ಶನಿವಾರಸಂತೆ, ಅ. 13: ದುಂಡಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನೂತನ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಸಂಬಂಧ ದುಂಡಳ್ಳಿ ಗ್ರಾ.ಪಂ. ಅಧ್ಯಕ್ಷ ಸಿ.ಜೆ. ಗಿರೀಶ್ ನೇತೃತ್ವದಲ್ಲಿ ಪಂಚಾಯಿತಿ ಆಡಳಿತ ಮಂಡಳಿ ಪಾಲಿಬೆಟ್ಟ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅಲ್ಲಿನ ಕಸ ವಿಲೇವಾರಿ ಘಟಕದ ಬಗ್ಗೆ ಮಾಹಿತಿ ಪಡೆದರು.

ದುಂಡಳ್ಳಿ ಗ್ರಾಮ ಪಂಚಾಯಿತಿಗೆ ಕಸ ವಿಲೇವಾರಿ ಘಟಕ ಸ್ಥಾಪನೆ ಮಾಡಲು ಈಗಾಗಲೇ ಜಾಗ ಮಂಜೂರಾಗಿದ್ದು, ಕಸ ವಿಲೇವಾರಿ ಘಟಕಕ್ಕೆ ಸರಕಾರದಿಂದ ರೂ. 25 ಲಕ್ಷ ಅನುದಾನ ಸಿಗುವ ಭರವಸೆ ಇರುವದರಿಂದ ದುಂಡಳ್ಳಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಪಾಲಿಬೆಟ್ಟ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಮಾಹಿತಿ ಪಡೆಯಿತು.

ಪಾಲಿಬೆಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಬೋಪಣ್ಣ ಮತ್ತು ಸದಸ್ಯರು, ಅಭಿವೃದ್ಧಿ ಅಧಿಕಾರಿ ಸಿ.ಎ. ಅಬ್ದುಲ್ ಅವರು ದುಂಡಳ್ಳಿ ಗ್ರಾಮ ಪಂಚಾಯಿತಿ ತಂಡಕ್ಕೆ ಕಸ ವಿಲೇವಾರಿ ಘಟಕದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.

ತಂಡದಲ್ಲಿ ಪಂಚಾಯಿತಿ ಅಧ್ಯಕ್ಷ ಸಿ.ಜೆ. ಗಿರೀಶ್, ಸದಸ್ಯರುಗಳಾದ ಎನ್.ಕೆ. ಸುಮತಿ, ಮನು ಹರೀಶ್, ನೇತ್ರಾವತಿ, ಬಿಂದಮ್ಮ, ರೂಪಾ, ಕಮಲಮ್ಮ, ಎ.ಆರ್. ರಕ್ಷಿತ, ಎಂ.ಸಿ. ಹೂವಣ್ಣ, ಯೋಗೇಂದ್ರ, ಎಸ್.ಸಿ. ಸಂತೋಷ್, ಬಿ.ಎಂ. ಪಾರ್ವತಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ಹಾಗೂ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸುಬ್ರಮಣಿ ಇದ್ದರು.