ಮಡಿಕೇರಿ, ಅ. 15: ಕೊಡಗಿನ ಕಾಲೇಜು ಕೊಡವ ಯುವಕರ ಕ್ರೋಡನಾಡ್ ಕೊಡವ ಮಕ್ಕ ಎಂಬ ಯುವ ಸಂಘಟನೆಗೆ ತಾ. 19ರಂದು ಚಾಲನೆ ದೊರೆಯಲಿದೆಂದು ಸಂಘಟನೆಯ ಅಧ್ಯಕ್ಷ ಕೆ. ರಂಜನ್ ಮಂದಣ್ಣ ಪ್ರಕಟಣೆÉಯಲ್ಲಿ ತಿಳಿಸಿದ್ದಾರೆ.ಕೊಡಗಿನಲ್ಲಿ ಮೆರೆಯಾಗುತಿರುವ ಕೊಡವ ಸಾಹಿತ್ಯ, ಸಂಸ್ಕ್ರತಿ, ಆಚಾರ ವಿಚಾರ, ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಹಾಗೂ ಒಗ್ಗಟ್ಟನ್ನು ಮೂಡಿಸಲು ಕ್ರೋಡನಾಡ್ ಕೊಡವ ಮಕ್ಕ ಎಂಬ ಯುವ ಸಂಘಟನೆಯನ್ನು ಪ್ರಾರಂಬಿಸುತಿದ್ದೇವೆಂದು ತಿಳಿಸಿದ್ದಾರೆ. ತಾ. 19ರಂದು ಪೂರ್ವಾಹ್ನ 10 ಗಂಟೆಗೆ ವೀರಾಜಪೇಟೆಯ ಟೌನ್ ಹಾಲ್‍ನಲ್ಲಿ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕೊಡಗು ಜಿಲ್ಲಾ ಪತ್ರಕರ್ತ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ವಿಜಯಕರ್ನಾಟಕ ಜಿಲ್ಲಾ ವರದಿಗಾರ ಐತಿಚಂಡ ರಮೇಶ್ ಉತ್ತಪ್ಪ ಹಾಗೂ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಪಾಲ್ಗೊಳ್ಳಲಿರುವರು.

ಹೆಚ್ಚಿನ ವಿವರಗಳಿಗೆ 9845432590, 8197626184, 7760688862 ಸಂಪರ್ಕಿಸಬಹುದು.