ಕ್ರೀಡಾಕೂಟದಲ್ಲಿ ಕೂರ್ಗ್ ತಂಡ 4 ನೇ ಸ್ಥಾನ ಪಡೆದುಕೊಂಡಿತ್ತು. ಇದರಂತೆ ಶಿಸ್ತುಬದ್ಧ ಅಟಕ್ಕೆ ಶಿಸ್ತಿನ ತಂಡ ಎಂಬ ಟ್ರೋಫಿ ನೀಡಲಾಯಿತು.