ಮಡಿಕೇರಿ, ಅ. 15: ಪಾಲಿಬೆಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ನಕಲಿ ಚಿನ್ನ ಪತ್ತೆಯಾಗಿದ್ದು, ಸಂಘದ ಆಡಳಿತ ಮಂಡಳಿಯಿಂದ ಈ ಬಗ್ಗೆ ಮುಂದಿನ ಕ್ರಮಕ್ಕಾಗಿ ತಾ. 16 (ಇಂದು) ತುರ್ತು ಸಭೆ ಕರೆದಿರುವದಾಗಿ ವಿಶ್ವಾಸನೀಯ ಮೂಲಗಳಿಂದ ತಿಳಿದು ಬಂದಿದೆ.ಕಳೆದ ಅನೇಕ ವರ್ಷಗಳಿಂದ ಪಾಲಿಬೆಟ್ಟ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕಾರ್ಯನಿರ್ವಹಣಾಧಿ ಕಾರಿಯಾಗಿದ್ದು, ಸೆ. 30 ರಂದು ನಿವೃತ್ತಿ ಹೊಂದಿರುವ ವ್ಯಕ್ತಿಯೊಂದಿಗೆ ನಕಲಿ ಚಿನ್ನ ಅಡವಿಟ್ಟಿರುವ ಮಹಿಳೆಯೊಬ್ಬರ ಸಹಿತ ಸಂಘದ ನಗ ಪರಿವೀಕ್ಷಕರೊಬ್ಬರು ಈ ಕೃತ್ಯದಲ್ಲಿ ಶಾಮೀಲಾಗಿರುವ ಶಂಕೆ ವ್ಯಕ್ತಗೊಂಡಿದೆ.

ಸೆ. 21 ರಂದು ಸಂಘದ ವಾರ್ಷಿಕ ಮಹಾಸಭೆ ನಡೆದಿದ್ದು, ಈ ಸಂದರ್ಭ ನಿವೃತ್ತಿ ಹೊಂದಲಿ ರುವ ಕಾರ್ಯನಿರ್ವಹಣಾಧಿಕಾರಿ ಯೊಂದಿಗೆ ಪ್ರಭಾರ ಅಧಿಕಾರಿ iÉೂಬ್ಬರನ್ನು ನೇಮಿಸಲು ನಿರ್ಧರಿಸಲಾಗಿದೆ. ಆ ಮೂಲಕ ಸಂಘದಲ್ಲಿ ಸುಮಾರು ಎರಡು ಸಾವಿರಕ್ಕೂ ಅಧಿಕ ಮಂದಿ ಗಿರವಿ ಇಟ್ಟಿರುವ ಚಿನ್ನಾಭರಣ ಪರಿಶೀಲನೆಗೆ ಕ್ರಮ ಕೈಗೊಳ್ಳಲಾಗಿದೆ.

ಚಿನ್ನಾಭರಣ ತಪಾಸಣೆ ವೇಳೆ ಕೇರಳ ಮೂಲದ ಮಹಿಳೆಯೊಬ್ಬರು ಸುಮಾರು ರೂ. 20 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣವೆಂದು ಇರಿಸಿ ಹಣ ಪಡೆದಿದ್ದು, ಈ ಚಿನ್ನವೆಲ್ಲವೂ ದುಬೈನಿಂದ ಕೇರಳ ಮೂಲಕ ಬಂದಿರುವ ನಕಲಿ ಎಂದು ಸುಳಿವು ಲಭಿಸಿದೆ. ಆ ಮೇರೆಗೆ ನಿವೃತ್ತಿ ಗೊಳ್ಳಲಿದ್ದ ಕಾರ್ಯನಿರ್ವಹಣಾ ಧಿಕಾರಿಗೆ ಆಡಳಿತ ಮಂಡಳಿ ನೋಟೀಸ್ ಜಾರಿಗೊಳಿಸಿದ್ದು, ಸಂಬಂಧಿಸಿದ ಅಧಿಕಾರಿ ಅಚಾತು ರ್ಯದ ಕುರಿತು ತಪ್ಪೊಪ್ಪಿಗೆ ಯೊಂದಿಗೆ ಸಂಬಂಧಪಟ್ಟ ಮಹಿಳೆಯಿಂದ ನಕಲಿ ಚಿನ್ನದ ಬಾಬ್ತು ಹಣವನ್ನು ಸಂಘಕ್ಕೆ ಪಾವತಿಸಿ ಕೊಡುವದಾಗಿ ಕೇಳಿಕೊಂಡ ರೆನ್ನಲಾಗಿದೆ.

ಅಲ್ಲದೆ ಇದೇ ಅಧಿಕಾರಿ ಸಂಬಂಧಪಟ್ಟ ಮಹಿಳೆಯ ಮನೆಗೆ ತೆರಳಿ, ನಕಲಿ ಚಿನ್ನ ಹಿಂಪಡೆದು ಸಂಘಕ್ಕೆ ಹಣ ಪಾವತಿಸುವಂತೆ ಕೇಳಿಕೊಂಡಿದ್ದು, ಆಕೆ ನುಣುಚಿಕೊಳ್ಳಲು

(ಮೊದಲ ಪುಟದಿಂದ) ಯತ್ನಿಸಿದ್ದಾಗಿ ತಿಳಿದು ಬಂದಿದೆ. ಈ ಮಹಿಳೆಯ ವರ್ತನೆಯಿಂದ ಆತಂಕಗೊಂಡ ಕಾರ್ಯನಿರ್ವ ಹಣಾಧಿಕಾರಿ ತನ್ನ ನಿವೃತ್ತಿ ಸೌಲಭ್ಯಕ್ಕೆ ತೊಂದರೆಯಾಗುವ ತಳಮಳ ದೊಂದಿಗೆ ಮಹಿಳೆ ವಿರುದ್ಧ ವಂಚನೆ ಪ್ರಕರಣ ದಾಖಲಿಸಿರು ವದಾಗಿಯೂ ಗೊತ್ತಾಗಿದೆ.

ಇತ್ತ ಆಡಳಿತ ಮಂಡಳಿಯು ಹಿಂದಿನ ನಗ ಪರಿವೀಕ್ಷಕ ಕೂಡ ವಂಚನೆಯಲ್ಲಿ ಶಾಮೀಲಾಗಿರುವ ಬಗ್ಗೆ ಮಾಹಿತಿ ಕಲೆ ಹಾಕಿದ್ದು, ಈ ಸಂದರ್ಭ ಕಾರ್ಯನಿರ್ವಹಣಾಧಿ ಕಾರಿ ತನ್ನಿಂದ ಮೂರು ಹಾಳೆಗಳಿಗೆ ನಗ ಪರಿವೀಕ್ಷಣೆ ಸಲುವಾಗಿ ಮುಂಗಡ ಸಹಿ ಪಡೆದಿರುವದು ಬೆಳಕಿಗೆ ಬಂದಿದೆ.

ಈ ಸಂಗತಿ ಖಾತರಿಗೊಂಡ ಬೆನ್ನಲ್ಲೇ ಪಾಲಿಬೆಟ್ಟ ಕೃಷಿ ಪತ್ತಿನ ಹಿಂದಿನ ನಗ ಪರಿವೀಕ್ಷಕ ಕೂಡ ವಂಚನೆಯಲ್ಲಿ ಶಾಮೀಲಾಗಿರುವ ಬಗ್ಗೆ ಮಾಹಿತಿ ಕಲೆ ಹಾಕಿದ್ದು, ಈ ಸಂದರ್ಭ ಕಾರ್ಯನಿರ್ವಹಣಾಧಿ ಕಾರಿ ತನ್ನಿಂದ ಮೂರು ಹಾಳೆಗಳಿಗೆ ನಗ ಪರಿವೀಕ್ಷಣೆ ಸಲುವಾಗಿ ಮುಂಗಡ ಸಹಿ ಪಡೆದಿರುವದು ಬೆಳಕಿಗೆ ಬಂದಿದೆ.

ಈ ಸಂಗತಿ ಖಾತರಿಗೊಂಡ ಬೆನ್ನಲ್ಲೇ ಪಾಲಿಬೆಟ್ಟ ಕೃಷಿ ಪತ್ತಿನ ಪತ್ತೆಯಾಗಿದ್ದು, ತಪಾಸಣೆ ಮುಂದುವರಿದಿರುವದಾಗಿ ‘ಶಕ್ತಿ’ಗೆ ಸುಳಿವು ಲಭಿಸಿದೆ. ಬಹುಶಃ ಆಮಿಷಕ್ಕೆ ಒಳಗಾಗಿ ಸಂಘಕ್ಕೆ ವಂಚಿಸಲು ಯತ್ನಿಸಿರುವ ಅಧಿಕಾರಿ ಹಾಗೂ ಆಭರಣ ಪರಿವೀಕ್ಷಕ ಸಹಿತ ಕೇರಳ ಮೂಲದ ಮಹಿಳೆ ವಿರುದ್ಧ ಇಂದಿನ (ತಾ.16) ಆಡಳಿತ ಮಂಡಳಿ ಕಾನೂನು ಕ್ರಮ ಜರುಗಿಸಲಿರುವ ಸಾಧ್ಯತೆ ಇದೆ. - ಶ್ರೀಸುತ