ಭಗಂಡೇಶ್ವರ ದೇವಾಲಯದಲ್ಲಿ ಇಂದು ತುಲಾ ಸಂಕ್ರಮಣದಲ್ಲಿ ಕಾವೇರಿ ಮಾತೆಗೆ ತೊಡಿಸುವ ಚಿನ್ನಾಭರಣವನ್ನು ತಲಕಾವೇರಿಗೆ ಮೆರವಣಿಗೆಯಲ್ಲಿ ಕೊಂಡೊಯ್ಯ ಲಾಯಿತು. ದೇವಾಲಯದ ಆಡಳಿತಾಧಿಕಾರಿಯವರಿಂದ ತಕ್ಕರಾದ ಕೋಡಿ ಮೋಟಯ್ಯ ಪಡೆದುಕೊಂಡು ಭಾಗಮಂಡಲ ದೇವಾಲಯದಲ್ಲಿ ಆಭರಣಗಳಿಗೆ ವಿಶೇಷ ಪೂಜೆ ನೆರವೇರಿಸಿದರು.

ನಂತರ ದೇವಾಲಯದಿಂದ ಚಂಡೆ ವಾದ್ಯದೊಂದಿಗೆ ಮೆರವಣಿಗೆ ಮೂಲಕ ಮಾರುಕಟ್ಟೆ ಬಳಿಗೆ ತೆರಳಿ ನಂತರ ಕೈಲಾಸ ಆಶ್ರಮದ ಬಳಿಯಿಂದ ತಲಕಾವೇರಿಗೆ ಸಾಗಿ ತಲಕಾವೇರಿಯಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ತುಲಾಮಾಸ ದಲ್ಲಿ ಒಂದು ತಿಂಗಳ ಕಾಲ ಈ ಆಭರಣವನ್ನು ಕಾವೇರಿ ಮಾತೆಗೆ ತೊಡಿಸಲಾಗುತ್ತಿದ್ದು ನವೆಂಬರ್ 17ರ ನಂತರ ಆಡಳಿತಾಧಿಕಾರಿಗೆ ಹಿಂತಿರುಗಿಸಲಾಗುವದು. ಮೆರವಣಿಗೆ ಯಲ್ಲ್ಲಿ ಭಾಗಮಂಡಲ ಗೌಡ ಸಮಾಜ ಕೊಡಗು ಗೌಡ ಸಮಾಜದ ಒಕ್ಕೂಟದ ಪದಾಧಿಕಾರಿ ಗಳು , ಕೊಡಗು ಗೌಡ ಸಮಾಜದ ಸದಸ್ಯರು, ಕೊಡಗು - ಬೆಂಗಳೂರು ಗೌಡ ಸಮಾಜದ ಸದಸ್ಯರು, ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜದ ಪದಾಧಿಕಾರಿಗಳು ಗೌಡ ನಿವೃತ್ತ ನೌಕರರ ಸಂಘ, ಮಾಜಿ ಸೈನಿಕರ ಸಂಘ, ಕುಶಾಲನಗರ ಮತ್ತು ಸೋಮವಾರಪೇಟೆ ಗೌಡ ಸಮಾಜದ ಸದಸ್ಯರು, ಶ್ರೀಮಂಗಲ, ಯುವ ವೇದಿಕೆ, ವಿದ್ಯಾಸಂಸ್ಥೆಯ ಮಹಿಳಾ ಒಕ್ಕೂಟ, ಗುಡ್ಡಮನೆ ಅಪ್ಪಯ್ಯ ಸ್ಮಾರಕ ಸಮಿತಿ, ಮರಗೋಡು ಗೌಡ ಸಮಾಜದ ಪದಾಧಿಕಾರಿಗಳು ಭಾಗವಹಿಸಿ ಮೆರವಣಿಗೆಯಲ್ಲಿ ಶೋಭೆ ತಂದರು.

ತಕ್ಕರಾದ ಬಲ್ಲಡ್ಕ ಅಪ್ಪಾಜಿ, ಸೂರ್ತಲೆ ಸೋಮಣ್ಣ, ಕುದುಪಜೆ ಪಳಂಗಪ್ಪ, ಪೇರಿಯನ ಜಯನಂದ, ಕೆಂಚಪ್ಪನ ಮೋಹನ, ಚಂದ್ರಶೇಖರ, ಕಾವೇರಮ್ಮ ಸೋಮಣ್ಣ, ಕುದುಪಜೆ ಪ್ರಕಾಶ್, ಕುದುಪಜೆ ಗಣೇಶ್, ಎ.ಆರ್.ಮುತ್ತಣ್ಣ, ದಂಬೆಕೋಡಿ ಆನಂದ, ಪೈಕೆರ ಮನೋಹರ್, ಕಟ್ಟೆಮನೆ ಜನಾರ್ಧನ,ಕಾಂಗೀರ ಸತೀಶ್, ಅನಂತರಾಂ, ಇನ್ನಿತರ ಗಣ್ಯರು ಪಾಲ್ಗೊಂಡಿದ್ದರು.

- ಸುನಿಲ್ ಕುಯ್ಯಮುಡಿ