ಗೋಣಿಕೊಪ್ಪಲು, ಅ. 14: ಪೊನ್ನಂಪೇಟೆ ಪದವಿಪೂರ್ವ ಕಾಲೇಜು ಟರ್ಫ್ ಮೈದಾನದಲ್ಲಿ ಹಾಕಿಕೂರ್ಗ್ ವತಿಯಿಂದ ನಡೆಯುತ್ತಿರುವ ಬಿ. ಡಿವಿಷನ್ ಹಾಕಿ ಲೀಗ್‍ನ 4 ನೇ ದಿನದ ಪಂದ್ಯದಲ್ಲಿ 6 ತಂಡಗಳು ಜಯಗಳಿಸಿತು.

ಯುನೈಟೆಡ್ ಸ್ಪೋಟ್ರ್ಸ್ ಕ್ಲಬ್ ಜೂನಿಯರ್ ತಂಡವು ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್ ತಂಡವನ್ನು 3-1 ಗೋಲುಗಳಿಂದ ಮಣಿಸಿತು. 13 ಹಾಗೂ 26 ನೇ ನಿಮಿಷದಲ್ಲಿ ಭರತ್, 28 ರಲ್ಲಿ ಪೂವಯ್ಯ, ಪೊನ್ನಂಪೇಟೆ ಪರ 32 ಪೊನ್ನಣ್ಣ 1 ಗೋಲು ಹೊಡೆದರು.

ಪೊದ್ದ್‍ಮಾನಿ ಬ್ಲೂಸ್ಟಾರ್ ತಂಡವು ಅಮ್ಮತ್ತಿ ಸ್ಪೋಟ್ರ್ಸ್ ಕ್ಲಬ್ ವಿರುದ್ದ 2-0 ಗೋಲುಗಳ ಜಯ ಪಡೆಯಿತು. ಪೊದ್ದ್‍ಮಾನಿ ಪರ 41 ರಲ್ಲಿ ಪೊನ್ನಣ್ಣ, 45 ರಲ್ಲಿ ನಿತಿನ್ ಗೋಲು ಹೊಡೆದರು.

ಕಿರುಂದಾಡ್ ತಂಡ ಗುಂಡ್ಯತಯ್ಯಪ್ಪ ತಂಡವನ್ನು 3-1 ಗೋಲುಗಳಿಂದ ಮಣಿಸಿತು. ಕಿರುಂದಾಡ್ ಪರ 6 ರಲ್ಲಿ ವಿನು, 39 ರಲ್ಲಿ ಪ್ರಜ್ವಲ್, 41 ರಲ್ಲಿ ಕುಟ್ಟಪ್ಪ, ಅಯ್ಯಪ್ಪ ಪರ 4 ರಲ್ಲ್ಲಿ ಪೆಮ್ಮಯ್ಯ ಗೋಲು ಹೊಡೆದರು.

ವೀರಾಜಪೇಟೆ ಕೊಡವ ಸಮಾಜ ತಂಡವು ಕಾಲ್ಸ್ ತಂಡದ ವಿರುದ್ದ 4-0 ಗೋಲುಗಳಿಂದ ಗೆಲುವು ಪಡೆಯಿತು. ಔಇರಾಜಪೇಟೆ ಪರ 5 ನೇ ನಿಮಿಷದಲ್ಲಿ ಮಾಚಯ್ಯ, 9, 14 ನೇ ನಿಮಿಷದಲ್ಲಿ ಗಣಪತಿ, 18 ರಲ್ಲಿ ಸಚಿನ್ ಗೋಲು ಬಾರಿಸಿದರು.

ಬಲಮುರಿ ತಂಡವು ಡ್ರಿಬ್‍ಲ್ ಹೆಂಪ್ ತಂಡವನ್ನು 3-0 ಗೋಲುಗಳಿಂದ ಸೋಲಿಸಿತು. 3 ರಲ್ಲಿ ಮುತ್ತಣ್ಣ, 14 ರಲ್ಲಿ ಚರಣ್ ಹಾಗೂ 40 ರಲ್ಲಿ ಅಪ್ಪಣ್ಣ ಗೋಲು ಹೊಡೆದರು.

ಮರ್ಕರಾ ತಂಡವು ಮಲೆನಾಡ್ ವಿರುದ್ದ 7-2 ಗೋಲುಗಳ ಮೂಲಕ ಭರ್ಜರಿ ಗೆಲುವು ದಾಖಲಿಸಿತು. ಮರ್ಕರಾ ಪರ ಲಿತೇಶ್ ಬಿದ್ದಪ್ಪ 4, 10, 37, 41, 48 ನೇ ನಿಮಿಷಗಳಲ್ಲಿ 5 ಗೋಲು ಹೊಡೆದರು. ಬೋಪಣ್ಣ 17 ಹಾಗೂ 20 ನೇ ನಿಮಿಷಗಳಲ್ಲಿ 2 ಗೋಲು ಹೊಡೆದರು. ಮಲೆನಾಡ್ ಪರ 16 ನೇ ನಿಮಿಷದಲ್ಲಿ ಆದರ್ಶ್, 44 ರಲ್ಲಿ ನೀಲ್ ಗಣಪತಿ ಗೋಲು ಹೊಡೆದರು.