*ಗೋಣಿಕೊಪ್ಪಲು, ಅ. 15: ವನವಾಸಿ ಕಲ್ಯಾಣ ಆಶ್ರಮ ಕರ್ನಾಟಕದ ವತಿಯಿಂದ ಹಾತೂರಿನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಮೂರು ದಿನಗಳ ಕಾಲ ಆಯೋಜಿಸಿದ್ದ ರಾಜ್ಯಮಟ್ಟದ ವನವಾಸಿ ಮಾಡ್ರರ್ನ್ ಖೋ-ಖೋ ಸ್ಪರ್ಧೆಯಲ್ಲಿ ಯಾದಗಿರಿ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿತು. ಶನಿವಾರ ನಡೆದ ಪಂದ್ಯದಲ್ಲಿ ಉತ್ತಮವಾಗಿ ಆಡಿದ ಯಾದಗಿರಿ ಜಿಲ್ಲೆಯ ಆಟಗಾರರು ಅಂತಿಮ ಪಂದ್ಯದಲ್ಲಿ ರಾಯಚೂರು ಜಿಲ್ಲೆಯ ವಿರುದ್ಧ ಜಯಗಳಿಸಿದರು. ಇದರಿಂದ ರಾಯಚೂರು ಜಿಲ್ಲೆ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ತೃತೀಯ ಸ್ಥಾನವನ್ನು ಆತಿಥೇಯ ಕೊಡಗು ಜಿಲ್ಲೆ ಪಡೆದುಕೊಂಡಿತು. ಬಿಲ್ಲುಗಾರಿಕೆ ಸ್ಪರ್ಧೆಯ ಸಬ್ ಜೂನಿಯರ್ ಬಾಲಕರ ವಿಭಾಗದಲ್ಲಿ ಲೋಕೇಶ್ ಕಾರಾವಾರ ಪ್ರಥಮ,ಚಂದ್ರಶೇಖರ್ ಶಾಸ್ತ್ರಿ ದ್ವಿತೀಯ, ಮಣಿಕಂಠ ಕೊಡಗು ಹಾಗೂ ಚೇತನ್‍ರಾಮ್ ತೃತೀಯ ಸ್ಥಾನ ಗಳಿಸಿದರು.

ಸಬ್ ಜೂನಿಯರ್ ಬಾಲಕಿಯರ ವಿಭಾಗದಲ್ಲಿ ದಮಯಂತಿ ಕೊಡಗು ಪ್ರಥಮ,ಕನ್ಯಾಕುಮಾರಿ ದ್ವಿತೀಯ, ಜ್ಯೋತಿ ಸಿದ್ದಿ ಶಿರಸಿ ತೃತೀಯ ಸ್ಥಾನ ಪಡೆದರು. ಜೂನಿಯರ್ ಬಾಲಕರ ವಿಭಾಗದಲ್ಲಿ ತೇಜಸ್ವಿ ಮೈಸೂರು ಪ್ರಥಮ, ಗೀತಾ ದ್ವಿತೀಯ ಸ್ಥಾನ ಪಡೆದರು.ಪಿ.ಎ.ಪ್ರಭುಕುಮಾರ್ ಕ್ರೀಡಾಕೂಟ ನಡೆಸಿಕೊಟ್ಟರು.