ನಾಪೋಕ್ಲು, ಅ. 14: ಸೊಲಾರ್ ವಿದ್ಯುತ್ ಘಟಕಗಳನ್ನು ಸ್ಥಾಪಿಸು ವದರ ಮೂಲಕ ವಿದ್ಯುತ್ ಕ್ಷಾಮವನ್ನು ತಪ್ಪಿಸಬಹುದು ಎಂದು ಚೆಸ್ಕಾಂ ಕೊಡಗು ಮುಖ್ಯ ಕಾರ್ಯಪಾಲಕ ಅಭಿಯಂತರ ಸೋಮಶೇಖರ್ ಹೇಳಿದರು.
ಕೊಡಗಿನಲ್ಲಿ ಪ್ರಥಮವಾಗಿ ಕೊಳಕೇರಿಯಲ್ಲಿ ಕೇಟೋಳಿರ ಕುಟ್ಟಪ್ಪ ಎಂಬವರ ಮನೆಯ ಆವರಣದಲ್ಲಿ 18 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿದ ಸೋಲಾರ್ ವಿದ್ಯುತ್ ಘಟಕದಿಂದ ವಿದ್ಯುತ್ ಲೈನ್ಗೆ ಸಂಪರ್ಕ ಒದಗಿಸಿ ಮಾತನಾಡಿದರು. ಸೋಲಾರ್ ವಿದ್ಯುತ್ ಘಟಕ ಸ್ಥಾಪಿಸುವದರಿಂದ ತಮ್ಮ ಮನೆಬಳಕೆಗೆ ಬಳಸಿದ ಬಳಿಕ ಹೆಚ್ಚುವರಿ ವಿದ್ಯುತ್ತನ್ನು ಚೆಸ್ಕಾಂ ಖರೀದಿಸುವದರಿಂದ ಆರ್ಥಿಕವಾಗಿ ಸದೃಢವಾಗಲು ಸಾಧ್ಯವಾಗಿದೆ.
ಪ್ರತಿಯೊಬ್ಬರೂ ಇಂತಹ ಘಟಕಗಳನ್ನು ಸ್ಥಾಪಿಸುವದರಿಂದ ವಿದ್ಯುತ್ ಕೊರತೆಯನ್ನು ನೀಗಿಸ ಬಹುದಾಗಿದೆ ಎಂದರು. ಈ ಸೋಲಾರ್ ಘಟಕದಿಂದ ಉತ್ಪತ್ತಿಯಾದ ವಿದ್ಯುತ್ತನ್ನು ಮಾಲೀಕರು ಚೆಸ್ಕಾಂಗೆ ನೀಡವದರಿಂದ ಚೆಸ್ಕಾಂ 7.08 ರೂ.ನಂತೆ ಯೂನಿಟ್ ನೀಡಿ ಖರೀದಿಸುv್ತÀದೆ. ಇದರಿಂದ ತಿಂಗಳಿಗೆ ಸುಮಾರು 15 ಸಾವಿರ ರೂ. ಆದಾಯ ಮಾಲೀಕರಿಗೆ ದೊರಕಲಿದೆ ಎಂದರು. ಈ ಸಂದರ್ಭ ಘಟಕದ ಮಾಲೀಕ ಕೇಟೋಳಿರ ಕುಟ್ಟಪ್ಪ, ಮಡಿಕೇರಿ ಸಹಾಯಕ ಕಾರ್ಯಪಾಲಕ ಅಭಿಯಂತರ ದೊಡ್ಡಮನಿ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಪುಷ್ಪಾ, ಮೊಹಮ್ಮದ್ ಅಜೀಜ್, ಬ್ರಾಡ್ವೇ ಇಂಡಿಯಾ ನಿರ್ದೇಶಕ ಬಾಲಕೃಷ್ಣ ನಾಯಕ್, ಸೇರಿದಂತೆ ಇನ್ನಿತರರು ಇದ್ದರು.