ಮಡಿಕೇರಿ, ಅ. 13 : ತಾ. 17 ರಂದು ತಲಕಾವೇರಿಯಲ್ಲಿ ಜರುಗುವ ತುಲಾ ಸಂಕ್ರಮಣ ತೀರ್ಥೋದ್ಭವ ತುಲಾ ಸಂಕ್ರಮಣ ಜಾತ್ರೆ ಸಂಬಂಧ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. ಭಕ್ತಿ ಭಾವದಿಂದ ಆಚರಿಸುವ ಪವಿತ್ರ ತೀರ್ಥೋದ್ಭವ ಜಾತ್ರೆಗೆ ಅಗತ್ಯ ಸಿದ್ಧತೆ ಮಾಡಿ ಕೊಳ್ಳಲಾಗಿದೆ. 30 ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ತಲಕಾವೇರಿ ಯಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ, ಕುಡಿಯುವ ನೀರು, ತಾತ್ಕಾಲಿಕ ಶೌಚಾಲಯ ನಿರ್ಮಾಣಕ್ಕೆ ವ್ಯವಸ್ಥೆ ಮಾಡಲಾಗಿದೆ. ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ಪ್ಲಾಸ್ಟಿಕ್ ಬಳಸ ದಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಪಿಂಡ ಪ್ರಧಾನ ಕಾರ್ಯಗಳಿಗೆ ಅಗತ್ಯ ವ್ಯವಸ್ಥೆ ಮಾಡ ಲಾಗಿದೆ. ಸಿಸಿಟಿವಿ ಅಳವಡಿಸ ಲಾಗಿದೆ. ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಕಾವೇರಿ ಮಾತೆ ಕುರಿತು ಭಕ್ತಿ ಗೀತಾಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ.

(ಮೊದಲ ಪುಟದಿಂದ)ಸುಗಮ ಸಂಚಾರಕ್ಕೆ ಏಕಮುಖ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಭಾಗಮಂಡಲ ಸುತ್ತಮುತ್ತ 10 ಕಿ.ಮೀ. ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಮಾತನಾಡಿ ತಲಕಾವೇರಿ ತೀರ್ಥೋದ್ಭವ ಜಾತ್ರೆಗೆ ನೆರೆಹೊರೆಯ ರಾಜ್ಯದವರು ಸೇರಿದಂತೆ ಭಕ್ತಾದಿಗಳು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸುವ ಸಾಧ್ಯತೆ ಇರುವದರಿಂದ 600 ಮಂದಿ ಪೊಲೀಸರು, 150 ಮಂದಿ ಎನ್.ಸಿ.ಸಿ. ಕೆಡೆಟ್‍ಗಳು, ಮೂವರು ಡಿವೈಎಸ್‍ಪಿ, 6 ಇನ್ಸೆಪೆಕ್ಟರ್‍ಗಳು, 50 ಮಂದಿ ಸಬ್ ಇನ್ಸ್‍ಪೆಕ್ಟರ್ ಮತ್ತು ಸಹಾಯಕ ಸಬ್ ಇನ್ಸ್‍ಪೆಕ್ಟರ್‍ನ್ನು ನಿಯೋಜಿಸಲಾಗಿದೆ. 8 ಪೊಲೀಸ್ ತುಕಡಿ ನಿಯೋಜಿಸ ಲಾಗಿದೆ ಎಂದು ಮಾಹಿತಿ ನೀಡಿದರು.

ತಲಕಾವೇರಿಯಲ್ಲಿ ವಾಹನಗಳ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಅಲ್ಲಲ್ಲಿ ಸೂಚನಾ ಫಲಕವನ್ನು ಅಳವಡಿಸಲಾಗಿದೆ. 20 ಕಡೆ ಸಿಸಿಟಿವಿ ಅಳವಡಿಸಲಾಗುತ್ತದೆ. ಮಾರ್ಗ ಮಧ್ಯದಲ್ಲಿ 10 ವೀಡಿಯೋ ಮಾಡಲಾಗುತ್ತದೆ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್ ಮಾತನಾಡಿ, ದೇವಾಲಯದ ವತಿಯಿಂದ ಕೈಗೊಳ್ಳ ಲಾಗಿರುವ ಅಭಿವೃದ್ಧಿ ಕಾಮಗಾರಿಗಳು: ರೂ. 10 ಲಕ್ಷ ವೆಚ್ಚದಲ್ಲಿ ಶ್ರೀತಲಕಾವೇರಿ ದೇವಾಲಯ ದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ರೂ. 13.60 ಲಕ್ಷ ವೆಚ್ಚದಲ್ಲಿ ತಲಕಾವೇರಿಯ ವಾಹನ ನಿಲ್ದಾಣ ಪ್ರದೇಶದಲ್ಲಿ ಶೌಚಾಲಯ ನಿರ್ಮಾಣ. ಶ್ರೀಭಗಂಡೇಶ್ವರ ದೇವಾಲಯದ ಮುಂಭಾಗ ಭಕ್ತಾದಿಗಳು, ಯಾತ್ರಾರ್ಥಿಗಳ ಸುಗಮ ಸಂಚಾರಕ್ಕಾಗಿ ಇಂಟರ್‍ಲಾಕ್ ಅಳವಡಿಸುವ ಕಾಮಗಾರಿ ರೂ. 9 ಲಕ್ಷ. ಪ್ರಗತಿಯಲ್ಲಿದೆ ಎಂದರು.

ಉದ್ದೇಶಿತ ಕಾಮಗಾರಿಗಳು: ಶ್ರೀತಲಕಾವೇರಿ ದೇವಾಲಯಕ್ಕೆ ಸ್ಟೀಲ್ ಗೇಟ್ ಅಳವಡಿಸುವದು. ಶ್ರೀ ಭಗಂಡೇಶ್ವರ ದೇವಾಲಯದ ತಾಮ್ರದ ಮೇಲ್ಛಾವಣಿ ದುರಸ್ತಿ. ಶ್ರೀಭಗಂಡೇಶ್ವರ ದೇವಾಲಯದ ಹಿಂಭಾಗದಲ್ಲಿರುವ ಹಳೆಯ ಯಾತ್ರಿನಿವಾಸ ಕಟ್ಟಡದ ಜೀರ್ಣೋದ್ಧಾರ. ಶ್ರೀಭಗಂಡೇಶ್ವರ ದೇವಾಲಯದ ಪ್ರವೇಶ ದ್ವಾರಗಳ ಬಾಗಿಲುಗಳ ನಿರ್ಮಾಣ (ದಾನಿಗಳ ನೆರವಿನಿಂದ) ನಿರ್ವಹಿಸಲಾಗುತ್ತದೆ ಎಂದರು.

ತುಲಾ ಸಂಕ್ರಮಣ ಜಾತ್ರೆಯ ಪ್ರಯುಕ್ತ ಶಾಸ್ತ್ರೋಕ್ತವಾಗಿ ಜರುಗುವ ಧಾರ್ಮಿಕ ಕಾರ್ಯಗಳು ಈಗಾಗಲೇ ಪ್ರಾರಂಭಗೊಂಡಿರುತ್ತವೆ. ತುಲಾ ಸಂಕ್ರಮಣ ಜಾತ್ರೆಯ ಪ್ರಯುಕ್ತ ಮಾನ್ಯ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಪೂರ್ವಸಿದ್ಧತಾ ಸಭೆ ಹಾಗೂ ಕೆ.ಜಿ. ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ಪೂರ್ವ ಸಿದ್ಧತೆಯ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಲಾಗಿರುತ್ತದೆ. ವಿವಿಧ ಇಲಾಖೆ ಗಳು ಜಾತ್ರೆಯ ಪೂರ್ವಸಿದ್ಧತೆಗಳನ್ನು ಕೈಗೊಳ್ಳುತ್ತಿದ್ದಾರೆ. ಲೋಕೋಪ ಯೋಗಿ ಇಲಾಖೆ, ಜಿಲ್ಲಾ ಪಂಚಾಯತ್, ಆರೋಗ್ಯ, ಪೊಲೀಸ್, ಪ್ರಾದೇಶಿಕ ಸಾರಿಗೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಭಾಗಮಂಡಲ ಗ್ರಾಮ ಪಂಚಾಯಿತಿ, ಭಾಗಮಂಡಲ ಹಾಗೂ ಇತರ ಇಲಾಖೆಗಳು ತುಲಾ ಸಂಕ್ರಮಣ ಜಾತ್ರೆಯು ಯಶಸ್ವಿಯಾಗಿ ಜರುಗಲು ಶ್ರಮ ವಹಿಸುತ್ತಿವೆ. ಕೆ.ಎಸ್.ಆರ್.ಟಿ.ಸಿ., ವತಿಯಿಂದ 30 ಬಸ್‍ಗಳು ತಾ. 16 ರಿಂದ ಕಾರ್ಯಾಚರಣೆ ಮಾಡಲಿವೆ ಹಾಗೂ ನವೆಂಬರ್ 16 ರವರೆಗೆ ಸಂಚರಿಸಲಿವೆ ಎಂದು ಮಾಹಿತಿ ನೀಡಿದರು.

ತಲಕಾವೇರಿ ಕ್ಷೇತ್ರದಲ್ಲಿ ಪಾರ್ಕಿಂಗ್ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಇತ್ಯಾದಿಗಳನ್ನು ಮಾಡ ಲಾಗಿದೆ. ಶುಚಿತ್ವವನ್ನು ಕಾಪಾಡಲು ಹೆಚ್ಚಿನ ಮಹತ್ವ ನೀಡಲಾಗಿದ್ದು, ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸ ಲಾಗಿದೆ. ತ್ರಿವೇಣಿ ಸಂಗಮದಲ್ಲಿ ತೀರ್ಥಸ್ನಾನ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಜಾತ್ರೆಯ ಸಂದರ್ಭದಲ್ಲಿ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡುವ ಮಹಿಳಾ ಭಕ್ತಾದಿಗಳ ಸುರಕ್ಷತೆಗಾಗಿ ವಾಹನ ನಿಲ್ದಾಣ ಪ್ರದೇಶದಲ್ಲಿ ಹಾಗೂ ತ್ರಿವೇಣಿ ಸಂಗಮದಲ್ಲಿ ಪರದೆಗಳನ್ನು (ಶೇಡ್ ನೆಟ್) ಅಳವಡಿಸಲಾಗಿದೆ.

ಜಾತ್ರೆಯ ಸಂದರ್ಭದಲ್ಲಿ ಶುಚಿತ್ವ ಕಾರ್ಯವನ್ನು ನಿರ್ವಹಿಸಲು 15 ಪೌರಕಾರ್ಮಿಕರನ್ನು ನಿಯೋಜಿಸ ಲಾಗಿದೆ. ಶ್ರೀಭಗಂಡೇಶ್ವರ ಕ್ಷೇತ್ರದಲ್ಲಿ 20 ಹಾಗೂ ತಲಕಾವೇರಿ ಕ್ಷೇತ್ರದಲ್ಲಿ 10 ತಾತ್ಕಾಲಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಶ್ರೀಭಗಂಡೇಶ್ವರ ಕ್ಷೇತ್ರದಲ್ಲಿ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಮುಡಿ ತೆಗೆಯುವ ಹಾಗೂ ಪಿಂಡ ಪ್ರದಾನ ಕಾರ್ಯ ನಡೆಸಲಾಗುತ್ತದೆ.

ದೇವಾಲಯದ ವತಿಯಿಂದ ವಿದ್ಯುತ್ ಬೆಳಕಿನ ವ್ಯವಸ್ಥೆ, ಧ್ವನಿವರ್ಧಕ ವ್ಯವಸ್ಥೆ, ಭಕ್ತಾದಿಗಳು ತೀರ್ಥೋದ್ಭ ವವನ್ನು ಸುಗಮವಾಗಿ ವೀಕ್ಷಿಸಲು ವಿದ್ಯುನ್ಮಾನ ಪರದೆಯನ್ನು ಅಳವಡಿಸಲಾಗಿರುತ್ತದೆ. ಭಕ್ತಾದಿಗಳ ಸುರಕ್ಷತೆಯ ದೃಷ್ಟಿಯಿಂದ ಆಯಕಟ್ಟಿನ ಸ್ಥಳಗಳಲ್ಲಿ ಅಗತ್ಯ ಪ್ರಮಾಣದ ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ತುಲಾ ಸಂಕ್ರಮಣ ಜಾತ್ರೆಯ ಧಾರ್ಮಿಕ ಕಾರ್ಯದ ಅಂಗವಾಗಿ ತಾ. 14 ರಿಂದ 16 ರವರೆಗೆ ಶ್ರೀಭಗಂಡೇಶ್ವರ ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳಿಗೆ ಪ್ರಸಾದದ ರೂಪದಲ್ಲಿ ಪೂರ್ವಕಾಲದ ಸಂಪ್ರದಾಯದಂತೆ ಪಡಿಯಕ್ಕಿಯನ್ನು ವಿತರಿಸಲಾಗುತ್ತದೆ ಎಂದು ಹೇಳದರು.

ಜಾತ್ರೆಯ ಸಂದರ್ಭದಲ್ಲಿ ಪಿಂಡ ಪ್ರದಾನ ಮಾಡುವ ಭಕ್ತಾದಿಗಳ ಅನುಕೂಲಕ್ಕಾಗಿ ತ್ರಿವೇಣಿ ಸಂಗಮದಲ್ಲಿ ಎರಡು ಸ್ಥಳಗಳಲ್ಲಿ ಪಿಂಡ ಪ್ರದಾನ ವಸ್ತು ಮಾರಾಟ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಬ್ರಹ್ಮಗಿರಿಗೆ ಬೆಳಗ್ಗೆ 8-30 ರಿಂದ ಸಂಜೆ 4 ಗಂಟೆಯವರೆಗೆ ಪ್ರವೇಶಾವಕಾಶ ಕಲ್ಪಿಸಲಾಗಿದೆ.

ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ವತಿಯಿಂದ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸ ಲಾಗಿದೆ. ತುಲಾ ಸಂಕ್ರಮಣ ಜಾತ್ರೆಯು ನಾಡಿನ ಪ್ರಮುಖ ಜಾತ್ರೆಯಾಗಿದ್ದು, ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳು, ಯಾತ್ರಾರ್ಥಿಗಳು ದೇವಾಲಯದ ಸಂಪ್ರದಾಯಗಳನ್ನು ಪಾಲಿಸಿ ತುಲಾ ಸಂಕ್ರಮಣ ಜಾತ್ರೆಯನ್ನು ಯಶಸ್ವಿ ಗೊಳಿಸಬೇಕೆಂದು ಕೋರಿದರು.