ಮಡಿಕೇರಿ, ಅ. 16: ಕೊಡವ ಸಂಸ್ಕøತಿ- ಪದ್ಧತಿ ವಿಶಿಷ್ಟತೆಯೊಂದಿಗೆ ಅರ್ಥಪೂರ್ಣವೂ ಜನಾಂಗದವರ ಕಷ್ಟಸುಖಕ್ಕೆ ಸ್ಪಂದಿಸುವ ಮಾನವೀಯ ಸಂದೇಶವನ್ನೂ ಒಳಗೊಂಡಿದ್ದು, ಇಂತಹ ಅಪರೂಪದ ಸಂಸ್ಕøತಿ ಬೇರೆಲ್ಲೂ ಕಾಣದು ಈ ಬಗ್ಗೆ ಜನಾಂಗದವರು ಹೆಮ್ಮೆಪಟ್ಟು ಇದನ್ನು ಗೌರವಿಸಿ ಮುಂದುವರಿಸಬೇಕೆಂದು ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೊಂಗಂಡ ಎಸ್. ದೇವಯ್ಯ ಅವರು ಕಿವಿಮಾತು ಹೇಳಿದರು. ನಗರದ ಕೊಡವ ಸಮಾಜದಲ್ಲಿ ನಿನ್ನೆ ನಡೆದ ಶ್ರೀ ಇಗ್ಗುತಪ್ಪ ಕೊಡವಕೇರಿಯ ವತಿಯಿಂದ ನಡೆದ ಕೈಲ್‍ಪೊಳ್ದ್ ಸಂತೋಷಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಸಂಘದ ವತಿಯಿಂದ ನೂತನ ವಾಗಿ ಮರಣನಿಧಿ ಪ್ರಾರಂಭಿಸುವ ಕುರಿತು ಕೈಗೊಂಡ ನಿರ್ಧಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಇದು ಸಂಸ್ಕøತಿಯ ನಡುವಿನ ಒಂದು ಉತ್ತಮ ಸೇವೆಯಾಗಿದೆ. ಸಂಕಷ್ಟದ ಸಮಯದಲ್ಲಿ ಸ್ಪಂದಿಸಲು ಹಿರಿಯರು ಹಿಂದಿನ ಕಾಲದಲ್ಲೇ ನೆರವು ನೀಡುವ ಕೆಲಸವನ್ನು ಹುಟ್ಟು ಹಾಕಿದ್ದಾರೆ ಎಂದರು.

ಪ್ರಸ್ತುತ ಜಿಲ್ಲೆಯಲ್ಲಿ ಹೊರಗಿನಿಂದ ಬಂದು ನೆಲೆ ಕಾಣುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಈ ಬಗ್ಗೆ ಜಾಗೃತಿ ವಹಿಸಬೇಕಾದ ಅವಶ್ಯಕತೆ ಇದ್ದು, ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಸಂಘದ ವತಿಯಿಂದ ನೂತನ ವಾಗಿ ಮರಣನಿಧಿ ಪ್ರಾರಂಭಿಸುವ ಕುರಿತು ಕೈಗೊಂಡ ನಿರ್ಧಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಇದು ಸಂಸ್ಕøತಿಯ ನಡುವಿನ ಒಂದು ಉತ್ತಮ ಸೇವೆಯಾಗಿದೆ. ಸಂಕಷ್ಟದ ಸಮಯದಲ್ಲಿ ಸ್ಪಂದಿಸಲು ಹಿರಿಯರು ಹಿಂದಿನ ಕಾಲದಲ್ಲೇ ನೆರವು ನೀಡುವ ಕೆಲಸವನ್ನು ಹುಟ್ಟು ಹಾಕಿದ್ದಾರೆ ಎಂದರು.

ಪ್ರಸ್ತುತ ಜಿಲ್ಲೆಯಲ್ಲಿ ಹೊರಗಿನಿಂದ ಬಂದು ನೆಲೆ ಕಾಣುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಈ ಬಗ್ಗೆ ಜಾಗೃತಿ ವಹಿಸಬೇಕಾದ ಅವಶ್ಯಕತೆ ಇದ್ದು, ಸಂಕಷ್ಟದಲ್ಲಿ ಬದುಕು ಸಾಗಿಸುತ್ತಿರುವ ವರಿದ್ದು, ಇಂತಹವರಿಗೆ ಸಹಕಾರ ನೀಡಬೇಕು ಎಂದು ಅವರು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಕೇರಿಯ ಅಧ್ಯಕ್ಷೆ ಚೌರೀರ ಕಾವೇರಿ ಪೂಣಚ್ಚ ಅವರು ಎಲ್ಲರೂ ಪ್ರೀತಿ ಭಾವದಿಂದ ಬದುಕಬೇಕು. ಹಣಕ್ಕಿಂತ ಗುಣ ಮುಖ್ಯ ಎಂದರು.

ಸಭಾ ಕಾರ್ಯಕ್ರಮದಲ್ಲಿ ವಿವಿಧ ಸಾಧನೆಗೈದಿರುವ ಕೇರಿಯ ಸದಸ್ಯರಾದ ರೋಟರಿ ರಾಜ್ಯಪಾಲ ಮಾತಂಡ ಸುರೇಶ್ ಚಂಗಪ್ಪ, ಪತ್ರಕರ್ತರಾದ ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಐತಿಚಂಡ ರಮೇಶ್ ಉತ್ತಪ್ಪ, ಜಿಲ್ಲಾ ಪತ್ರಕರ್ತರ ಸಂಘದ ಪ್ರಶಸ್ತಿ, ಕ.ಸಾ.ಪ. ತಾಲೂಕು ಸಮ್ಮೇಳನ ದಲ್ಲಿ ಸನ್ಮಾನಿತರಾದ ಕಾಯಪಂಡ ಶಶಿ ಸೋಮಯ್ಯ, ಗಣರಾಜ್ಯೋತ್ಸವದಲ್ಲಿ ಮಹಿಳಾ ಬೆಟಾಲಿಯನ್ ಅನ್ನು ಮುನ್ನಡೆಸಿದ ಅಜ್ಜೀನಂಡ ಐಶ್ವರ್ಯ ಗಣೇಶ್, ಕೊಡವ ಅಕಾಡೆಮಿಯಿಂದ ಪುಸ್ತಕ ಪ್ರಶಸ್ತಿ ಗಳಿಸಿರುವ ಮೊಣ್ಣಂಡ ಶೋಭಾ ಸುಬ್ಬಯ್ಯ ಅವರನ್ನು ಸನ್ಮಾನಿಸಲಾಯಿತು.

ದೇವರನ್ನು ಸ್ತುತಿಸಿ ಅಕ್ಕಿ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಕ್ರೀಡಾಕೂಟ ನಡೆಸಲಾಯಿತು. ಕ್ರೀಡೆಯನ್ನು ಕೇರಿ ಅಧ್ಯಕ್ಷೆ ಕಾವೇರಿ ಉದ್ಘಾಟಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ಬಲ್ಯಂಡ ಸಿ. ಪ್ರಕಾಶ್, ಕಾರ್ಯದರ್ಶಿ ಬೊಳ್ಳಾರ್‍ಪಂಡ ಲೀಲಾ ಸುಬ್ಬಯ್ಯ, ಖಜಾಂಚಿ ಪಡೆಯಟ್ಟಿರ ಹರೀಶ್, ಪದಾಧಿಕಾರಿಗಳಾದ ಕುಂಚೆಟ್ಟಿರ ಅಯ್ಯಪ್ಪ, ಓಡಿಯಂಡ ದಿನೇಶ್, ಮಾತಂಡ ದಮಯಂತಿ, ಚಂಗಪ್ಪ, ಮುಕ್ಕಾಟಿರ ವಿಮಲಾ ಮುತ್ತಣ್ಣ, ಕಾಯಪಂಡ ಶಶಿ ಸೋಮಯ್ಯ, ಮಂಡೇಡ ಕುಮಾರ್, ನೆರವಂಡ ಬಬೀನಾ ಉಪಸ್ಥಿತರಿದ್ದರು.

ಬಲ್ಯಂಡ ಪ್ರಕಾಶ್ ಸ್ವಾಗತಿಸಿ, ನಿರ್ದೇಶಕ ಪಟ್ಟಮಾಡ ಡಿ. ಪೊನ್ನಪ್ಪ ಕಾರ್ಯಕ್ರಮ ನಿರೂಪಿಸಿದರು. ಮಂಡೇಡ ಕುಮಾರ್ ವಂದಿಸಿದರು.