ನಾಪೋಕ್ಲು, ಅ. 16: ಕೊಡಗು ಹಕ್ಕು ಸಂರಕ್ಷಣಾ ಸಮಿತಿ ನಾಪೋಕ್ಲು ವತಿಯಿಂದ 21ನೇ ವರ್ಷದ ಕಾವೇರಿ ರಥ ಯಾತ್ರೆಯು ತಾ.17 ರಂದು ಪಾಲೂರಿನ ಮಹಲಿಂಗೇಶ್ವರ ದೇವಾಲಯದಿಂದ ಬೆಳಿಗ್ಗೆ 7.30ಕ್ಕೆ ಹೊರಟು ಬೆಟ್ಟಗೇರಿ, ಚೇರಂಬಾಣೆ, ಭಾಗಮಂಡಲ ಮಾರ್ಗವಾಗಿ ಕಾವೇರಿ ಮಾತೆಯ ಪವಿತ್ರ ತೀರ್ಥೊದ್ಭವದಲ್ಲಿ ಪಾಲ್ಗೊಂಡು ಪೂಜಾ ವಿಧಿ ವಿಧಾನಗಳ ಬಳಿಕ ತೀರ್ಥ ಪ್ರಸಾದದೊಂದಿಗೆ ಸಂಜೆ 4 ಗಂಟೆಗೆ ಭಾಗಮಂಡಲದಿಂದ ಪ್ರಾರಂಭಗೊಂಡು ಅಯ್ಯಂಗೇರಿ, ಪುಳಿಕೋಟು , ಪೇರೂರು, ನೆಲಜಿ, ನಾಪೋಕ್ಲು ಈ ಮಾರ್ಗವಾಗಿ ಭಕ್ತ ಸಮುದಾಯಕ್ಕೆ ತೀರ್ಥ ವಿತರಿಸಿದ ಬಳಿಕ ಐತಿಹಾಸಿಕ ಕ್ಷೇತ್ರವಾದ ಪಾಲೂರು ಶ್ರೀ ಸತ್ಯಹರಿಶ್ಚಂದ್ರ ದೇವಾಲಯದ ಬಳಿ ಕಾವೇರಿ ನದಿಯಲ್ಲಿ ತಾಯಿ ಶ್ರೀ ಕಾವೇರಿಮಾತೆಯ ಕಳಸ ವಿಸರ್ಜನೆ ಮಾಡುವದಾಗಿ ಕೊಡಗು ಹಕ್ಕು ಸಂರಕ್ಷಣೆ ಸಮಿತಿಯ ಸಂಚಾಲಕ ಬಿದ್ದಾಟಂಡ ರೋಜಿ ಚಿಣ್ಣಪ್ಪ ತಿಳಿಸಿದ್ದಾರೆ.