ಗೋಣಿಕೊಪ್ಪಲು, ಅ. 16: ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವ ವಿದ್ಯಾಲಯದ ಮಟ್ಟದ ಅಂತರ್ ಕಾಲೇಜು ಕ್ರೀಡಾಕೂಟದಲ್ಲಿ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಮೂರು ಬಹುಮಾನ ಪಡೆದುಕೊಂಡಿದೆ. ಖೋಖೋ ಹಾಗೂ ಬಾಸ್ಕೆಟ್‍ಬಾಲ್‍ನಲ್ಲಿ ಬಹುಮಾನ ಪಡೆದುಕೊಂಡಿತು.

ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯ ಮೈದಾನದಲ್ಲಿ ನಡೆದ ಕ್ರೀಡಾಕೂಟದ ಪುರುಷರ ಬಾಸ್ಕೆಟ್ ಬಾಲ್‍ನಲ್ಲಿ ಆತಿಥೇಯ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಚಾಂಪಿಯನ್, ಮೂಡಿಗೆರೆ ತೋಟಗಾರಿಕಾ ಮಹಾವಿದ್ಯಾಲಯ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದೆ.

ಮಹಿಳೆಯರ ಖೋಖೋದಲ್ಲಿ ಶಿವಮೊಗ್ಗ ಕೃಷಿ ಮಹಾವಿದ್ಯಾಲಯ ಚಾಂಪಿಯನ್, ಮೂಡಿಗೆರೆ ತೋಟಗಾರಿಕಾ ಮಹಾ ವಿದ್ಯಾಲಯ ರನ್ನರ್ ಅಪ್, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಮೂರನೇ ಸ್ಥಾನ ಗಿಟ್ಟಿಸಿಕೊಂಡಿತು.

ಪುರುಷರ ಖೋಖೋ ಕ್ರೀಡೆಯಲ್ಲಿ ಶಿವಮೊಗ್ಗ ತೋಟಗಾರಿಕಾ ವಿದ್ಯಾಲಯ ಪ್ರಥಮ, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ದ್ವಿತೀಯ, ಮೂಡಿಗೆರೆ ತೋಟಗಾರಿಕಾ ವಿದ್ಯಾಲಯ 3ನೇ ಸ್ಥಾನ ಪಡೆದುಕೊಂಡಿದೆ.

ಕ್ರೀಡಾಕೂಟವನ್ನು ಹಿರಿಯ ಬಾಸ್ಕೆಟ್‍ಬಾಲ್ ಆಟಗಾರ ಕೆ.ಪಿ. ಬೋಪಣ್ಣ ಉದ್ಘಾಟಿಸಿದರು. ಅತಿಥಿಗಳಾಗಿ ಪೊನ್ನಂಪೇಟೆ ಪೊಲೀಸ್ ಉಪ ನಿರೀಕ್ಷಕ ಮಹೇಶ್ ಉಪಸ್ಥಿತರಿದ್ದರು.

ಸಮಾರೋಪದಲ್ಲಿ ಅರಣ್ಯ ಮಹಾವಿದ್ಯಾಲಯದ ಮುಖ್ಯಸ್ಥ ಡಾ. ಚೆಪ್ಪುಡೀರ ಜಿ. ಕುಶಾಲಪ್ಪ, ಅರಣ್ಯ ಮಹಾವಿದ್ಯಾಲಯ ನೈಸರ್ಗಿಕ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಡಾ. ಜಿ.ಎಂ. ದೇವಗಿರಿ, ಪ್ರೊ. ರಮೇಶ್, ಪೂಣಚ್ಚ, ದೈಹಿಕ ಶಿಕ್ಷಣ ನಿರ್ದೇಶಕ ಕೆ.ಎ. ಈಶ್ವರ್, ಪ್ರೊ. ರಮೇಶ್, ಡಾ. ಜಡೇಗೌಡ, ಬಹುಮಾನ ವಿತರಿಸಿದರು.