ಮಡಿಕೇರಿ, ಅ. 15: ಕೊಡವ ಕುಟುಂಬಗಳ ನಡುವಿನ 22 ನೇ ವರ್ಷದ ‘ಕುಲ್ಲೇಟಿರ ಕಪ್’ ಹಾಕಿ ಉತ್ಸವ 2018 ರ ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ನಾಪೋಕ್ಲುವಿನಲ್ಲಿ ಕುಲ್ಲೇಟಿರ ಕುಟುಂಬಸ್ಥರ ನೇತೃತ್ವದದಲ್ಲಿ ನಡೆಯಲಿದೆ. ಇದರ ಅಂಗವಾಗಿ ತಾ. 16 ರಂದು (ಇಂದು) 3 ಗಂಟೆಗೆ ನಗರದ ಕೊಡಗು ಪ್ರೆಸ್‍ಕ್ಲಬ್‍ನಲ್ಲಿ ಬ್ರೋಷರ್ ಹಾಗೂ ಲೋಗೋ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ.

ಕೊಡವ ಹಾಕಿ ಅಕಾಡೆಮಿ, ಹಾಕಿ ಕೊಡಗು ಮತ್ತು ಹಾಕಿ ಕೊಡಗು ತೀರ್ಪುಗಾರರ ಸಂಘದ ಸಹಯೋಗದೊಂದಿಗೆ ನಾಪೋಕ್ಲಿನ ಸರಕಾರಿ ಪ್ರೌಢ ಶಾಲೆಯ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ 2018ರ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಕುಲ್ಲೇಟಿರ ಕುಟುಂಬದ ಪಟ್ಟೆದಾರರಾದ ಕುಲ್ಲೇಟಿರ ಎಸ್. ಮಾದಪ್ಪ ಅವರ ಉಪಸ್ಥಿತಿಯಲ್ಲಿ ಬ್ರೋಷರ್ ಹಾಗೂ ಲೋಗೋ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ.

ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ತು ಸದಸ್ಯರುಗಳಾದ ಶಾಂತೆಯಂಡ ವೀಣಾ ಅಚ್ಚಯ್ಯ, ಮಂಡೆಪಂಡ ಪಿ.ಸುನಿಲ್ ಸುಬ್ರಮಣಿ, ಮೇರಿಯಂಡ ಸಂಕೇತ್ ಪೂವಯ್ಯ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಪಾಲ್ಗೊಳ್ಳುವರು ಎಂದು ಆಯೋಜಕರು ತಿಳಿಸಿದ್ದಾರೆ.

ಹಾಕಿ ಉತ್ಸವ ಸಮಿತಿ ಅಧ್ಯಕ್ಷರಾದ ಕುಲ್ಲೇಟಿರ ಪಿ. ಮಂದಪ್ಪ (ಶಂಭು), ಕಾರ್ಯದರ್ಶಿ ಕುಲ್ಲೇಟಿರ ಜಿ. ನಾಣಯ್ಯ (ಅಜಿತ್), ಸಂಚಾಲಕ ಕುಲ್ಲೇಟಿರ ಅರುಣ ಬೇಬ, ಖಜಾಂಚಿ ಕುಲ್ಲೇಟಿರ ಸಿ. ನಾಚಪ್ಪ (ನಂದ), ಉಪ ಸಮಿತಿ ಸದಸ್ಯರುಗಳಾದ ಕೆ.ಟಿ. ಚಂಗಪ್ಪ, ಕೆ.ಬಿ. ಚಿಣ್ಣಪ್ಪ, ಕೆ.ಪಿ. ಸೋಮಪ್ಪ, ಕೆ.ಎಂ. ತಮ್ಮಯ್ಯ, ಕೆ.ಎಂ. ದೇವಯ್ಯ, ಕೆ.ಎ. ಲೋಕೇಶ್, ಕೆ.ಎ. ಹೇಮ, ಕೆ.ಸಿ. ಯಶೋಧ ಹಾಗೂ ಜ್ಯೋತಿ ನಾಚಪ್ಪ ಉಪಸ್ಥಿತರಿರುವರು.