ಗೋಣಿಕೊಪ್ಪಲು, ಅ. 15: ಹಾಕಿಕೂರ್ಗ್ ವತಿಯಿಂದ ಪೊನ್ನಂಪೇಟೆ ಪದವಿಪೂರ್ವ ಕಾಲೇಜು ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ಬಿ. ಡಿವಿಷನ್ ಹಾಕಿ ಲೀಗ್‍ನಲ್ಲಿ ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್ ಸೀನಿಯರ್ ತಂಡವು 7 ಗೋಲುಗಳ ಜಯ ಸಾಧಿಸಿ ಸಂಚಲನ ಮೂಡಿಸಿತು.

ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್ ಸೀನಿಯರ್ ತಂಡವು ವೀರಾಜಪೇಟೆ ಎಫ್‍ಎಂಸಿ ವಿರುದ್ಧ 7-0 ಗೋಲುಗಳ ಗೆಲುವು ಪಡೆಯಿತು. 2 ಹಾಗೂ 5 ನೇ ನಿಮಿಷಗಳಲ್ಲಿ ಅಖಿಲ್ 2 ಗೋಲು, 8 ರಲ್ಲಿ ರಕ್ಷಿತ್, 13 ರಲ್ಲಿ ಪೂವಣ್ಣ, 25 ರಲ್ಲಿ ಗೌತಂ, 27 ರಲ್ಲಿ ಗ್ಯಾನ್ ಗಣಪತಿ, 42 ರಲ್ಲಿ ಬಿ. ಎ. ಗಣಪತಿ ತಲಾ ಒಂದೊಂದು ಗೋಲು ಹೊಡೆದರು.

ಎಸ್‍ಎಸ್‍ಕೆ ತಂಡವು 4-0 ಗೋಲುಗಳ ಅಂತರದಿಂದ ಕಾಲ್ಸ್ ವಿರುದ್ಧ ಜಯ ಪಡೆಯಿತು. 27 ಹಾಗೂ 34ನೇ ನಿಮಿಷಗಳಲ್ಲಿ ಗಣೇಶ್, 36 ಹಾಗೂ 38 ನೇ ನಿಮಿಷಗಳಲ್ಲಿ ಅಭಿಷೇಕ್ 2 ಗೋಲು ಹೊಡೆದರು.

ಬೊಟ್ಯತ್‍ನಾಡ್ ತಂಡವು ವೀರಾಜಪೇಟೆ ಎಫ್‍ಎಂಸಿ ವಿರುದ್ಧ 2-0 ಗೋಲುಗಳಿಂದ ಗೆದ್ದು ಬೀಗಿತು. ಬೊಟ್ಯತ್‍ನಾಡ್ ಪರ 6ರಲ್ಲಿ ವಿವೇಕ್, 23ರಲ್ಲಿ ಸಿ.ಪಿ. ಬೋಪಣ್ಣ ಗೋಲು ಹೊಡೆದರು.

ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್ ತಂಡವು ಬೇತು ಯೂತ್ ಕ್ಲಬ್ ತಂಡವನ್ನು 3-1 ಗೋಲುಗಳಿಂದ ಮಣಿಸಿತು. ಪೊನ್ನಂಪೇಟೆ ಪರವಾಗಿ 14ನೇ ನಿಮಿಷದಲ್ಲಿ ತರುಣ್, 20ಕ್ಕೆ ಪುನೀತ್, 23ರಲ್ಲಿ ರಕ್ಷಿತ್ ಗೋಲು ಬಾರಿಸಿದರು. ಬೇತು ಪರ 46 ನೇ ನಿಮಿಷದಲ್ಲಿ ನಾಚಪ್ಪ ಗೋಲು ಹೊಡೆದರು.

ಅಮ್ಮತ್ತಿ ಸ್ಪೋಟ್ರ್ಸ್ ಕ್ಲಬ್ ತಂಡವು ಮೂರ್ನಾಡ್ ಜನರಲ್ ತಿಮ್ಮಯ್ಯ ವಿರುದ್ಧ 2-1 ಗೋಲುಗಳ ಗೆಲುವು ಪಡೆಯಿತು. ಅಮ್ಮತ್ತಿ ಪರ 16ರಲ್ಲಿ ನಾಣಯ್ಯ, 40ರಲ್ಲಿ ಮುಕೇಶ್, ಜ. ತಿಮ್ಮಯ್ಯ ಪರ 6ನೇ ನಿಮಿಷದಲ್ಲಿ ಮಂಜು ಗೋಲು ಬಾರಿಸಿದರು.

ಯುಎಸ್‍ಸಿ ತಂಡವು ಟಾಟಾ ಕಾಫಿ ತಂಡವನ್ನು 3-2 ಗೋಲುಗಳ ಅಂತರದಿಂದ ಸೋಲಿಸಿತು. ಯುಎಸ್‍ಸಿ ಪರ 21ರಲ್ಲಿ ಚಿಟ್ಯಪ್ಪ, 40ರಲ್ಲಿ ವರುಣ್, 43ರಲ್ಲಿ ಬಿಪಿನ್, ಟಾಟಾ ಪರ 32 ಹಾಗೂ 48ರಲ್ಲಿ ಗಣಪತಿ 2 ಗೋಲು ಬಾರಿಸಿದರು.

ಎಸ್‍ಎಸ್‍ಕೆ ತಂಡವು ವೀರಾಜಪೇಟೆ ಕೊಡವ ಸಮಾಜ ವಿರುದ್ಧ 3-0 ಗೋಲುಗಳ ಗೆಲುವು ಪಡೆಯಿತು. 6ರಲ್ಲಿ ಅಬಿಷೇಕ್, 22 ರಲ್ಲಿ ಪುನೀತ್, 47 ರಲ್ಲಿ ಗಣೇಶ್ ಗೋಲು ಹೊಡೆದು ಮಿಂಚಿದರು.

ಸೋಮವಾರ (ಇಂದು) ಬಿ. ಡಿವಿಷನ್‍ನ ಕೊನೆಯ ಲೀಗ್ ಹಂತದ ಪಂದ್ಯಗಳು ನಡೆಯಲಿದ್ದು, 19 ರಿಂದ ಆರಂಭಗೊಳ್ಳಲಿರುವ ಎ. ಡಿವಿಷನ್ ಹಾಕಿ ಲೀಗ್‍ನಲ್ಲಿ 16 ತಂಡಗಳು ಪ್ರಶಸ್ತಿಗಾಗಿ ಸೆಣೆಸಾಟ ನಡೆಸಲಿವೆ.