ಮಡಿಕೇರಿ, ಅ. 15: ಹಿಂದೂ ಮಲಯಾಳಿ ಸಂಘದ ವತಿಯಿಂದ ಇಂದು ನಗರದಲ್ಲಿ ಸಂಭ್ರಮದ ಓಣಾಘೋಷಂ ಓಣಂ ಸದ್ಯ’ ಕಾರ್ಯಕ್ರಮ ನಡೆಯಿತು.ಈ ಪ್ರಯುಕ್ತ ಸಾವಿರಾರು ಮಂದಿಯನ್ನೊಳಗೊಂಡು ಆಕರ್ಷಕ ಮೆರವಣಿಗೆ ನಡೆಯಿತು. ಮೆರವಣಿಗೆ ಮಲಯಾಳಿ ಬಾಂಧವರು ಸಾಂಪ್ರದಾಯಿಕ ಉಡುಗೆಯಲ್ಲಿ ಪಾಲ್ಗೊಂಡಿದ್ದರು. ಕೇರಳದ ಚಂಡೆವಾದ್ಯ ‘ನೆಲವೆಳಕ್ಕು’ ತೈಯ್ಯಂ ತಂಡ, ಮಾವೇಲಿ ಮಂಟಪ ಮೆರವಣಿಗೆಯಲ್ಲಿ ಕಂಗೊಳಿಸಿದವು. ಮೆರವಣಿಗೆಗೆ ಗುತ್ತಿಗೆದಾರ ಕೆ.ಬಿ. ನಾಗೇಶ್ ಚಾಲನೆ ನೀಡಿದರು.ಕೆಳಗಿನ ಗೌಡ ಸಮಾಜದಲ್ಲಿ ಮಡಿಕೇರಿ, ಅ. 15: ಹಿಂದೂ ಮಲಯಾಳಿ ಸಂಘದ ವತಿಯಿಂದ ಇಂದು ನಗರದಲ್ಲಿ ಸಂಭ್ರಮದ ಓಣಾಘೋಷಂ ಓಣಂ ಸದ್ಯ’ ಕಾರ್ಯಕ್ರಮ ನಡೆಯಿತು.

ಈ ಪ್ರಯುಕ್ತ ಸಾವಿರಾರು ಮಂದಿಯನ್ನೊಳಗೊಂಡು ಆಕರ್ಷಕ ಮೆರವಣಿಗೆ ನಡೆಯಿತು. ಮೆರವಣಿಗೆ ಮಲಯಾಳಿ ಬಾಂಧವರು ಸಾಂಪ್ರದಾಯಿಕ ಉಡುಗೆಯಲ್ಲಿ ಪಾಲ್ಗೊಂಡಿದ್ದರು. ಕೇರಳದ ಚಂಡೆವಾದ್ಯ ‘ನೆಲವೆಳಕ್ಕು’ ತೈಯ್ಯಂ ತಂಡ, ಮಾವೇಲಿ ಮಂಟಪ ಮೆರವಣಿಗೆಯಲ್ಲಿ ಕಂಗೊಳಿಸಿದವು. ಮೆರವಣಿಗೆಗೆ ಗುತ್ತಿಗೆದಾರ ಕೆ.ಬಿ. ನಾಗೇಶ್ ಚಾಲನೆ ನೀಡಿದರು.

ಕೆಳಗಿನ ಗೌಡ ಸಮಾಜದಲ್ಲಿ ಆಕಾಶವಾಣಿ ಕಾರ್ಯನಿರ್ವಾಹಕ ಪಿ. ಬಾಲನ್, ಜ್ಞಾನಗಂಗಾ ಎಜುಕೇಶನಲ್ ಟ್ರಸ್ಟ್ ಚೇರ್‍ಮನ್ ಟಿ.ಕೆ. ಸುಧೀರ್ ಪಾಲ್ಗೊಂಡಿದ್ದರು.

ಇದೇ ಸಂದರ್ಭ ಹತ್ತನೇ ತರಗತಿ ಹಾಗೂ

(ಮೊದಲ ಪುಟದಿಂದ) ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ ಏಳು ಮಂದಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕೇರಳದ ಕನವು ವಲ್ಲವನಾಡ್ ತಂಡದಿಂದ ಗಾನ ಮೇಳ, ಪೂಕಳಂ ಸ್ಪರ್ಧೆ ಹಾಗೂ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು ಮೂಡಿ ಬಂದವು.