ಗೋಣಿಕೊಪ್ಪಲು, ಅ. 16: ಕಳೆದ 6 ದಿನಗಳಿಂದ ನಡೆದ ಬಿ. ಡಿವಿಷನ್ ಹಾಕಿ ಲೀಗ್ನ 4 ತಂಡಗಳಾದ ಪೊದ್ದ್ಮಾನಿ ಬ್ಲೂಸ್ಟಾರ್, ಮರ್ಕರಾ ಯುನೈಟೆಡ್, ಕೂಡಿಗೆ ಸ್ಪೋಟ್ರ್ಸ್ ಹಾಸ್ಟೆಲ್ ಹಾಗೂ ಪೊನ್ನಂಪೇಟೆ ಸ್ಪೋಟ್ರ್ಸ್ ಕ್ಲಬ್ ಸೀನಿಯರ್ ಸ್ಥಾನ ಗಿಟ್ಟಿಸಿರುವ ತಂಡಗಳಾಗಿವೆ. ಎ. ಡಿವಿಷನ್ ಹಾಕಿ ಲೀಗ್ಗೆ ಪ್ರವೇಶ ಪಡೆದಿವೆ. ಅಕ್ಟೋಬರ್ 19 ರಿಂದ ಎ. ಡಿವಿಷನ್ ಲೀಗ್ ನಡೆಯಲಿದೆ.ಹಾಕಿಕೂರ್ಗ್ ವತಿಯಿಂದ ಪೊನ್ನಂಪೇಟೆ ಪದವಿಪೂರ್ವ ಕಾಲೇಜು ಟರ್ಫ್ ಮೈದಾನದಲ್ಲಿ ನಡೆದ 6 ನೇ ದಿನದ ಪಂದ್ಯಗಳಲ್ಲಿ ಮರ್ಕರಾ ಯುನೈಟೆಡ್, ಪೊದ್ದ್ಮಾನಿ ಬ್ಲೂಸ್ಟಾರ್, ಜನರಲ್ ತಿಮ್ಮಯ್ಯ, ಡ್ರಿಬ್ಲ್ ಹೆಂಪ್, ವೀರಾಜಪೇಟೆ ಕೊಡವ ಸಮಾಜ, ಎಸ್ಹೆಚ್ಪಿ ಸೀನಿಯರ್ ಹಾಗೂ ಟಾಟಾ ಕಾಫಿ ತಂಡಗಳು ಜಯ ಗಳಿಸಿದವು.
ಡ್ರಿಬ್ಲ್ ಹೆಂಪ್ ತಂಡವು ಕಾಲ್ಸ್ ತಂಡವನ್ನು 3-2 ಗೋಲುಗಳಿಂದ ಸೋಲಿಸಿತು. ಡ್ರಿಬ್ಲ್ ಪರ 8 ರಲ್ಲಿ ನಿಶಾನ್, 18 ರಲ್ಲಿ ದರ್ಶನ್, 32ರಲ್ಲಿ ನೀಲ್ ದೇವಯ್ಯ, ಕಾಲ್ಸ್ ಪರ 2 ನೇ ನಿಮಿಷದಲ್ಲಿ ತಶ್ವಿನ್, 20ರಲ್ಲಿ ಸಿ.ಬಿ. ಪೂವಣ್ಣ ಗೋಲು ಬಾರಿಸಿದರು.
ವೀರಾಜಪೇಟೆ ಕೊಡವ ಸಮಾಜ ತಂಡವು ಬಲಮುರಿ ವಿರುದ್ಧ 2-1 ಗೋಲುಗಳಿಂದ ಜಯ ಪಡೆಯಿತು. ವೀರಾಜಪೇಟೆ ಪರ 18ರಲ್ಲಿ ದಿಲನ್, 22ರಲ್ಲಿ ಗಣಪತಿ, ಬಲಮುರಿ ಪರ 35ರಲ್ಲಿ ಶಶಾಂಕ್ ಅಪ್ಪಣ್ಣ ಗೋಲು ಬಾರಿಸಿದರು.
ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್ ಸೀನಿಯರ್ ತಂಡವು ಬೊಟ್ಯತ್ನಾಡ್ ವಿರುದ್ಧ 3-0 ಗೋಲುಗಳ ಗೆಲುವು ಪಡೆಯಿತು. ಬೊಟ್ಯತ್ ಪರ 7ರಲ್ಲಿ ಗ್ಯಾನ್ ಗಣಪತಿ, 19ರಲ್ಲಿ ಹುಮೈಜ್, 28ನೇ ನಿಮಿಷದಲ್ಲಿ ಪೂವಣ್ಣ ಗೋಲು ಹೊಡೆದರು.
ಟಾಟಾ ಕಾಫಿ ತಂಡವು ಮಲೆನಾಡ್ ವಿರುದ್ಧ 3-2 ಗೋಲುಗಳಿಂದ ಗೆಲುವು ಪಡೆಯಿತು. ಮಲೆನಾಡ್ ಪರ 6 ಹಾಗೂ 18ನೇ ನಿಮಿಷಗಳಲ್ಲಿ ಆದರ್ಶ್ 2 ಗೋಲು ಹೊಡೆದರು. ಟಾಟಾ ಪರ 16ರಲ್ಲಿ ಕೆ. ಎಸ್. ಮಾಚಯ್ಯ, 37ರಲ್ಲಿ ಸುಜಿತ್, 40ರಲ್ಲಿ ಕಿರಣ್ ತಲಾ ಒಂದೊಂದು ಗೋಲು ಬಾರಿಸಿದರು.
ಮರ್ಕರಾ ಯುನೈಟೆಡ್ ತಂಡವು ಟಾಟಾ ಕಾಫಿ ವಿರುದ್ಧ 1 ಗೋಲಿನಿಂದ ಜಯ ಪಡೆಯಿತು. 48 ನೇ ನಿಮಿಷದಲ್ಲಿ ಬೋಪಣ್ಣ ಗೋಲು ಹೊಡೆದು ಗೆಲುವು ತಂದುಕೊಟ್ಟರು.
ಪೊದ್ದ್ಮಾನಿ ಬ್ಲೂಸ್ಟಾರ್ ತಂಡವು 4-0 ಗೋಲುಗಳಿಂದ ಗುಂಡ್ಯತಯ್ಯಪ್ಪ ತಂಡವನ್ನು ಮಣಿಸಿತು. ಪೊದ್ದ್ಮಾನಿ ಪರ 18ರಲ್ಲಿ ಎಂ. ಎಸ್. ಪೊನ್ನಣ್ಣ, 24ರಲ್ಲಿ ಸುಬ್ಬಯ್ಯ, 30ರಲ್ಲಿ ಮಧು, 31ರಲ್ಲಿ ಪೂವಯ್ಯ ಗೋಲು ಬಾರಿಸಿದರು.
ಜನರಲ್ ತಿಮ್ಮಯ್ಯ ತಂಡವು ಕಿರುಂದಾಡ್ ವಿರುದ್ಧ 2-1 ಗೋಲುಗಳಿಂದ ಜಯ ಸಾಧಿಸಿತು. ಕಿರುಂದಾಡ್ ಪರ 10ರಲ್ಲಿ ದಿಲೀಪ್, ಜ. ತಿಮ್ಮಯ್ಯ ಪರ 16ರಲ್ಲಿ ಸಾಜೀರ್, 19ರಲ್ಲಿ ಅಯ್ಯಣ್ಣ ತಲಾ ಒಂದೊಂದು ಗೋಲು ಹೊಡೆದರು.