ಮಡಿಕೇರಿ, ಅ. 16: ಕೊಡಗು ಮೂಲವಾಗಿದ್ದು, ಅಮೇರಿಕಾದಲ್ಲಿ ನೆಲೆಸಿರುವ ಬಿದ್ದಂಡ ಡಾ. ಪಿ. ಕೃಷ್ಣ ಮಾದಪ್ಪ ಅವರಿಗೆ ಅರ್ಜೆಂಟಿನಾ ಸರಕಾರ ಗ್ಲೋಬಲ್ ಶಾಂತಿದೂತ ಪ್ರಶಸ್ತಿ ನೀಡಿ ಗೌರವಿಸಿದೆ.ಕೃಷ್ಣ ಮಾದಪ್ಪ ಅವರು ಅಮೇರಿಕಾದ ಇನ್‍ಸ್ಟಿಟ್ಯೂಟ್ ಫಾರ್ ಸೈನ್ಸ್, ಸ್ಪಿರಿಚ್ಯುವಾಲಿಟಿ ಮತ್ತು ಸಸ್ಟೈನೆಬಿಲಿಟಿ ಇನ್‍ಸ್ಟಿಟ್ಯೂಟ್‍ನ ಅಧ್ಯಕ್ಷರಾಗಿದ್ದು, ಸಂಶೋಧನೆಗಳು, ಪ್ರಬಂಧ-ಭಾಷಣಗಳ ಮೂಲಕ ಅವರು ನೀಡುತ್ತಿರುವ ಶಾಂತಿ ಮತ್ತು ಸಮನ್ವಯತೆಯ ಸಂದೇಶಗಳಿಂದ ಆಕರ್ಷಿತವಾಗಿರುವ ಅರ್ಜೆಂಟಿನಾ ಸರಕಾರ ಶಾಂತಿ ದೂತ ಪ್ರಶಸ್ತಿ ನೀಡಿದೆ.

ಕೃಷ್ಣ ಮಾದಪ್ಪ ಮತ್ತು ಖ್ಯಾತ ವಿಜ್ಞಾನಿಗಳ ತಂಡವು ವಿಶ್ವದ ಎಲ್ಲೆಡೆಯ ನದಿ, ಸಮುದ್ರ, ಪ್ರಕೃತಿ ಹಾಗೂ ಇತರ ಸೂಕ್ಷ್ಮ ಸಂಶೋಧನೆಗಳನ್ನು ನಡೆಸುತ್ತಾರೆ.