ಮಡಿಕೇರಿ, ಅ. 14: ಪ್ರಧಾನಿ ಮೋದಿ ಅವರ ಬಗ್ಗೆ ಮಿತಿ ಮೀರಿದ ಮಾತುಗಳನ್ನಾಡಿ ಟೀಕೆಗೆ ಗುರಿಯಾಗಿದ್ದ ಸಚಿವ ರೋಷನ್ ಬೇಗ್ ಸರಣಿ ಟ್ವೀಟ್ ಮೂಲಕ ಕ್ಷಮೆ ಕೋರಿದ್ದಾರೆ. ನಮ್ಮ ಪ್ರಧಾನಮಂತ್ರಿಗಳ ಮೇಲೆ ನನಗೂ ಅತ್ಯುನ್ನತ ಗೌರವ ಮತ್ತು ಭಕ್ತಿಯಿದೆ. ಅವರು ಬಿಜೆಪಿ ಪ್ರಧಾನಮಂತ್ರಿ ಮಾತ್ರವಲ್ಲ, ಅವರು ನಮ್ಮ ದೇಶದ ಪ್ರಧಾನಮಂತ್ರಿಯಾಗಿದ್ದಾರೆ. ಹೀಗಾಗಿ ಪ್ರಧಾನಮಂತ್ರಿಗಳ ವಿರುದ್ಧದ ನನ್ನ ಹೇಳಿಕೆಯಿಂದ ಹಲವರ ಮನಸ್ಸಿಗೆ ನೋವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ. ಇನ್ನುಂದೆ ನಾನು ಎಂದಿಗೂ ಮೋದಿ ಪ್ರಧಾನಮಂತ್ರಿಗಳ ವಿರುದ್ಧ ಅಂತಹ ಅವಾಚ್ಯ ಶಬ್ದಗಳನ್ನು ಬಳಸುವದಿಲ್ಲ ಎಂದು ಸರಣಿ ಟ್ವೀಟ್ ಮಾಡಿದ್ದಾರೆ.
100 ಐಸಿಸ್ ಉಗ್ರರ ಶರಣಾಗತಿಸಿರಿಯಾ, ಅ. 14: ವಿದ್ವಂಸಕ ಕೃತ್ಯಗಳನ್ನು ಎಸಗುವ ಮೂಲಕ ಜಗತ್ತಿಗೆ ಕಂಟಕವಾಗಿದ್ದ ಇಸ್ಲಾಮಿಕ್ ಸ್ಟೇಟ್ ಉಗ್ರರ ಪ್ರಭಾವ ದಿನಕಳೆದಂತೆ ಕ್ಷೀಣಿಸುತ್ತಿದ್ದು, ಸಿರಿಯಾದಲ್ಲಿ 100ಕ್ಕೂ ಹೆಚ್ಚು ಉಗ್ರರು ಶರಣಾಗಿದ್ದಾರೆ. ಸಿರಿಯಾದ ರಕ್ಕಾದಲ್ಲಿ ತಮ್ಮ ಪ್ರಭಾವ ಕಳೆದುಕೊಂಡಿರುವ ಇಸಿಸ್ ಉಗ್ರ ಸಂಘಟನೆಗೆ ಸೇರಿದ 100ಕ್ಕೂ ಹೆಚ್ಚು ಉಗ್ರರು ಕಳೆದ 24 ಗಂಟೆಯಲ್ಲಿ ಅಮೇರಿಕಾ ನೇತೃತ್ವದ ಒಕ್ಕೂಟದ ಮುಂದೆ ಶರಣಾಗಿದ್ದಾರೆ. ಸದ್ಯ ಭಯೋತ್ಪಾದಕರ ಧಾಳಿಗೆ ತುತ್ತಾಗಿದ್ದ ರಕ್ಕಾದಲ್ಲಿ ಯೋಧರು ತಮ್ಮ ಅಧಿಪತ್ಯ ಸಾಧಿಸಿದ್ದಾರೆ. ಅಮೆರಿಕ, ರಷ್ಯಾ ಸಿರಿಯಾದ ಯೋಧರು ಭಯೋತ್ಪಾದಕರ ವಿರುದ್ಧ ಸಮರ ಸಾರಿದ್ದು ದಿನ ಕಳೆದಂತೆ ಭಯೋತ್ಪಾದಕರ ಜಂಗಾಬಲವನ್ನು ಕುಗ್ಗಿಸುತ್ತಿದ್ದಾರೆ. ಶರಣಾಗಿರುವ 100 ಇಸಿಸ್ ಉಗ್ರರ ಪೈಕಿ ವಿದೇಶಿ ಉಗ್ರರು ರಕ್ಕಾದಲ್ಲಿ ಉಳಿದುಕೊಳ್ಳಲು ಅವಕಾಶ ನಿರಾಕರಿಸಲಾಗಿದೆ.