ಶನಿವಾರಸಂತೆ, ಅ. 15: ಸಮೀಪದ ಹಂಡ್ಲಿ ಸಮೂಹ ಸಂಪನ್ಮೂಲ ಕೇಂದ್ರದ ವಿದ್ಯಾರ್ಥಿಗಳು ಕೂಡಿಗೆಯ ಅಂಜೆಲಾ ವಿದ್ಯಾನಿಕೇತನ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಹಾರೇಹೊಸೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ (1ರಿಂದ 5) ಎಸ್.ಜಿ. ಸೋನಾ, ಮಹಾಂತೇಶ್, ಬಿ.ಎಂ. ಪುಣ್ಯಾ, ಡಿ.ಎನ್. ಕಾಂಚನಾ, ಟಿ.ಎಲ್. ಸ್ನೇಹಾ, ಎಸ್.ಕೆ. ವಿಕಾಸ್ ಹಾಗೂ (6ರಿಂದ 7) ಎಸ್.ಆರ್. ಶಶಾಂಕ್, ಎಸ್.ಪಿ. ಅಕ್ಷತಾ, ಸಿ.ಪಿ. ಅಕ್ಷಿತಾ, ಸಿ.ವೈ. ಡಿಲಾಕ್ಷ, ಡಿ.ಎನ್. ನಿಖಿಲ್, ಸಿ.ಸಿ. ಕೌಶಿಕ್, ಸಾಮೂಹಿಕ ಕೋಲಾಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿರುತ್ತಾರೆ.

ನಿಡ್ತ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಯರಾದ ಹೆಚ್.ವೈ. ರಕ್ಷಿತಾ ಇಂಗ್ಲೀಷ್ ಕಂಠಪಾಠ ಹಾಗೂ ಎಲ್. ಅಕ್ಷತಾ ಹಿಂದಿ ಕಂಠಪಾಠ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದು, ವಿದ್ಯಾರ್ಥಿನಿಯರಾದ ಕೆ.ಎಲ್. ಅಕ್ಷತತಾ, ಎಚ್.ಆರ್. ದೀಪಿಕಾ, ಎನ್.ಎಸ್. ಕಾವೇರಿ, ಎನ್.ಎಸ್. ಕನ್ಯಾ, ಎಂ.ವಿ. ರಕ್ಷಿತಾ, ಎನ್.ಸಿ. ಭೂಮಿಕಾ ಸಾಮೂಹಿಕ ಜಾನಪದ ನೃತ್ಯದಲ್ಲಿ ಪ್ರಥಮ ಸ್ಥಾನ ಗಳಿಸಿರುತ್ತಾರೆ. ಇವರೆಲ್ಲ ತಾ. 16ರಂದು ಮಡಿಕೇರಿಯ ಸಂತ ಮೈಕಲ್ ಶಾಲೆಯಲ್ಲಿ ನಡೆಯುವ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ರ್ಧೆಯಲ್ಲಿ ಭಾಗವಹಿಸುತ್ತಾರೆ ಎಂದು ಹಂಡ್ಲಿ ಕ್ಲಸ್ಟರ್‍ನ ಸಮೂಹ ಸಂಪನ್ಮೂಲ ವ್ಯಕ್ತಿ ಡಿ.ಎಸ್. ಮಧುಕುಮಾರ್ ತಿಳಿಸಿದ್ದಾರೆ.