ಮಡಿಕೇರಿ, ಅ.13 : ಹಿಂದೂ ಮಲಯಾಳಿ ಬಾಂಧವರನ್ನು ಒಗ್ಗೂಡಿಸುವ ಮೂಲಕ ಕೇರಳದ ಶ್ರೀಮಂತ ಸಂಸ್ಕøತಿ, ಸಂಪ್ರದಾಯ ಗಳನ್ನು ಸಂರಕ್ಷಿಸಿ ಯುವ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಹಿಂದೂ ಮಲಯಾಳಿ ಸಂಘದ ವತಿಯಿಂದ ತಾ.15 ರಂದು ನಗರದ ಕೆಳಗಿನ ಗೌಡ ಸಮಾಜದಲ್ಲಿ ‘ಓಣಾಘೋಷಂ ಓಣಂ ಸದ್ಯ 2017” ಹಬ್ಬವನ್ನು ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ.ಎಸ್.ರಮೇಶ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಓಣಂ ಪ್ರಯುಕ್ತ ಅಂದು ಬೆಳಗ್ಗೆ 6 ರಿಂದ 9 ಗಂಟೆಯವರೆಗೆ ಪÀÇಕಳಂ ಸ್ಪಧೆರ್É ನಾಲ್ಕು ಮಂದಿಯನ್ನು ಒಳಗೊಂಡ ತಂಡಗಳಿಗೆ ಸೀಮಿತವಾಗಿ ಕೆಳಗಿನ ಗೌಡ ಸಮಾಜದಲ್ಲಿ ನಡೆಯಲಿದೆ ಎಂದರು. ಬೆಳಗ್ಗೆ 9.30 ಗಂಟೆಗೆ ನಗರದ ಜನರಲ್ ಕೆ.ಎಸ್.ತಿಮ್ಮಯ್ಯ ವೃತ್ತದ ಮೈಸೂರು ರಸ್ತೆಯಿಂದ ಭವ್ಯ ಸಾಂಪ್ರದಾಯಿಕ ಓಣಾಘೋಷಂ ಮೆರವಣಿಗೆ ವಿವಿಧ ಕಲಾತಂಡ, ಮಾವೇಲಿ ಮತ್ತು ಚಂಡೆ ವಾದ್ಯಗಳೊಂದಿಗೆ ಸಾಗಲಿದೆÉ. ಆಕರ್ಷಕ ಮೆರವಣಿಗೆಗೆ ಮಡಿಕೇರಿಯ ಗುತ್ತಿಗೆದಾರರಾದ ಕೆ.ಬಿ.ನಾಗೇಶ್ ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ತಂಡಗಳು 5x5 ಅಡಿಯ ಚೌಕಾಕಾರದ ಜಾಗದಲ್ಲಿ ವಿವಿಧ ಬಗೆಯ ಹೂವುಗಳನ್ನು ಮಾತ್ರ ಬಳಸಿ ರಂಗೋಲಿಯನ್ನು ಬಿಡಿಸಬೇಕು. ಸ್ಪರ್ಧಾ ತಂಡಗಳು ತಮ್ಮ ಹೆಸರನ್ನು ಲತಾ ರಾಜನ್ (8762515621) ಇವರಲ್ಲಿ ನೋಂದಾಯಿಸಿ ಕೊಳ್ಳಬಹುದಾಗಿದೆ. ವಿಜೇತರಿಗೆ ಆಕರ್ಷಕ ಟ್ರೋಫಿ ಹಾಗೂ ಬಹುಮಾನ ನೀಡಲಾಗುವದೆಂದು ತಿಳಿಸಿದರು.
ಮಧ್ಯಾಹ್ನ 2 ಗಂಟೆಗೆ ನಡೆಯಲಿರುವ ಓಣಂ ಹಬ್ಬದ ಸಭಾ ಕಾರ್ಯಕ್ರಮವನ್ನು ಕಡಗದಾಳು ಗ್ರಾಮ ಪಂಚಾಯ್ತಿ ಮಾಜಿ ಸದಸ್ಯೆ ರಾಜಮ್ಮ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಕೆ.ಎಸ್.ರಮೇಶ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಆಕಾಶವಾಣಿ ಕಾರ್ಯ ನಿರ್ವಾಹಕರಾದ ಪಿ.ಬಾಲನ್ ಹಾಗೂ ಜ್ಞಾನಗಂಗಾ ಎಜುಕೇಷನಲ್ ಟ್ರಸ್ಟ್ನ ಚೇರ್ಮನ್ ಟಿ.ಕೆ.ಸುಧೀರ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪ್ರತಿಭಾ ಪÀÅರಸ್ಕಾರ
ಸಮಾರಂಭದಲ್ಲಿ ಸಂಘದ ಸದಸ್ಯರ ಮಕ್ಕಳ ಪ್ರತಿಭಾ ಪÀÅರಸ್ಕಾರ ಕಾರ್ಯಕ್ರಮ ನಡೆಯಲಿದೆ. ಕಳೆದ ಸಾಲಿನ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳು ಅಂಕಪಟ್ಟಿಯ ಪ್ರತಿಯೊಂದಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಈ ಬಗ್ಗೆ ಕೆ.ವಿ. ಧರ್ಮೇಂದ್ರ, ಪ್ರಧಾನ ಕಾರ್ಯದರ್ಶಿ (9481069188), ನಿರ್ದೇಶಕ ಸುಬ್ರಮಣಿ (9449768767), ಸಂಘಟನಾ ಕಾರ್ಯದರ್ಶಿ ಪ್ರಮೋದ್ (8762898225) ಅವರನ್ನು ಸಂಪರ್ಕಿಸಬಹುದೆಂದು ರಮೇಶ್ ಹೇಳಿದರು.
ಸಭಾ ಕಾರ್ಯಕ್ರಮದ ನಂತರ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ. ಕೇರಳದ ಕನವು ವಲ್ಲವನಾಡ್ ತಂಡದಿಂದ ಗಾನಮೇಳವನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಓಣಂ ಸದ್ಯ ಆಚರಣಾ ಸಮಿತಿ ಅಧ್ಯಕ್ಷ ಎಂ. ಅಚ್ಯುತನ್ ನಾಯರ್, ಖಜಾಂಚಿ ಪಿ.ಟಿ.ಉತ್ತಮ, ಪ್ರಚಾರ ಸಮಿತಿಯ ಪ್ರಮುಖ ರವಿ ಅಪ್ಪುಕುಟ್ಟನ್ ಹಾಗೂ ಮನೋರಂಜನ್ ಉಪಸ್ಥಿತರಿದ್ದರು.